ಟೀಂ ಇಂಡಿಯಾ ಮಾಜಿ ಆಟಗಾರ ಎಸ್. ಶ್ರೀಶಾಂತ್, ಆನ್ಫೀಲ್ಡ್ನಲ್ಲಿ ಎಷ್ಟು ಅಗ್ರೆಸಿವ್ ಅನ್ನೋದು ರಲ್ಲರಿಗು ಗೊತ್ತಿರೊ ವಿಷಯ.ಆಟ ಅಡುವ ವೇಳೆ ಎದುರಾಳಿ ಆಟಗಾರರು ತಮ್ಮನ್ನ ಕೆಣಕಿದ್ರೆ,
ಶ್ರೀಶಾಂತ್ ಅವರ ಶೈಲಿಯಲ್ಲಿ ಉತ್ತರಿಸುತ್ತಿದ್ರು.ಆದ್ರೇ, ಶ್ರೀಶಾಂತ್ರ ಈ ವರ್ತನೆ ಕೆಲವೊಮ್ಮೆ ಅತಿರೇಕ ಅನಿಸಿದ್ದು ಇದೆಯಂತೆ.ಇದೇ ರೀತಿಯ ವರ್ತನೆಯಿಂದಾಗಿ ಹರಭಜನ್ ಸಿಂಗ್ರಿಂದ ಕಪಾಳಮೋಕ್ಷ ಮಾಡಿಸಿಕೊಂಡಿದ್ರು.ಈಗ, ಶ್ರಿಶಾಂತ್ ಟೀಂ ಇಂಡಿಯಾ ಮಾಜಿ ಆಟಗಾರ, ಒಮ್ಮೆ ಶ್ರೀಶಾಂತ್ ರಾಹುಲ್ ದ್ರಾವಿಡ್ಗೂ ಬೈದಿದ್ದರು ಎಂಬ ಆರೋಪ ಕೇಳಿಬರುತ್ತಿತ್ತು .
ಟೀಂ ಇಂಡಿಯಾದ ಮಾಜಿ ಮೆಂಟಲ್ ಕಂಡೀಷನಿಂಗ್ ಕೋಚ್ ಪ್ಯಾಡಿ ಅಪ್ಟನ್, ತಾವು ಬರೆದಿರುವ ”ದಿ ಬೇರ್ಫೂಟ್ ಕೋಚ್” ಪುಸ್ತಕದಲ್ಲಿ ಇದನ್ನ ಉಲ್ಲೇಖಿಸಿದ್ದಾರೆ.2013ರ ಐಪಿಎಲ್ನಲ್ಲಿ ರಾಹುಲ್ ದ್ರಾವಿಡ್ ರಾಜಸ್ಥಾನ ರಾಯಲ್ಸ್ ತಂಡದ ನಾಯಕರಾಗಿದ್ರು.ಶ್ರೀಶಾಂತ್ ಕೂಡ ಅದೇ ತಂಡದ ಆಟಗಾರರಾಗಿದ್ರು.ಆದ್ರೆ ಅದೇ ಸೀಸನ್ನ ಪಂದ್ಯವೊಂದರಿಂದ ಕ್ಯಾಪ್ಟನ್ ದ್ರಾವಿಡ್, ಶ್ರೀಶಾಂತ್ರನ್ನ ಡ್ರಾಪ್ ಮಾಡಿದ್ರು.ಇದರಿಂದ ಸಿಟ್ಟಿಗೆದ್ದ ಶ್ರೀಶಾಂತ್ ದ್ರಾವಿಡ್ಗೆ ಮನಬಂದಂತೆ ನಿಂದಿಸಿದ್ರು ಎಂದು ಅಪ್ಟನ್ ಬರೆದುಕೊಂಡಿದ್ದಾರೆ.