ಕೇಂದ್ರದಲ್ಲಿರುವ ಬಿಜೆಪಿಯ ಐದು ವರ್ಷದ ಆಡಳಿತ ಬರೀ ಟ್ರೇಲರ್, ನಿಜವಾದ ಸಿನಿಮಾ ಇನ್ನಷ್ಟೇ ಶುರುವಾಗಬೇಕಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳುವ ಮೂಲಕ ಪಕ್ಷದ ಕಾರ್ಯಕರ್ತರಲ್ಲಿ ಮತ್ತಷ್ಟು ಕುತೂಹಲ ಹುಟ್ಟಿಸಿದ್ದಾರೆ.
ಶನಿವಾರ ಮಾಧ್ಯಮದ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ ಒಂದು ಕನ್‍ಫ್ಯೂಸ್ಡ್ ಪಾರ್ಟಿ, ಅದರಿಂದ ಭಾರತದ ಭವಿಷ್ಯದ ಬದಲಾವಣೆ ಸಾಧ್ಯವಿಲ್ಲ. ಬಿಜೆಪಿ ಮಾತ್ರ ಭಾರತವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಬಲ್ಲದು ಎಂದರಲ್ಲದೇ ಐದು ವರ್ಷದ ಆಡಳಿತ ಬರೀ ಟ್ರೇಲರ್, ಮುಂದೆ ನಿಜವಾದ ಸಿನಿಮಾ ಇರಲಿದೆ ಎಂಬುದಾಗಿಯೂ ಹೇಳಿದರು.
ಕಾಂಗ್ರೆಸ್ ಹಾಗೂ ಅದರ ಮಿತ್ರ ಪಕ್ಷಗಳ ಏಕೈಕ ಗುರಿ ಬಿಜೆಪಿಯನ್ನು ಸೋಲಿಸುವುದಷ್ಟೇ. ಸ್ವಾತಂತ್ರ್ಯ ಬಳಿಕ ಕಾಂಗ್ರೆಸ್ ಸಂಸತ್ತಿನಲ್ಲಿ ಹೀನಾಯ ಎನಿಸಿಕೊಂಡಿದೆ. ಅದು ಅತ್ಯಂತ ಕೆಟ್ಟ ಪರಿಸ್ಥಿತಿಯಲ್ಲಿದೆ.ಕಾಂಗ್ರೆಸ್ ಪ್ರತಿಪಕ್ಷದ ನಾಯಕತ್ವ ವಹಿಸಲೂ ಲಾಯಕ್ಕಿಲ್ಲ ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ.