ಜಮ್ಮು ಕಾಶ್ಮೀರದ ಅನಂತನಾಗ್ ಕ್ಷೇತ್ರದಲ್ಲಿ ಇಂದು ಮತದಾನ ನಡೆಯುತ್ತಿದೆ ಆದರೆ ಅಲ್ಲಿನ ಪುಲ್ವಾಮಾ ಮತಗಟ್ಟೆಯ ಮೇಲೆ ಉಗ್ರರು ಗ್ರಾನೆಟ್ ಎಸೆದಿದ್ದಾರೆ ಎಂದು ಪೊಲೀಸರು ಹೇಳುತ್ತಿದ್ದಾರೆ ,
ಜಮ್ಮುಕಾಶ್ಮೀರದಲ್ಲಿ ಈ ಬಾರಿಯ ಲೋಕಸಭಾ ಚುನಾವಣೆ ವೇಳೆ ನಡೆದ ಮೊದಲ ಭಯೋತ್ಪಾದಕ ದಾಳಿ ಇದಾಗಿದೆ. ಪುಲ್ವಾಮಾದ ರೋಮೂ ಮತಗಟ್ಟೆಯತ್ತ ಉಗ್ರರು ಗ್ರೆನೇಡ್ ತೂರಿದ ಘಟನೆ ನಡೆದಿದೆ. ಆದರೆ ಸ್ಪೋಟದಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಅನಂತನಾಗ್ ಲೋಕಸಭಾ ಕ್ಷೆತ್ರದ ಅನಂತನಾಗ್, ಕುಲ್ಗಾಂ, ಪುಲ್ವಾಮಾ ಮತ್ತು ಶೋಪಿಯಾನ್ ಜಿಲ್ಲೆಗಳ ವ್ಯಾಪ್ತಿ ಹೊಂದಿದೆ. ಭದ್ರತಾ ಕಾರಣಗಳಿಗಾಗಿ ಈ ಕ್ಷೇತ್ರದ ಮತದಾನವನ್ನು ಮೂರು ಹಂತಗಳಲ್ಲಿ ನಡೆಸಲಾಗುತ್ತಿದೆ.