ಚಿತ್ರನಟಿ ರಮ್ಯಾ ವಿರುದ್ಧ ಸುಳ್ಳು ಸುದ್ದಿ ಬಿತ್ತರಿಸಿ ಮಾನ ಹಾನಿ ಮಾಡಿದ ಆರೋಪ ಸಾಬೀತಾದ್ದರಿಂದ ಅವರಿಗೆ 50 ಲಕ್ಷ ರೂ. ಪರಿಹಾರ ನೀಡುವಂತೆ ಏಷ್ಯಾನೆಟ್ ನ್ಯೂಸ್ ನೆಟ್ವರ್ಕ್ ಪ್ರೖೆವೇಟ್ ಲಿಮಿಟೆಡ್ ಹಾಗೂ ಸುವರ್ಣ ನ್ಯೂಸ್ 24×7 ಸುದ್ದಿವಾಹಿನಿಗೆ ನಗರ ಸೆಷನ್ಸ್ ನ್ಯಾಯಾಲಯ ಆದೇಶ ಹೊರಡಿಸಿದೆ.
2013ರಲ್ಲಿ ನಡೆದಿದ್ದ ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ಮತ್ತು ಸ್ಪಾಟ್ ಫಿಕ್ಸಿಂಗ್ ಹಗರಣದಲ್ಲಿ ಅನಗತ್ಯವಾಗಿ ತಮ್ಮ ಹೆಸರು ಸೇರಿಸಿದ್ದ ಸುದ್ದಿವಾಹಿನಿ ತಮ್ಮ ವಿರುದ್ಧ ಅವಹೇಳನಕಾರಿ ಕಾರ್ಯಕ್ರಮ ಪ್ರಸಾರ ಮಾಡಿದ್ದರು, ಇದೇ ವೇಳೆ ಸುದ್ದಿ ಪ್ರಸಾರ ಮಾಡಿದ್ದ ಏಷ್ಯಾನೆಟ್ ನ್ಯೂಸ್ ನೆಟ್ವರ್ಕ್ ಪ್ರೖೆವೇಟ್ ಲಿಮಿಟೆಡ್ ಹಾಗೂ ಸುವರ್ಣ ನ್ಯೂಸ್ 24×7 ವಿರುದ್ದ ನನ್ನ ಚಾರಿತ್ರ್ಯಹರಣ ಮಾಡಿದೆ ಎಂದು ಆರೋಪಿಸಿ ರಮ್ಯಾ ಸಿವಿಲ್ ದಾವೆ ಹೂಡಿದ್ದರು.ಕೋರ್ಟ್ ರಮ್ಯಾಗೆ 50 ಲಕ್ಷ ರೂ. ಪರಿಹಾರ ನೀಡಬೇಕೆಂದು ಆದೇಶ ನೀಡಿದೆ.!