“ಭವಿಷ್ಯದಲ್ಲಿ ಮೋದಿಯ ಭಕ್ತರಾಗಿರುವವರ ಮಕ್ಕಳಿಗೆ ಇಲ್ಲಿದೆ ಹೊಸ ಪದ್ಯ ಎಂದು ಹೇಳುವ ಮೂಲಕ ಮೋದಿ ವಿರುದ್ದ ಹೊಸ ಪದ್ಯವೊಂದನ್ನ ವಿರೋಧ ಪಕ್ಷದವರು ಬಿಡುಗಡೆ ಮಾಡಿದ್ದಾರೆ.
ಬಿಹಾರದಲ್ಲಿ ಲಾಲೂ ಪ್ರಸಾದ್ ಯಾದವ್ ರ ಮಗ ತೇಜಸ್ವಿ ಮುನ್ನಡೆಸುತ್ತಿರುವ ರಾಷ್ಟ್ರೀಯ ಜನತಾ ದಳವು (RJD) ಪ್ರಧಾನಿ ನರೇಂದ್ರ ಮೋದಿ ಅವರನ್ನು ಟ್ರೋಲ್ ಮಾಡಿದೆ, ಈ ದೇಶದ ನರ್ಸರಿ ಓದುವ ಬಹಳಷ್ಟು ಮಕ್ಕಳಿಗೆ ಗೊತ್ತಿರುವ ಫೇಮಸ್ ಇಂಗ್ಲಿಷ್ ಪದ್ಯವೊಂದರ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರನ್ನು ಗೇಲಿ ಮಾಡಲಾಗಿದೆ.
ಮೋದಿ ಮೋದಿ ಯೆಸ್ ಪಾಪ..
ಎನಿ ಡೆವಲಪ್ ಮೆಂಟ್..?
ನೋ ಪಾಪ..
ಫಾರ್ಮರ್ ಹ್ಯಾಪಿ..?
ನೋ ಪಾಪ..
ವುಮನ್ ಸೇಫ್..?
ನೋ ಪಾಪ..
10 ಕ್ರೋರ್ ಜಾಬ್..?
ನೋ ಪಾಪ..
15 ಲ್ಯಾಕ್ಸ್..?
ನೋ ಪಾಪ.. ಓನ್ಲಿ ಜುಮ್ಲಾ..?
ಹ್ಹ ಹ್ಹ ಹ್ಹ..!
ಹೀಗೆ ಹೇಳುವ ಮೂಲಕ ಆರ್ ಜೆಡಿ ಟ್ವೀಟ್ ಮಾಡುವ ಮೂಲಕ ಅಭಿವೃದ್ಧಿ ಆಗಿಲ್ಲ,.. ದೇಶದಲ್ಲಿ ರೈತರು ಖುಷಿಯಾಗಿಲ್ಲ,.. ಮಹಿಳೆಯರು ಸುರಕ್ಷಿತವಾಗಿಲ್ಲ,.. ಹತ್ತು ಕೋಟಿ ಉದ್ಯೋಗ ಸಿಗಲಿಲ್ಲ.., ಹದಿನೈದು ಲಕ್ಷ ಖಾತೆಗೆ ಬರಲಿಲ್ಲ.., ಇದುವರೆಗೂ ಹೇಳಿದ್ದೆಲ್ಲೂ ಬರೀ ಸುಳ್ಳು ಎಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಗೇಲಿ ಮಾಡಿದೆ.