ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ರಾಜ್ಯದ ಬರದ ಬಗ್ಗೆ, ಜನರ ಬಗ್ಗೆ, ಅಭಿವೃದ್ಧಿ ಬಗ್ಗೆ ಯೋಚನೆ ಮಾಡುವುದಕ್ಕಿಂತ ಹೆಚ್ಚಾಗಿ ಮಗನ ಗೆಲುವಿಗಾಗಿ ಟೆಂಪಲ್ ರನ್ ತಮ್ಮ ವಿಶ್ರಾಂತಿಗಾಗಿ ರೆಸಾರ್ಟ್ ವಾಸ್ತವ್ಯದಲ್ಲೇ ಕಾಲ ಕಳೆಯುತ್ತಿದ್ದಾರೆ. ಇದು ಅವರ ಮೇಲೆ ಅಪಾರ ಗೌರವ, ಪ್ರೀತಿ ಇಟ್ಟುಕೊಂಡವರಿಗೆ ಬೇಸರ ತಂದಿದೆ.
ಕಾಪು ರೆಸಾರ್ಟ್ ವಾಸ್ತವ್ಯದ ನಂತರ ದೇವಸ್ಥಾನಗಳನ್ನು ಸುತ್ತಾಡಿ ಬಂದರು. ಈಗ ಮತ್ತೆ ರೆಸಾರ್ಟ್ ಕಡೆಗೆ ಮುಖ ಮಾಡಿದ್ದಾರೆ.
ಮಡಿಕೇರಿಯ ಇಬ್ಬನಿ ರೆಸಾರ್ಟ್ ನಲ್ಲಿ ಕುಮಾರಸ್ವಾಮಿ ಶನಿವಾರದಿಂದ ಎರಡು ದಿನ ವಿಶ್ರಾಂತಿ ಪಡೆಯಲಿದ್ದಾರೆ.
ಇಬ್ಬನಿ ರೆಸಾರ್ಟ್ ನಲ್ಲಿ ಸಿಎಂ 4 ಕೊಠಡಿ ಬುಕ್ ಮಾಡಿದ್ದಾರೆ. ದಿನಕ್ಕೆ ಕೊಠಡಿ ಚಾರ್ಜ್ 40 ಸಾವಿರ ರೂ ಅಂತೆ..! 2 ದಿನದ ವಿಶ್ರಾಂತಿಗೆ ಸಿಎಂ 2 ಲಕ್ಷ ರೂ ಖರ್ಚು ಮಾಡಲಿದ್ದಾರೆ..!
ಈ ರೆಸಾರ್ಟ್ ನ ವಿಶೇಷತೆ , ರೂಂ ಒಳಗೆ ಪ್ರವೇಟ್ ಬಾರ್, ಪ್ರತ್ಯೇಕ ಈಜುಕೊಳ, ಬಾಲ್ಕನಿ, ಜಕೂಜಿ ( ಸ್ಪೆಷಲ್ ವಾಟರ್ ಮಸಾಜ್ ಟಬ್) ಓಪನ್ ಶವರ್ ವ್ಯವಸ್ಥೆ ಇದೆ.
ಕುಮಾರಸ್ವಾಮಿ ಅವರು ಒಳ್ಳೆಯ ನಾಯಕ. ಆದರೆ, ಮಂಡ್ಯ ಲೋಕಸಭಾ ಚುನಾವಣೆ ನಂತರ ಬರೀ ಆ ಕಡೆ ಮಗನ ಗೆಲುವಿಗೇ ಮಾತ್ರ ಯೋಚನೆ ಮಾಡುತ್ತಿದ್ದಾರೆ. ದೇವಸ್ಥಾನ ಮಗನ ಗೆಲುವಿನ ಹರಕೆ ಎಂದು ಇದ್ದರೆ ಯಾವ ಕೆಲಸವೂ ಆಗುತ್ತಿಲ್ಲ.