ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ದ್ವಾರಕನಾಥ್ ಗುರೂಜಿ ಅವರು, ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ, ಹಾಸನದಲ್ಲಿ ಪ್ರಜ್ವಲ್ ರೇವಣ್ಣ ಹಾಗೂ ತುಮಕೂರಿನಲ್ಲಿ ದೇವೇಗೌಡರು ಗೆಲ್ಲಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ. ಮೊದಲು ಮಂಡ್ಯದಲ್ಲಿ ನಿಖಿಲ್ ಗೆಲ್ಲುವುದು ಕಷ್ಟ ಇತ್ತು. ಆದರೆ ನಿಖಿಲ್ ಅವರದೆ ಆದ ಕಸರತ್ತು ಮಾಡಿರೋದ್ರಿಂದ ಗೆಲುವಿಗೆ ಅನುಕೂಲ ಆಗಿದೆ.
ಅವರು ಮಾಡಿದ ಒಳ್ಳೆಯ ಕೆಲಸಕ್ಕೆ ತಕ್ಕ ಪ್ರತಿಫಲ ಸಿಗುತ್ತೆ. ಮೂರು ಕ್ಷೇತ್ರಗಳಲ್ಲೂ ದೇವೆಗೌಡರ ಕುಟುಂಬಸ್ಥರು ಗೆಲುವು ಸಾಧಿಸಲಿದ್ದಾರೆ
ಮೇ 23ರ ನಂತರ ಮತ್ತೆ ಸಿದ್ದರಾಮಯ್ಯ ಸಿಎಂ ಆಗ್ತಾರೆ ಎಂಬ ಹೇಳಿಕೆಗಳ ಕುರಿತು ಪ್ರತಿಕ್ರಿಯಿಸಿದ ದ್ವಾರಕನಾಥ್ ಗುರೂಜಿ, ಅದು ಹೇಗೆ ಸಿದ್ದರಾಮಯ್ಯ ಮತ್ತೆ ಸಿಎಂ ಆಗಲು ಸಾಧ್ಯ? ಕಚ್ಚಾಡಿಕೊಂಡು ಮೈತ್ರಿಯಿಂದ ಹೊರಬಂದರೆ ಕಾಂಗ್ರೆಸ್ಗೆ ಸರ್ಕಾರವನ್ನ ರಚನೆ ಮಾಡಲು ಸಾಧ್ಯವಿಲ್ಲ. ಆದ್ರೆ ಇದೆಲ್ಲವೂ ಅಸಾಧ್ಯ. ಯಾಕೆಂದರೆ ಸಿಎಂ ಕುಮಾರಸ್ವಾಮಿಗೆ ದೇವರ, ಗುರುಗಳ ಅನುಗ್ರಹವಿದೆ. ಸಿಎಂ ಕುಮಾರಸ್ವಾಮಿ ಸರ್ಕಾರ ಬಿದ್ರೆ ನನಗೆ, ಪ್ರಜೆಗಳಿಗೆ ದುಃಖವಾಗುತ್ತದೆ .