ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಡಿ.ಕೆ.ಶಿವಕುಮಾರ್ ನಾನು ವೋಟಿಗಾಗಿ ಕಣ್ಣೀರು ಹಾಕಿಲ್ಲ. ನಿನ್ನೆ ನನಗೆ ದಿವಂಗತ ಸಿ.ಎಸ್.ಶಿವಳ್ಳಿ ಮೇಲಿನ ಅಭಿಮಾನದಿಂದ ಕಣ್ಣೀರು ಬಂದಿತ್ತು. ಆತ ನನ್ನ ಸ್ನೇಹಿತ, ಆತನ ಸೇವೆಯನ್ನು ಮುಂದುವರೆಸಲು ನಾನು ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿದರು.
ನಗರದಲ್ಲಿ ಕಾಂಗ್ರೆಸ್ ರಹಸ್ಯ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ಇಡೀ ರಾಜ್ಯದಿಂದ ನಮ್ಮ ಪಕ್ಷದ ಶಾಸಕರು, ಮಾಜಿ ಸಚಿವರು ಕುಂದಗೋಳಕ್ಕೆ ಆಗಮಿಸಿದ್ದಾರೆ. ಅತ್ಯಂತ ಉತ್ಸಾಹದಿಂದ ಚುನಾವಣೆ ಎದುರಿಸಲು ಸಜ್ಜಾಗಿದ್ದಾರೆ. ಗ್ರಾಮ ಪಂಚಾಯತಿ, ಬೂತ್ ಮಟ್ಟದಲ್ಲಿ ನಮ್ಮ ಕಾರ್ಯಕರ್ತರು ಓಡಾಡಿ ವರದಿ ಕೊಟ್ಟಿದ್ದಾರೆ.
ಎಲ್ಲ ಪಕ್ಷದ ಮತದಾರರು ಶಿವಳ್ಳಿ ಮಾಡಿದ ಕೆಲಸ ಒಪ್ಪಿ, ಶಿವಳ್ಳಿ ಕುಟುಂಬಕ್ಕೆ ಮತ ನೀಡಲು ಕ್ಷೇತ್ರದ ಮತದಾರರು ಆಸಕ್ತಿ ತೋರುತ್ತಿದ್ದಾರೆ. ನಮ್ಮ ಪಕ್ಷ, ಸರ್ಕಾರ ಒಗ್ಗಟ್ಟಿನಿಂದ ಕೆಲಸ ಮಾಡುತ್ತಿದ್ದೇವೆ. ಅವರು ಮಾಡಿದ ಅಭಿವೃದ್ಧಿ ಕೆಲಸಗಳನ್ನು ನಾವು ಮುಂದುವರೆಸಿಕೊಂಡು ಹೋಗುತ್ತೇವೆ. ನಾವು ಯಾರನ್ನೂ ಟೀಕೆ ಟಿಪ್ಪಣಿ ಮಾಡುವ ಅಗತ್ಯವಿಲ್ಲ. ವಿರೋಧ ಪಕ್ಷದ ನಾಯಕರು ಕೆಲವರಿಗೆ ನಮ್ಮ ಜೊತೆ ಮಾತನಾಡದಂತೆ ಒತ್ತಡ ಹಾಕುತ್ತಿದ್ದಾರೆ ಎಂದರು.