ಇತ್ತೀಚೆಗಷ್ಟೇ ಮದುವೆಯಾದ ಐಂದ್ರಿತಾ ರೇ ಕೆಲವು ದಿನಗಳ ಬ್ರೇಕ್ ತೆಗೆದುಕೊಂಡು ಇದೀಗ ಮತ್ತೆ ಚಿತ್ರರಂಗಕ್ಕೆ ಮರಳುವ ಸುದ್ದಿ ನೀಡಿದ್ದಾರೆ. ನೆನಪಿರಲಿ ಪ್ರೇಮ್ ಅಭಿನಯದ ಪ್ರೇಮಂ ಪೂಜ್ಯಂ ಸಿನಿಮಾಗೆ ನಾಯಕಿಯಾಗಿ ಐಂದ್ರಿತಾ ಆಯ್ಕೆಯಾಗಿದ್ದಾರೆ.
ಈ ಮೂಲಕ ಮದುವೆಯಾದ ಬಳಿಕ ಮೊದಲ ಸಿನಿಮಾಗೆ ಸಹಿ ಹಾಕಿದ್ದಾರೆ. ಇದಕ್ಕೂ ಮೊದಲು ಮೇಘನಾ ರಾಜ್ ಕೂಡಾ ಮದುವೆಯಾದ ಹಲವು ದಿನಗಳ ನಂತರ ಸೃಜನ್ ಲೋಕೇಶ್ ಜತೆಗೆ ಹೊಸ ಸಿನಿಮಾ ಒಪ್ಪಿಕೊಂಡ ಸುದ್ದಿ ನೀಡಿದ್ದರು.
ಇದೀಗ ಐಂದ್ರಿತಾ ಸರದಿ. ಮದುವೆಯಾಯಿತು ಎಂದರೆ ಸಿನಿಮಾ ಮಾಡಬಾರದು ಎಂದು ರೂಲ್ಸ್ ಇದೆಯಾ? ಮದುವೆಯಾದ ಮಾತ್ರಕ್ಕೆ ನಟಿಯರ ಬದುಕು ಮುಗಿಯಿತು ಎಂದರ್ಥವಲ್ಲ ಎಂದು ಐಂದ್ರಿತಾ ತಮ್ಮ ಕಮ್ ಬ್ಯಾಕ್ ಬಗ್ಗೆ ಹೇಳಿಕೊಂಡಿದ್ದಾರೆ.