ಬಿಡುಗಡೆಗೂ ಮುನ್ನ ದಾಖಲೆ ಬರೆದ ಡಿ ಬಾಸ್ ಕುರುಕ್ಷೇತ್ರ..!

Date:

ರೆಬಲ್ ಸ್ಟಾರ್ ಅಂಬರಿಶ್, ಚಾಲೆಂಜಿಂಗ್ ಸ್ಟಾರ್ ದರ್ಶನ್, ಅರ್ಜುನ್ ಸರ್ಜಾ, ಕ್ರೇಜಿ ಸ್ಟಾರ್ ರವಿಚಂದ್ರನ್, ಶ್ರೀನಾಥ್, ಲಕ್ಷ್ಮೀ ಸೇರಿದಂತೆ ಬಹುದೊಡ್ಡ ತಾರಾಗಣ ವಿ. ಹರಿಕೃಷ್ಣ ಸಂಗಿತ, ನಾಗಣ್ಣ ನಿರ್ದೇಶನ ಮಾಡಿರುವ ಕುರುಕ್ಷೇತ್ರ ಚಿತ್ರ ಬಿಡುಗಡೆಗೂ ಮುನ್ನ ವಿನೂತನ ದಾಖಲೆಯನ್ನು ಬರೆದಿದೆ.


ದರ್ಶನ್ ಬತ್ತಳಿಕೆಯಲ್ಲಿ ಈಗಾಗಲೇ ಹಲವು ಬಿಗ್ ಬಜೆಟ್​ ಸಿನಿಮಾಗಳಿದ್ದು ಅದರ ನಡುವೆಯೇ ಸಖತ್ ಸೌಂಡ್​ ಮಾಡಿದ್ದು ಪೌರಾಣಿಕ ಕಥೆಯಾಧರಿತ ಸಿನಿಮಾ ‘ಕುರುಕ್ಷೇತ್ರ’.

ಕುರುಕ್ಷೇತ್ರ ಚಿತ್ರ ಅಪಾರ ತಾರಾಗಣವುಳ್ಳ ಬಹುಕೋಟಿ ವೆಚ್ಚದ ಸಿನಿಮಾವಾಗಿದ್ದು ಅದ್ಧೂರಿ ಸೆಟ್ ಹಾಗೂ ಮೇಕಿಂಗ್​ನಿಂದಲೇ ಗಮನ ಸೆಳೆದಿದೆ, ಇದೀಗ ವರಮಹಾಲಕ್ಷೀ ಹಬ್ಬಕ್ಕೆ ಉಡುಗೊರೆಯಾಗಿ ಆಗಸ್ಟ್ 9ರಂದು ಪ್ರಪಂಚದಾದ್ಯಂತ ಸಿನಿಮಾ ತೆರೆಕಾಣ್ತಿದೆ.


ಇಂತಹ ಚಿತ್ರ ಇದೀಗ ರಿಲೀಸ್​ಗೂ ಮುನ್ನವೇ ಚಿತ್ರದ ಹಿಂದಿ ಡಬ್ಬಿಂಗ್ ರೈಟ್ಸ್ ₹9.50 ಕೋಟಿಗೆ ಮಾರಾಟವಾಗಿದ್ದು, ಹೊಸ ದಾಖಲೆ ಬರೆದಿದೆ, ಕನ್ನಡದ ಮಟ್ಟಿಗೆ ಇದೊಂದು ದಾಖಲೆ ಮೊತ್ತ ಆಗಿದ್ದು ಉಳಿದಂತೆ ಕನ್ನಡ ಅವತರಣಿಕೆಯ ಸ್ಯಾಟಲೈಟ್ಸ್ ರೈಟ್ಸ್​ ₹9 ಕೋಟಿಗೆ ಮಾರಾಟವಾಗಿದೆ.

ಆಗಸ್ಟ್ 9ರಂದು ಪ್ರಪಂಚದಾದ್ಯಂತ ದಾಖಲೆ ಮಟ್ಟದ ಥಿಯೇಟರ್​ಗಳಲ್ಲಿ ಚಿತ್ರ ರಿಲೀಸ್ ಆಗ್ತಿದ್ದು ಗಲ್ಲಾಪೆಟ್ಟಿಗೆಯಲ್ಲೂ ದಾಖಲೆ ಬರೆಯೋ ಮುನ್ಸೂಚನೆಯನ್ನು ಕೊಟ್ಟಿದೆ.

Share post:

Subscribe

spot_imgspot_img

Popular

More like this
Related

ನನಗೆ ಈಗಲೇ ಅಧಿಕಾರ ಬೇಕು ಅಂತ ಇಲ್ಲ, ಪಕ್ಷಕ್ಕಾಗಿ ದುಡಿಯುತ್ತೇನೆ: ನಿಖಿಲ್ ಕುಮಾರಸ್ವಾಮಿ

ನನಗೆ ಈಗಲೇ ಅಧಿಕಾರ ಬೇಕು ಅಂತ ಇಲ್ಲ, ಪಕ್ಷಕ್ಕಾಗಿ ದುಡಿಯುತ್ತೇನೆ: ನಿಖಿಲ್...

ಹಿಟ್ಟಿನ ಹುಳಿ ರುಚಿಯನ್ನು ಕಡಿಮೆ ಮಾಡಲು ಕೆಲವು ಪರಿಣಾಮಕಾರಿ ವಿಧಾನ

ಇತ್ತೀಚಿನ ದಿನಗಳಲ್ಲಿ ಹವಾಮಾನ ಬದಲಾವಣೆ ಹಾಗೂ ಫ್ರಿಜ್ ತಾಪಮಾನ ಅಸ್ಥಿರತೆಯಿಂದಾಗಿ ಇಡ್ಲಿ–ದೋಸೆ...

ಚಳಿಗಾಲದಲ್ಲಿ ಆರೋಗ್ಯ ಕಾಪಾಡಲು ಪಿಸ್ತಾಗಳ ಸೇವನೆ ಒಳ್ಳೆಯದು

ಚಳಿಗಾಲದಲ್ಲಿ ಆರೋಗ್ಯ ಕಾಪಾಡಲು ಪಿಸ್ತಾಗಳ ಸೇವನೆ ಒಳ್ಳೆಯದು ಚಳಿಗಾಲದಲ್ಲಿ ಆರೋಗ್ಯದ ಬಗ್ಗೆ ವಿಶೇಷ...

ವಿಧಾನಸಭೆ ಸಭಾಧ್ಯಕ್ಷ ಯು.ಟಿ. ಖಾದರ್ ಅವರಿಗೆ ಸಿಲ್ವರ್ ಎಲಿಫೆಂಟ್ ಪ್ರಶಸ್ತಿ

ವಿಧಾನಸಭೆ ಸಭಾಧ್ಯಕ್ಷ ಯು.ಟಿ. ಖಾದರ್ ಅವರಿಗೆ ಸಿಲ್ವರ್ ಎಲಿಫೆಂಟ್ ಪ್ರಶಸ್ತಿ ಭಾರತ್ ಸ್ಕೌಟ್ಸ್...