ಯಡಿಯೂರಪ್ಪಗೆ ಅಧಿಕಾರ ತಪ್ಪಿಸಲು ಭಾರೀ ಸ್ಕೆಚ್ ! ಯಾರಿಂದ ? ಯಾಕೆ?

Date:

ರಾಜ್ಯ ಬಿಜೆಪಿಯಲ್ಲಿ ಲೋಕಸಭೆ ಚುನಾವಣೆ ಸಮೀಕ್ಷೆ ಬಿಡುಗಡೆ ಬೆನ್ನಲ್ಲೇ‌ ಮತ್ತೆ ಕಿತ್ತಾಟ ಕಾಣಿಸಿಕೊಂಡಿದೆ. ಬಿ.ಎಸ್.ಯಡಿಯೂರಪ್ಪಗೆ ಅಧಿಕಾರ ತಪ್ಪಿಸಲು ತೆರೆಮರೆಯಲ್ಲೇ‌ ನಡೆಯುತ್ತಿದೆ ಸ್ಕೆಚ್? ಎನ್ನುವ ಅನುಮಾನ ವ್ಯಕ್ತವಾಗತೊಡಗಿದೆ.

ಒಂದು‌ ಕಡೆ ರಾಜ್ಯದಲ್ಲಿ ಅಧಿಕಾರಕ್ಕೆ ಬಿಜೆಪಿ ಕಚೇರಿಯಲ್ಲಿ ಸುದರ್ಶನ ಹೋಮ ನಡೆಯುತ್ತಿದ್ದರೆ, ಮತ್ತೊಂದೆ ಚುರುಕು ಪಡೆದ ಭಿನ್ನಮತ ಚಟುವಟಿಕೆ ಭಾರೀ ಪ್ರಮಾಣದಲ್ಲಿ ಕಾಣಿಸಿಕೊಂಡಿದೆ.
ಈ ಬಾರಿ ಭಿನ್ನಮತ ಚಟುವಟಿಕೆಗೆ ಅಖಾಡಕ್ಕೆ ಇಳಿದವರು ಯಾರು? ಅನ್ನೋ ಕುತೂಹಲ ಮೂಡಿದೆ. ಒಂಟಿಯಾದ ಆ ನಾಯಕರಿಂದ ಪರ್ಯಾಯ ನಾಯಕರ ಸೃಷ್ಟಿಗೆ ತಯಾರಿ ನಡೆಯುತ್ತಿದೆಯಂತೆ.

ಬಿಜೆಪಿ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅಖಾಡಕ್ಕೆ ಧುಮುಕಿದ್ದಾರೆ ಎನ್ನಲಾಗಿದೆ.ಚುನಾವಣೆ ಸಮೀಕ್ಷೆಯಲ್ಲಿ ಬಿಜೆಪಿಗೆ ಬಹುಮತ ಲಭ್ಯವಾಗಲಿದೆ. ಇದರಿಂದ‌ ಕೇಂದ್ರದಲ್ಲಿ ಮತ್ತೆ ಮೋದಿ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ. ಇದರಿಂದ ಕರ್ನಾಟಕ ರಾಜ್ಯ ಸರ್ಕಾರದ ಮೇಲೂ ಪರಿಣಾಮ ಬೀರಲಿದೆ.

ಕಾಂಗ್ರೆಸ್ ಶಾಸಕರು ಬಿಜೆಪಿಗೆ ಬಂದ್ರೆ ಬಿಜೆಪಿ ಸರ್ಕಾರ ನಿಶ್ಚಿತವಾಗಿ ರಚನೆ ಆಗುತ್ತದೆ. ಆಗ ಬಿ.ಎಸ್. ಯಡಿಯೂರಪ್ಪ ಮತ್ತೆ ಮುಖ್ಯಮಂತ್ರಿ ಆಗ್ತಾರೆ. ಹೀಗಾಗಿ ಯಡಿಯೂರಪ್ಪಗೆ ಅಧಿಕಾರ ತಪ್ಪಿಸಲು ಮತ್ತೆ ನಡೆಯುತ್ತಿದೆಯಾ ತಯಾರಿ? ಎನ್ನುವ ಮಾತುಗಳು ಕೇಳಿಬರಲಾರಂಭಿಸಿವೆ. ತೆರೆ ಮರೆಯಲ್ಲಿ ಇದ್ದ ಯಡಿಯೂರಪ್ಪ ಬಿ.ಎಲ್. ಸಂತೋಷ್ ಮುಸುಕಿನ ಗುದ್ದಾಟ ಹೊರಗೆ ಕಾಣಿಸಲಾರಂಭಿಸಿದೆ. ಈಗ 40 ಪ್ರಮುಖ ನಾಯಕರನ್ನ ಕರೆದುಕೊಂಡು ಅಂಡಮಾನ್ ಗೆ ಹಾರಿದ್ದಾರೆ ಬಿ.ಎಲ್. ಸಂತೋಷ್.

ಸಿ.ಟಿ.ರವಿ, ನಿರ್ಮಲ್ ಕುಮಾರ್ ಸುರಾನಾ, ಭಾನುಪ್ರಕಾಶ್ ಜೊತೆಗೆ ಎಲ್ಲ ಜಿಲ್ಲೆಯ ಸಂಘಟನಾ ಕಾರ್ಯದರ್ಶಿಗಳು ಅಂಡಮಾನ್‌ಗೆ ತೆರಳಿದ್ದಾರೆ.
ಅಷ್ಟೊಂದು ‌ಪ್ರಮಾಣದ ನಾಯಕರನ್ನ ಅಂಡಮಾನ್‌ಗೆ ಕರೆದೊಯ್ದ ಹಿಂದಿದೆಯಾ ಬಹುದೊಡ್ಡ ಹುನ್ನಾರ? ಎನ್ನುವ ಚರ್ಚೆ ಶುರುವಾಗಿದೆ. ಯಡಿಯೂರಪ್ಪಗೆ ಮುಖ್ಯಮಂತ್ರಿ ಹುದ್ದೆ ತಪ್ಪಿಸಲು ನಡೆಯುತ್ತಿದೆಯಾ ತಯಾರಿ? ಎನ್ನುವ ಪ್ರಶ್ನೆಯೂ ಕೇಳಿಬರತೊಡಗಿದೆ.

Share post:

Subscribe

spot_imgspot_img

Popular

More like this
Related

ಕರಾವಳಿ–ದಕ್ಷಿಣ ಒಳನಾಡಿನಲ್ಲಿ ಮಳೆಯ ಮುನ್ಸೂಚನೆ: ಹವಾಮಾನ ಇಲಾಖೆ

ಕರಾವಳಿ–ದಕ್ಷಿಣ ಒಳನಾಡಿನಲ್ಲಿ ಮಳೆಯ ಮುನ್ಸೂಚನೆ: ಹವಾಮಾನ ಇಲಾಖೆ ಬೆಂಗಳೂರು: ರಾಜ್ಯದ ಹವಾಮಾನದಲ್ಲಿ ಮತ್ತೊಮ್ಮೆ...

ಪಿರಿಯಡ್ಸ್ ಸಮಯದಲ್ಲಿ ಯಾವ ರೀತಿಯ ಆಹಾರಗಳ ಸೇವನೆ ಮಾಡಬೇಕು? ಇಲ್ಲಿದೆ ಉತ್ತರ

ಪಿರಿಯಡ್ಸ್ ಸಮಯದಲ್ಲಿ ಯಾವ ರೀತಿಯ ಆಹಾರಗಳ ಸೇವನೆ ಮಾಡಬೇಕು? ಇಲ್ಲಿದೆ ಉತ್ತರ ಮಹಿಳೆಯರ...

ನನಗೆ ಈಗಲೇ ಅಧಿಕಾರ ಬೇಕು ಅಂತ ಇಲ್ಲ, ಪಕ್ಷಕ್ಕಾಗಿ ದುಡಿಯುತ್ತೇನೆ: ನಿಖಿಲ್ ಕುಮಾರಸ್ವಾಮಿ

ನನಗೆ ಈಗಲೇ ಅಧಿಕಾರ ಬೇಕು ಅಂತ ಇಲ್ಲ, ಪಕ್ಷಕ್ಕಾಗಿ ದುಡಿಯುತ್ತೇನೆ: ನಿಖಿಲ್...

ಹಿಟ್ಟಿನ ಹುಳಿ ರುಚಿಯನ್ನು ಕಡಿಮೆ ಮಾಡಲು ಕೆಲವು ಪರಿಣಾಮಕಾರಿ ವಿಧಾನ

ಇತ್ತೀಚಿನ ದಿನಗಳಲ್ಲಿ ಹವಾಮಾನ ಬದಲಾವಣೆ ಹಾಗೂ ಫ್ರಿಜ್ ತಾಪಮಾನ ಅಸ್ಥಿರತೆಯಿಂದಾಗಿ ಇಡ್ಲಿ–ದೋಸೆ...