ಈ ಬಗ್ಗೆ ಇಂದು ಮೈಸೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ ಮಾಧ್ಯಮದ ಸಹವಾಸವೇ ಡೆಂಜರ್. ಅದಕ್ಕೆ ಅವರಿಂದ ದೂರ ಉಳಿದಿದ್ದೇನೆ ಅಂತ ಅವರು ಬೇಸರ ವ್ಯಕ್ತಪಡಿಸಿದರು. ಇನ್ನು ನಾನು ಇತ್ತಿಚಿಗೆ ಮಾಧ್ಯಮಗಳಿಂದ ಅಂತರ ಕಾಯ್ದುಕೊಂಡಿದ್ದೇನೆ.ನನ್ನಷ್ಟು ಮಾಧ್ಯಮಗಳಿಗೆ ಹತ್ತಿರವಾದ ರಾಜಕಾರಣಿ ದೇಶದಲ್ಲೆ ಇಲ್ಲ, ಆದರೆ ಇತ್ತೀಚಿಗೆ ಕೆಲವರ ಸಹವಾಸ ಸಾಕಾಗಿದೆ ಅಂತ ಹೇಳಿದರು.
ದೃಶ್ಯ ಮಾಧ್ಯಮಗಳಂತು ಅತಿರೇಕ ಮಾಡಿದ್ದಾರೆ. ಅವರು ನೀಡಿರುವ ವರದಿಗಳಿಗೆ ನಾವು ನಿದ್ದೆಯೇ ಮಾಡೋ ಹಂಗಿಲ್ಲ.ಮಂಡ್ಯ ಬಗ್ಗೆ ತಮಗಿಷ್ಟ ಬಂದಂಗೆ ವರದಿ ಮಾಡ್ತಾರೆ.
ಮಾಧ್ಯಮಗಳ ನಡವಳಿಕೆಯಿಂದ ಅವರ ಮೇಲೆ ಇದ್ದ ಭಯವೇ ಹೊರಟು ಹೋಗಿದೆ ಅಂತ ಹೇಳಿದರು. ರಾಜಕಾರಣಿಗಳು ಕಾಮಿಡಿ ಪೀಸ್‌ಗಳಾ. ಏನಂದುಕೊಂಡಿದ್ದೀರಾ ನಮ್ಮನ್ನ. ನಿಮ್ಮ ಕಾರ್ಯಕ್ರಮಗಳಲ್ಲಿ ರಾಜಕಾರಣಗಳನ್ನ ನಿಮ್ಮಿಷ್ಟ ಬಂದಂತೆ ತೋರಿಸಿಕೊಳ್ಳುತ್ತೀರಾ.? ಮಾಧ್ಯಮಗಳ ಕಾರ್ಯಕ್ರಮಗಳ ಬಗ್ಗೆ ಕುಮಾರಸ್ವಾಮಿ ಕೆಂಡಮಂಡಲರಾದರು.