ನಮ್ಮ ಸರ್ಕಾರಕ್ಕೆ ಕನ್ನಡ ಕಳಕಳಿ, ಕನ್ನಡ ಸಿನಿಮಾಗಳ ಬಗೆಗಿನ ಪ್ರೀತಿ ಅವತ್ತು ಸ್ವಲ್ಪ ಜಾಸ್ತೀನೇ ಇತ್ತು. ಆ ಕಡೆ ಮುಖ್ಯಮಂತ್ರಿಗಳೂ ಸದ್ಯದಲ್ಲೇ 300 ಜನತಾ ಥಿಯೇಟರ್ ಕರ್ನಾಟಕದಲ್ಲಿ ನಿರ್ಮಿಸ್ತೀವಿ ಅಂತ ಹೇಳಿಕೆ ಕೊಟ್ಟಿದ್ರು. ಅದೇ ಸಮಯದಲ್ಲಿ ಸರಕಾರದ ರೋಷಾವೇಶ ಹೇಗಿತ್ತೆಂದರೆ.. ಅವತ್ತು ಜನವರಿ 14, 2014..` ಈ ಮಲ್ಟಿಪ್ಲೆಕ್ಸ್ ನವರು ಜನರ ಹಣವನ್ನು ಸಿಕ್ಕಾಪಟ್ಟೆ ಲೂಟಿ ಮಾಡ್ತಿದ್ದಾರೆ. ಇದಕ್ಕೆಲ್ಲಾ ಸದ್ಯದಲ್ಲೇ ಬ್ರೇಕ್ ಹಾಕ್ತೀವಿ. ತಮಿಳುನಾಡಲ್ಲಿ ಹೇಗೆ ಎಲ್ಲಾ ಭಾಷೆಯ ಟಿಕೆಟ್ ಗೆ 120 ರೂಪಾಯಿ ಬೆಲೆ ಇದಿಯೋ, ಹಾಗೇ ಕರ್ನಾಟಕದಲ್ಲೂ ನಿಯಮ ಜಾರಿ ಮಾಡ್ತೀವಿ’ ಅಂತ ತಮ್ಮ ಆಕ್ರೋಶ ಹೊರಹಾಕಿದ್ರು. ಕನ್ನಡ ಸಿನಿಮಾಗಳಿಗೆ ಸುವರ್ಣ ಯುಗ ಆರಂಭವಾಯ್ತು ಅಂತಾನೇ ಎಲ್ಲರೂ ಅನ್ಕೊಂಡ್ರು. ಮಾರನೇ ದಿನ ಪ್ರತಿಷ್ಟಿತ ಇಂಗ್ಲೀಷ್, ಕನ್ನಡ ಪತ್ರಿಕೆಗಳೂ ಈ ಸಂತೋಷದ ವಿಷಯವನ್ನು ಪ್ರಿಂಟ್ ಮಾಡಿದವು. ಆದ್ರೆ ಅದೇನಾಯ್ತೋ ಏನೋ, ಆ ವಿಷಯ ಅಲ್ಲಿಗೇ ತಣ್ಣಗಾಗಿಬಿಡ್ತು. ಅದೇ ವರ್ಷದ ಡಿಸೆಂಬರ್ 26ನೇ ತಾರೀಖು ಅದೇ ಸರಕಾರ, `ಟಿಕೆಟ್ ಬೆಲೆ ಕಮ್ಮಿ ಮಾಡಿಬಿಟ್ರೆ, ಮಲ್ಟಿಪ್ಲೆಕ್ಸ್ ಗಳಲ್ಲಿ ಉತ್ತಮ ಗುಣಮಟ್ಟ ಮತ್ತು ಸೇವೆ ನಿರೀಕ್ಷೆ ಮಾಡೋಕಾಗಲ್ಲ’ ಅಂತ ಯೂ ಟರ್ನ್ ತೆಗೆದುಕೊಂಡ್ತು..! ಅಲ್ಲೀ ತನಕ ಕನ್ನಡ ಸಿನಿಮಾ ಹಾಗೂ ಪ್ರೇಕ್ಷಕನ ಪರ ಬ್ಯಾಟಿಂಗ್ ಮಾಡಿದ ಸರಕಾರ ಇದ್ದಕ್ಕಿದ್ದ ಹಾಗೇ ಮಲ್ಟಿಪ್ಲೆಕ್ಸ್ ಗಳ ಪರ ಬ್ಯಾಟಿಂಗ್ ಮಾಡೋಕೆ ಶುರು ಮಾಡಿಕೊಳ್ತು. ಅಲ್ಲಿಗೆ 120 ರೂಪಾಯಿಗೆ ಮಲ್ಟಿಪ್ಲೆಕ್ಸ್ ನಲ್ಲಿ ಸಿನಿಮಾ ನೋಡೋ ಕನ್ನಡಿಗನ ಆಸೆಗೆ ತಣ್ಣೀರೆರಚಿಬಿಟ್ತು ಸರಕಾರ..!
ಈಗ ಮತ್ತೆ ಈ ಮಲ್ಟಿಪ್ಲೆಕ್ಸ್ ನಲ್ಲಿ 120 ರೂಪಾಯಿ ಟಿಕೆಟ್ ಬೆಲೆ ನಿಗದಿ ಮಾಡಬೇಕು ಅಂತ ಸದ್ದು ಜೋರಾಗಿ ಕೇಳಿಸ್ತಿದೆ. ಇದರ ಸಂಬಂಧ ವಿಶ್ವವಾಣಿ ಪತ್ರಿಕೆ 2016ರ ಫೆಬ್ರವರಿ 25ರಂದು `ಹೌಸ್ ಫುಲ್ ಆದ್ರೆ ವಿಷ ಕುಡೀತಾನೆ ನಿರ್ಮಾಪಕ’ ಅನ್ನೋ ಶೀರ್ಷಿಕೆಯಡಿ ಮಲ್ಟಿಪ್ಲೆಕ್ಸ್ ಗಳು ಕನ್ನಡ ಸಿನಿಮಾನ ಹೇಗೆ ಕೊಲೆ ಮಾಡ್ತವೆ ಅನ್ನೋದರ ಕುರಿತು ಒಂದು ಸವಿಸ್ತಾರವಾದ ಲೇಖನ ಪ್ರಕಟಿಸಿತ್ತು. ಎಲ್ಲಾ ಸಮಸ್ಯೆಗೂ ಪರಿಹಾರ ಸಿಗಬೇಕು ಅಂದ್ರೆ ತಮಿಳುನಾಡಿನ ಮಾದರಿಯಲ್ಲಿ ಮಲ್ಟಿಪ್ಲೆಕ್ಸ್ ಗಳಲ್ಲಿ 120 ರೂಪಾಯಿ ಟಿಕೆಟ್ ಬೆಲೆ ನಿಗದಿ ಪಡಿಸಬೇಕು ಅಂತ ಮನವಿ ಮಾಡಲಾಗಿತ್ತು. ಅದಾಗಿ ಕೆಲವೇ ದಿನಗಳಲ್ಲಿ ಚಲನಚಿತ್ರ ಮಂಡಳಿ ಹಾಗೂ ಟಿಎ ಪೈ ಮ್ಯಾನೇಜ್ಮೆಂಟ್ ಇನ್ಸ್ಟಿಟ್ಯೂಟ್ ಸರ್ಕಾರಕ್ಕೆ ಸಲ್ಲಿಸಿದ ವರದಿಯ ಪ್ರಕಾರ ೨೫% ಕನ್ನಡ ಸಿನಿಮಾ ಪ್ರೇಕ್ಷಕ, ಸಿನಿಮಾ ನೋಡದೇ ಇರೋದಕ್ಕೆ ಪ್ರಮುಖ ಕಾರಣವೇ ಇತಿಮಿತಿಯಿಲ್ಲದ ಟಿಕೆಟ್ ಬೆಲೆ ಅಂತ ಹೇಳಿತ್ತು. ಹಾಗಾಗಿ ಈ ಕೂಗು ವಿಧಾನಸೌಧದವರೆಗೂ ಕೇಳಿತು. ಆ ನಂತರ ನಿರ್ದೇಶಕ ದಯಾಳ್ ಪದ್ಮನಾಭನ್ ಆನ್ ಲೈನ್ ನಲ್ಲಿ ಪಿಟಿಶನ್ ಆರಂಭಿಸಿದ್ರು. ಈಗಾಗಲೇ ವಿಶ್ವವಾಣಿಯ ಲೇಖನ, ಚಿತ್ರರಂಗ ಹಾಗೂ ಜನಸಾಮಾನ್ಯನಲ್ಲಿ ಸಾಕಷ್ಟು ಸದ್ದು ಮಾಡಿದ್ದರಿಂದ ಹಲವು ಆನ್ ಲೈನ್ ಪೇಜ್ ಗಳ ಸಹಾಯದಿಂದಾಗಿ ಪಿಟಿಶನ್ ಗೆ ೪೫ ಸಾವಿರದಷ್ಟು ಜನ ಸಹಿ ಮಾಡಿದ್ರು. ಅವರೆಲ್ಲರ ಬೇಡಿಕೆ ಒಂದೇ ಆಗಿತ್ತು, ` ಮಲ್ಟಿಪ್ಲೆಕ್ಸ್ ಗಳಲ್ಲಿ ಎಲ್ಲಾ ಸಿನಿಮಾ ಟಿಕೆಟ್ ಗಳ ಬೆಲೆ 120 ರೂಪಾಯಿಗೆ ನಿಗದಿಯಾಗಬೇಕು ಅನ್ನೋದು..! ಈ ಸಂಬಂಧ ರಾಜ್ಯ ಚಲನಚಿತ್ರ ಮಂಡಳಿ ಅಧ್ಯಕ್ಷರಾದ ಸಾ.ರಾ.ಗೋವಿಂದು ಹಾಗೂ ನಿರ್ಮಾಪಕ ವೀರೇಶ್ ರವರೂ ಸಹ ನಿಯಮ ಜಾರಿಗೆ ಎಲ್ಲಾ ರೀತಿಯ ಪ್ರಯತ್ನ ಪಡ್ತಿದ್ದಾರೆ.
ಯಾಕೆ 120 ರೂಪಾಯಿ ಆಗ್ಬೇಕು..?
ಈಗ ಮಲ್ಟಿಪ್ಲೆಕ್ಸ್ ಗಳು ಮನಸ್ಸಿಗೆ ಬಂದ ದರದಲ್ಲಿ ಟಿಕೆಟ್ ಮಾರಾಟ ಮಾಡ್ತಿದ್ದಾರೆ. ಒಂದು ದಿನ 150 ರೂಪಾಯಿ ಇದ್ರೆ ಮತ್ತೊಂದು ದಿನ 300, ಮತ್ತೊಂದು ದಿನ 500 ಮತ್ತೊಂದು ದಿನ 700..! ಅದಕ್ಕೆ ಯಾವುದೇ ನಿಯಮಗಳಿಲ್ಲ. ಅದರ ಜೊತೆಗೆ ಕನ್ನಡ ಭಾಷೆಯ ಸಿನಿಮಾಳಿಗೆ ತೆರಿಗೆ ವಿನಾಯಿತಿ ಇರೋದ್ರಿಂದ ಬೇರೆ ಭಾಷೆಯ ಸಿನಿಮಾಗಳಿಗೆ ಹೋಲಿಸಿಕೊಂಡ್ರೆ, ಕನ್ನಡ ಸಿನಿಮಾ ಪ್ರದರ್ಶನದಿಂದ ಮಲ್ಟಿಪ್ಲೆಕ್ಸ್ ಗಳಿಗೆ ಇರುವ ಲಾಭ ಸ್ವಲ್ಪ ಕಮ್ಮಿ. ಆ ಕಾರಣಕ್ಕೆ ಕನ್ನಡ ಸಿನಿಮಾಗಳಿಗೆ ಹೆಚ್ಚಿನ ಶೋಗಳನ್ನೂ ಮಲ್ಟಿಪ್ಲೆಕ್ಸ್ ಗಳು ನೀಡೋದಿಲ್ಲ, ಹಾಗೆಯೇ ಕನ್ನಡ ಸಿನಿಮಾಗಳು ಹೆಚ್ಚು ಓಡಬಾರದು ಎಂಬ ಕಾರಣಕ್ಕೆ ವ್ಯವಸ್ಥಿತವಾಗಿ ಅವುಗಳನ್ನು ಕೊಲೆ ಮಾಡುತ್ತಿವೆ. ಅದರಲ್ಲಿ ಸಾಕ್ಷಿ ಸಮೇತವಾಗಿ ಸಿಕ್ಕಿಬಿದ್ದ ಉದಾಹರಣೆಯೂ ಇದೆ. ಹಾಗಾಗಿ ಎಲ್ಲಾ ಟಿಕೆಟ್ ಬೆಲೆ ಒಂದೇ ಎಂಬಂತೆ ನಿಗದಿ ಮಾಡಿದ್ರೆ, ಮಲ್ಟಿಪ್ಲೆಕ್ಸ್ ಗಳಿಗೆ ಯಾವ ಸಿನಿಮಾ ಓಡಿಸಿದ್ರೂ ಬರುವ ಲಾಭ ಒಂದೇ ಆಗಿರುತ್ತದೆ. ಆ ಕಾರಣಕ್ಕೆ ಅವರೇ ಕನ್ನಡ ಸಿನಿಮಾಗಳನ್ನು ಪ್ರೋತ್ಸಾಹಿಸುತ್ತಾರೆ ಮತ್ತು ಕನ್ನಡ ಸಿನಿಮಾ ಪ್ರೇಕ್ಷಕನು ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡ ಸಿನಿಮಾಗಳನ್ನು ನೋಡ್ತಾನೆ.
ಈಗೇನಾಗಬೇಕು..?
ಈಗ ಈ ಚೆಂಡು ಸರ್ಕಾರದ ಅಂಗಳದಲ್ಲಿದೆ. ಇತ್ತೀಚೆಗೆ ಖಾಸಗಿ ಸುದ್ದಿ ವಾಹಿನಿಯೊಂದರಲ್ಲಿ ದೂರವಾಣಿ ಸಂಭಾಷಣೆ ಮಾಡುತ್ತಿದ್ದ ಮಾನ್ಯ ಸಚಿವರೊಬ್ಬರು, `ನೀವು ಹೇಳ್ತೀರಿ ಅಂತ ತಮಿಳು ನಾಡಿನ ರೀತಿ ಎಲ್ಲಾ ಮಾಡಕ್ಕಾಗಲ್ಲ, ಹಂಗೆಲ್ಲಾ ಮಾಡಿದ್ರೆ ಯಾವ ಮಾಲ್ ಗಳೂ ಬೆಂಗಳೂರಿಗೆ ಬರೋದಿಲ್ಲ’ ಅಂತ ಹೇಳಿಕೆ ಕೊಟ್ರು. ಇದೇ ಸಚಿವರಿಗೆ ತಾವು ಸಚಿವರಾದ ಹೊಸತರಲ್ಲಿ ಮಲ್ಟಿಪ್ಲೆಕ್ಸ್ ಗಳು ಸಿಕ್ಕಾಪಟ್ಟೆ ಲೂಟಿ ಮಾಡ್ತಿವೆ ಅಂತ ಅನಿಸಿತ್ತು. ಆದ್ರೆ ಈಗ ಇದ್ದಕ್ಕಿದ್ದ ಹಾಗೆ ಮಲ್ಟಿಪ್ಲೆಕ್ಸ್ ಪರವಾಗಿ ಬ್ಯಾಟಿಂಗ್ ಮಾಡೋಕೆ ಕಾರಣವೇನು ಅನ್ನೋದೇ ಗೊತ್ತಾಗ್ತಿಲ್ಲ.!
ಚಲನಚಿತ್ರ ಮಂಡಳಿ, ಕನ್ನಡ ಪ್ರೇಕ್ಷಕ, ಕನ್ನಡದ ನಿರ್ಮಾಪಕ ಸೇರಿದಂತೆ ಪ್ರಮುಖರೆಲ್ಲಾ 120 ರೂಪಾಯಿ ಟಿಕೆಟ್ ಆದ್ರೆ ಕನ್ನಡ ಚಿತ್ರರಂಗಕ್ಕೆ ಒಳ್ಳೇ ದಿನಗಳು ಬರುತ್ತೆ ಅಂತ ಒತ್ತಾಯಿಸ್ತಿದ್ದಾರೆ. ಸಾವಿರಾರು ಜನ ಪಿಟಿಶನ್ ಸಹ ಸಹಿ ಮಾಡಿದ್ದಾರೆ. ಚೆನ್ನೈನಲ್ಲಿ ಇದೇ ಮಲ್ಟಿಪ್ಲೆಕ್ಸ್ ಗಳು ಇದೇ ಸೇವೆಯನ್ನು 120 ರೂಪಾಯಿಗೆ ನೀಡಬಹುದು ಅಂತಾದ್ರೆ ಇಲ್ಲಿ ಅದು ಯಾಕೆ ಸಾಧ್ಯವಿಲ್ಲ..? ಈಗ ಸರ್ಕಾರ ಏನು ಮಾಡುತ್ತೆ..? ಜನರ, ಚಿತ್ರರಂಗದ ಪರ ನಿಲ್ಲುತ್ತೋ, ಅಥವಾ ಮಲ್ಟಿಪ್ಲೆಕ್ಸ್ ಗಳ ಬಗೆಗಿನ ಕಾಳಜಿಯೇ ಹೆಚ್ಚಾಗುತ್ತೋ ಅನ್ನೋದೇ ಪ್ರಶ್ನೆ..! ಬಜೆಟ್ ನಲ್ಲಿ ಮಾನ್ಯ ಮುಖ್ಯಮಂತ್ರಿಗಳು ಜನರ, ಚಿತ್ರರಂಗದ ಕೂಗಿಗೆ ಧ್ವನಿಯಾಗಿದ್ದೇ ಆದ್ರೆ ಕನ್ನಡ ಸಿನಿಮಾಗಳಿಗೆ ಒಳ್ಳೇ ಟೈಂ ಬಂತು ಅಂತಾನೇ ಅರ್ಥ..!
POPULAR STORIES :
ಟಿ ಎಸ್ ಯು – ಸೋಷಿಯಲ್ ಮೀಡಿಯಾ ನೀವೂ ಉಪಯೋಗಿಸುವುದಕ್ಕೆ ಪ್ರೋತ್ಸಾಹ ಧನದ ರೂಪದಲ್ಲಿ ನಿಮಗೆ ದುಡ್ಡನ್ನೂ ಕೊಡ್ತಾರೆ..!
ಪ್ರತಿಯೊಬ್ಬರಿಗೂ ಈ ಅನುಭವ ಆಗಿರುತ್ತೆ..! ಆದ್ರೆ ಹೇಳ್ಕಳಕ್ಕಾಗಲ್ಲ, ಬಿಡಕ್ಕಾಗಲ್ಲ..!
ಅವತ್ತು ಗದ್ದೆ ಕೆಲಸ ಮಾಡ್ತಿದ್ದವರು…ಇವತ್ತು ಅಮೆರಿಕದಲ್ಲಿ ಕಂಪನಿ ಸಿಇಓ…!
ಗಂಡ ಸತ್ತರೂ ಅವನ ಮೇಲೆ “ವರದಕ್ಷಿಣೆ ಕಿರುಕುಳದ” ಆರೋಪ..! ಐಪಿಸಿ ಸೆಕ್ಷನ್ 498ಎ ಮಿಸ್ ಯೂಸ್ ಆಗ್ತಿದೆಯೇ..?
ಆ ಸಿನಿಮಾ ರಿಲೀಸ್ ಆಗಿ ಇವತ್ತಿಗೆ 20 ವರ್ಷ..! ಇಪ್ಪತ್ತು ವರ್ಷದ ನಂತರ ಶಾರುಖ್-ಕಾಜೋಲ್ ಮಾತುಕತೆ..
ಭಿಕ್ಷೆ ಹಾಕದ ಆ ಹುಡುಗ ಅದೆಂಥಾ ಕಷ್ಟದಲ್ಲಿದ್ದ ಗೊತ್ತಾ..?! ಪ್ರತ್ಯಕ್ಷವಾಗಿ ಕಂಡರೂ ಪ್ರಮಾಣಿಸಿ ನೋಡ್ಬೇಕು..!
ನಮ್ಮನೆ ಒಂದು ದೇಶ, ಎದುರುಮನೆ ಮತ್ತೊಂದು ದೇಶ..! ಬೆರಗುಗೊಳಿಸುವ ಅಂತರರಾಷ್ಟ್ರೀಯ ಗಡಿಗಳು..
ಇಂಥಾ ಆನೆಯನ್ನೆಲ್ಲಾದರೂ ನೋಡಿದ್ದೀರಾ..? ಚಿಕ್ಕ ವೀಡೀಯೋ ದೊಡ್ಡ ಮೆಸೇಜ್..!