ಕನ್ನಡದ ಖ್ಯಾತ ಕಾಮಿಡಿ ನಟ ಶರಣ್ ವೀಕೆಂಡ್ ವಿತ್ ರಮೇಶ್ ಸೀಸನ್ 4 ರ ಹಾಟ್ ಸೀಟ್ ನಲ್ಲಿ ಕುಳಿತುಕೊಳ್ಳಲಿದ್ದಾರೆ.ಶರಣ್ ವೀಕೆಂಡ್ ವಿತ್ ರಮೇಶ್ ಸಾಧಕರ ಕುರ್ಚಿಯಲ್ಲಿ ಕುಳಿತು ತಮ್ಮ ಜೀವನದ ಮತ್ತಷ್ಟು ವಿಚಾರಗಳನ್ನು ಹಂಚಿಕೊಳ್ಳಲಿದ್ದಾರೆ.
ಚಿತ್ರರಂಗದಲ್ಲಿ ಸುಮಾರು 24ವರ್ಷಗಳಿಂದ ನಿರಂತರ ಸೇವೆಯನ್ನು ಸಲ್ಲಿಸುತ್ತಾ ಬಂದಿರುವ ಶರಣ್ ಅವರನ್ನು ಸಾಧಕರ ಕುರ್ಚಿಯಲ್ಲಿ ನೋಡಲು ಅನೇಕರು ಕಾಯುತ್ತಿದ್ದಾರೆ.
ಶರಣ್ ಸುಮಾರು 100ಕ್ಕು ಹೆಚ್ಚು ಸಿನಿಮಾಗಳಲ್ಲಿ ಸಹಕಲಾವಿದನಾಗಿ, ಕಾಮಿಡಿ ನಟನಾಗಿ ಕಾಣಿಸಿಕೊಂಡಿದ್ದರು ಆದರೆ ‘ರ್ಯಾಂಬೊ’ ಚಿತ್ರದಿಂದ ನಾಯಕನಾಗಿ ಬಡ್ತಿ ಪಡೆದು ಮಿಂಚುತ್ತಿರುವ ಶರಣ್ ಗೆ ಅಧ್ಯಕ್ಷ ಚಿತ್ರ ದೊಡ್ಡ ತಂದುಕೊಟ್ಟಿತ್ತು,
ಇಂತಹ ಶರಣ್ ಇದೀಗ ವೀಕೆಂಡ್ ವಿತ್ ರಮೇಶ್ ನ ಹಾಟ್ ಸೀಟ್ ನಲ್ಲಿ ಕೂತಿದ್ದಾರೆ, ಶರಣ್ ಸಂಚಿಕೆ ಜೂನ್ 9ರಂದು ಪ್ರಸಾರವಾಗುವ ಸಾಧ್ಯತೆ ಇದೆ.