ವಿಶ್ವಕಪ್ ನಲ್ಲಿ ಟೀಮ್ ಇಂಡಿಯಾ ಬ್ಯಾಟ್ಸ್ಮನ್ಗಳ ವೀಕ್ನೆಸ್ ಬಯಲಾಗಿದೆ. ನ್ಯೂಜಿಲೆಂಡ್ ವಿರುದ್ಧ ನಡೆದ ಮೊದಲ ಅಭ್ಯಾಸ ಪಂದ್ಯದಲ್ಲಿ ಟೀಂ ಇಂಡಿಯಾದ ಅಟಗಾರರು ಕ್ರೀಸ್ನಲ್ಲಿ ನಿಲ್ಲಲೂ ಪರದಾಡಿದ್ರು ಅಚ್ಚರಿ ಮೂಡಿಸಿದೆ.
ಕಿವೀಸ್ ಎಡಗೈ ವೇಗಿ ಟ್ರೆಂಟ್ ಬೋಲ್ಟ್ರ ಪೇಸ್ ಮತ್ತು ಸ್ವಿಂಗ್ ಬೌಲಿಂಗ್ಗೆ ನಲುಗಿದ ಕೊಹ್ಲಿ ಬಾಯ್ಸ್ ರನ್ಗಳಿಸೋಕೆ ಸಾಧ್ಯವಾಗದೇ ಪೆವಿಲಿಯನ್ ಪರೇಡ್ ನಡೆಸಿದ್ರು. ರೋಹಿತ್, ಧವನ್, ಕೊಹ್ಲಿ, ರಾಹುಲ್, ಧೋನಿ, ದಿನೇಶ್ ಕಾರ್ತಿಕ್ರಂತಹ ಸ್ಟಾರ್ ಬ್ಯಾಟ್ಸ್ಮನ್ಗಲೂ ಕೂಡ ನ್ಯೂಜಿಲೆಂಡ್ ಬೌಲರ್ಗಳ ದಾಳಿಗೆ ವಿಕೆಟ್ ಒಪ್ಪಿಸಿದ್ರು,
ಈ ಮೂಲಕ ಟೀಮ್ ಇಂಡಿಯಾ ಬ್ಯಾಟ್ಸ್ಮನ್ಗಳು ತಮ್ಮ ವೀಕ್ನೆಸ್ ತೋರಿಸಿಕೊಟ್ರು. ಕಿವೀಸ್ ವಿರುದ್ಧದ ಅಭ್ಯಾಸ ಪಂದ್ಯದ ಮೊದಲ ಸೋಲು, ಮಾಜಿ ವಿಶ್ವ ಚಾಂಪಿಯನ್ನರಿಗೆ ಎಚ್ಚರಿಕೆಯಾಗಿದೆ ಅಲ್ಲದೆ ಈ ಬಾರಿ ವಿಶ್ವಕಪ್ನಲ್ಲಿ ಎಲ್ಲಾ ತಂಡಗಳು ಬಲಿಷ್ಟವಾಗಿರೋದ್ರಿಂದ, ಯಾರು ಗೆಲ್ಲುತ್ತಾರೆ ಅಂತ ಹೇಳೋದು ಕಷ್ಟವಾಗ್ತಿದೆ. ಹೀಗಾಗಿ ಮಾಡಿದ ತಪ್ಪುಗಳನ್ನ ಸರಿಪಡಿಸಿಕೊಂಡು ಟೀಂ ಇಂಡಿಯಾದ ಅಟಗಾರರು ವಿಶ್ವಕಪ್ ಅಭಿಯಾನ ಆರಂಬಿಸಬೇಕಿದೆ.