ಈ ಹಿನ್ನೆಲೆ ಸುಮಲತಾ ಅಂಬರೀಷ್ ಅಂಬಿ ನೆನಪಲ್ಲಿ ಭಾವನಾತ್ಮಪ ಪೋಸ್ಟ್ ಮಾಡಿದ್ದಾರೆ, ‘ಇಷ್ಟು ವರ್ಷಗಳಲ್ಲಿ ಮೊದಲ ಬಾರಿಗೆ ನಿಮ್ಮ ಜನ್ಮದಿನದಂದು ನೀವಿಲ್ಲ, ನೀವು ನಮ್ಮ ಜೊತೆ ಇಲ್ಲಿ ಇರದೆ ಇರಬಹುದು. ಆದರೆ ನನ್ನ ಹಾಗೂ ಅಭಿಷೇಕ್ ಹೃದಯದಲ್ಲಿ ಸದಾ ನೆಲೆಸಿದ್ದೀರಿ. ನಮ್ಮನ್ನು ಆಶೀರ್ವದಿಸುತ್ತಾ..ನಮಗೆ ಮಾರ್ಗದರ್ಶನ ಮಾಡುತ್ತಾ ಇದ್ದೀರಿ’.
‘ನೀವು ನಮ್ಮನ್ನು ಅಲ್ಲಿಂದಲೇ ನಮ್ಮನ್ನು ನೋಡುತ್ತಿದ್ದೀರಿ ಎಂಬ ಖಾತ್ರಿಯಿದೆ. ಅದೇ ನಗುವಿನೊಂದಿಗೆ ಅದೇ ತುಂಟ ಕಣ್ಣುಗಳಲ್ಲಿ ನೋಡುತ್ತಿದ್ದೀರಿ..ನಿಮ್ಮ ಹೃದಯದಲ್ಲಿ ಪ್ರೀತಿಯಿದೆ.ನಿಮ್ಮ ಆತ್ಮ ಆಗ ಹೆಮ್ಮೆ ಪಡುತ್ತಿದೆ ಎಂಬುದು ನನಗೆ ಗೊತ್ತು. ಪ್ರತಿ ಕ್ಷಣ ಕೂಡ ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತಿದ್ದೇವೆ. ಹುಟ್ಟು ಹಬ್ಬದ ಶುಭಾಶಯಗಳು ಮೈ ಲವ್ ‘ ಎಂದು ಮನಮಿಡಿಯುವ ಪೋಸ್ಟ್ ಹಾಕಿದ್ದಾರೆ.