‘ತಮ್ಮ ಗೆದ್ದ ಖುಷಿ ಇಲ್ಲ ಈಗ ಎಲ್ಲವೂ ಯಡಿಯೂರಪ್ಪ ಕೈಯಲ್ಲಿದೆ’ ಎಂದ್ರು ಸಚಿವ ಡಿ ಕೆ ಶಿವಕುಮಾರ್

Must read

ವಿದೇಶ ಪ್ರಯಾಣ ಮುಗಿಸಿಕೊಂಡು ಬಂದ ಡಿಕೆ ಶಿವಕುಮಾರ್ ನಿನ್ನೆ ಬೆಂಗಳೂರಿಗೆ ಬಂದಿದ್ದರು. ನಂತರ ಫಲಿತಾಂಶದ ಬಗ್ಗೆ ಚರ್ಚಿಸಲು ಸಿಎಂ ಕುಮಾರಸ್ವಾಮಿ ಭೇಟಿಗೆ ಆಗಮಿಸಿದರು. ಭೇಟಿಗೂ ಮುನ್ನ ಲೋಕಸಭಾ ಫಲಿತಾಂಶದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು ‘ ಎಲ್ಲಿ ತಪ್ಪಾಗಿದೆ ಅಂತ ಗೊತ್ತಾಗುತ್ತಿಲ್ಲ, ರಾಜ್ಯದಲ್ಲಿ ಖರ್ಗೆ, ದೇವೇಗೌಡರು ಸೋತಿದ್ದು ಆತಂಕವಾಗಿದೆ, ಗೆಲುವು ಸಾಧಿಸಿರುವ ಡಿಕೆ ಸುರೇಶ್ ಒಬ್ಬರೇ ಲೋಕಸಭೆಯಲ್ಲಿ ಏನು ಮಾಡಲು ಸಾಧ್ಯ ಎಂದು ಪ್ರಶ್ನಿಸಿದರು.

ಕಾಂಗ್ರೆಸ-ಜೆಡಿಎಸ್ ನಡುವೆ ಮೈತ್ರಿ ಧರ್ಮ ಪಾಲನೆ ಆಗದ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು ನನ್ನ ಬಾಯಿಗೆ ಬೀಗ ಹಾಕಿಕೊಳ್ಳಲು ಹೇಳಿದ್ದಾರೆ.ಹೀಗಾಗಿ ನಾನು ಯಾರ ವಿರುದ್ಧ ಕೂಡ ಮಾತನಾಡಲ್ಲ, ಈಗ ಎಲ್ಲವೂ ಬಿಎಸ್ ಯಡಿಯೂರಪ್ಪ ಕೈಯಲ್ಲಿದೆ ಎಂದರು.

- Advertisement -spot_img

More articles

- Advertisement -spot_img

Latest article