ವಾರದಲ್ಲಿ ಒಂದು ದಿನ ಹೋಬಳಿ ಮಟ್ಟದಲ್ಲಿ ಸಿಎಂ ಉಳಿದು ಆಡಳಿತ ವೈಖರಿಯನ್ನು ಪರಿಶೀಲಿಸಲಿದ್ದಾರೆ. ಒಂದು ದಿನದ ಹೋಬಳಿ ಮಟ್ಟದ ಆಡಳಿತದಲ್ಲಿ ಬೆಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆವರೆಗೆ ಜನರ ಬಳಿಯೇ ಕುಳಿತು ಅಹವಾಲುಗಳನ್ನು ಸ್ವೀಕರಿಸಲಿದ್ದಾರೆ.
ಈ ಬಾರಿ ಗ್ರಾಮಗಳ ಮನೆಯಲ್ಲಿ ವಾಸ್ತವ್ಯದ ಬದಲು ಅಲ್ಲಿಯ ಶಾಲೆಗಳಲ್ಲಿ ಸಿಎಂ ವಿಶ್ರಾಂತಿ ಪಡೆಯಲಿದ್ದಾರೆ ಎನ್ನಲಾಗಿದೆ. ಬೆಂಗಳೂರಿನಲ್ಲಿದ್ದಾಗ 15 ದಿನಕ್ಕೊಮ್ಮೆ ಮುಂಜಾನೆಯಿಂದ ರಾತ್ರಿ 12ರ ತನಕ ಜನತಾ ದರ್ಶನದಲ್ಲಿ ಸಿಎಂ ಭಾಗಿಯಾಗಲಿದ್ದಾರೆ ಎನ್ನಲಾಗಿದೆ.