ಯಾವ ಆ್ಯಪ್ ನಿದ್ರೆಗೆ ಭಂಗ ತರುತ್ತವೆ.. ಯಾವ ಆಪ್ ನಿದ್ರೆಗೆ ಲಾಲಿ ಹಾಡುತ್ತವೆ ಗೊತ್ತಾ..?

Date:

ಸಾಮಾನ್ಯವಾಗಿ ನಮ್ಮ ಏಕಾಗ್ರತೆಗೆ ಭಂಗ ತರುವ ಮೊಬೈಲ್ ಫೋನ್, ಸರಿಯಾಗಿ ನಿದ್ರೆ ಮಾಡಲು ಸಹಾಯ ಮಾಡುತ್ತದೆಂದರೆ ಅದು ಗುಡ್ ನ್ಯೂಸ್ ಅಲ್ಲದೆ ಬೇರೇನು? ಹೌದು, ಈ ಕೆಲ ಅಪ್ಲಿಕೇಶನ್ಗಳು ನಿಮ್ಮ ನಿದ್ರಾಸಮಸ್ಯೆಗಳಿಗೆ ಪರಿಹಾರವಾಗಬಲ್ಲವು. ಸಾಮಾನ್ಯವಾಗಿ ಮನುಷ್ಯರಿಗೆ ಪ್ರತಿ ರಾತ್ರಿ ನಿರಂತರ 8 ಗಂಟೆಗಳ ನಿದ್ರೆ ಅವಶ್ಯಕ. ನಿದ್ರೆ ಸರಿಯಾಗಲಿಲ್ಲವೆಂದರೆ ಮರು ಬೆಳಗಿನ ಯಾವ ಕಾರ್ಯಗಳೂ ಸರಾಗವಾಗಿ ಸಾಗದು. ನಿದ್ರಾಹೀನತೆಯು ಬಹುದೊಡ್ಡ ಸಮಸ್ಯೆಯಾಗಿದ್ದು, ಅದಕ್ಕೆ ಆದಷ್ಟು ಬೇಗ ಪರಿಹಾರ ಕಂಡುಕೊಳ್ಳುವುದು ಅಗತ್ಯ. ಇದೀಗ ನಿಮ್ಮ ನಿದ್ದೆಗೆಡಿಸುವ ಮೊಬೈಲ್ ಫೋನನ್ನೇ ಉತ್ತಮ ನಿದ್ದೆ ಪಡೆಯಲು ಬಳಸಿಕೊಳ್ಳಬಹುದು. ಹೇಗೆಂದಿರಾ? ಈ ಆ್ಯಪ್ಗಳನ್ನು ಡೌನ್ಲೋಡ್ ಮಾಡಿಕೊಂಡು ಬಳಸಿ ನೋಡಿ.

1. ನಾಯ್ಸ್ಲಿ
ಈ ಆ್ಯಪ್ನಲ್ಲಿ ಸ್ಲೀಪ್ ಸೌಂಡ್ಟ್ರ್ಯಾಕ್ಗಳಿದ್ದು, ನಿಮಗೆ ಸರಿ ಹೊಂದುವುದನ್ನು ಆಯ್ಕೆ ಮಾಡಿಕೊಳ್ಳಿ. ಗಾಳಿಯ ಸದ್ದು, ಅಲೆಗಳ ಸದ್ದು, ಕೆಫೆಯ ಗಜಿಬಿಜಿ ಹೀಗೆ ಮುಂತಾದ ಸೌಂಡ್ಟ್ರ್ಯಾಕ್ಗಳು ಇದರಲ್ಲಿವೆ. ಇವುಗಳಲ್ಲಿ ನಿಮಗೆ ನಿದ್ದೆಗೆ ಅನುಕೂಲಕರ ಎಂಬಂಥದನ್ನು ಆರಿಸಿಕೊಳ್ಳಬಹುದು. ಇಲ್ಲವೇ, ಎರಡು ಮೂರು ಶಬ್ದಗಳನ್ನು ಮಿಕ್ಸ್ ಮಾಡಿ ನಿಮ್ಮದೇ ಆದ ಸೌಂಡ್ಟ್ರ್ಯಾಕ್ ಸೃಷ್ಟಿಸಿಕೊಳ್ಳಬಹುದು.

01 ಲೂಪ್ ಫೀಚರ್ ಇದ್ದು, ಎಷ್ಟು ಬಾರಿ ಸದ್ದು ರಿಪೀಟ್ ಆಗಬೇಕೆಂದು ಬಯಸುವಿರೋ ಅಷ್ಟು ಬಾರಿಗೆ ಸೆಟಿಂಗ್ಸ್ ಮಾಡಿಕೊಳ್ಳಬಹುದು.
02 ಈ ಬ್ಯಾಕ್ಗ್ರೌಂಡ್ ಸದ್ದು ನಿಮ್ಮನ್ನು ರಿಲ್ಯಾಕ್ಸ್ ಮಾಡಿ ನಿದ್ದೆಗೆ ತಳ್ಳುತ್ತದೆ.
03 ಟೈಮರ್ ಇದ್ದು, ಎಷ್ಟು ಹೊತ್ತು ಬೇಕೋ ಅಷ್ಟು ಹೊತ್ತಿನ ಟೈಮರ್ ಸೆಟ್ ಮಾಡಿಕೊಳ್ಳಬಹುದು. ಇದರಿಂದ ಇಡೀ ರಾತ್ರಿ ಸುಮ್ಮನೆ ಟ್ರ್ಯಾಕ್ ಆನ್ ಇರುವುದನ್ನು ತಪ್ಪಿಸಬಹುದು.

ಟಾಪ್ 9 ಅಪಾಯಕಾರಿ ಸೋಶಿಯಲ್ ಆ್ಯಪ್ಗಳು!

2. ಝಿಜ್ (Pzizz)
ಇದೊಂದು ಜನಪ್ರಿಯ ಸ್ಲೀಪ್ ಆ್ಯಪ್ ಆಗಿದ್ದು, ಒಂದೇ ಬಟನ್ನ ಸಹಾಯದಿಂದ ನಿದ್ರೆಗೆ ಜಾರಿಸುತ್ತದೆ.
ಸೌಂಡ್ ಸೀಕ್ಸೆನ್ಸ್ ಬಳಸಿ ನಿಮ್ಮನ್ನು ನಿದ್ರಾಸಮಸ್ಯೆಯಿಂದ ಹೊರತರುತ್ತದೆ.
– ಟೈಮರ್ ಬಳಸಿ ಬೇಕೆಂದಷ್ಟು ಹೊತ್ತು ಡ್ರೀಮ್ಸ್ಕೇಪ್ ಪ್ಲೇ ಮಾಡಬಹುದು. ಡ್ರೀಮ್ಸ್ಕೇಪ್ನಲ್ಲಿ ವಿವಿಧ ಸೌಂಡ್ ಎಫೆಕ್ಟ್ಗಳು, ವಾಯ್ಸ್ ಓವರ್ಗಳು ಹಾಗೂ ಮ್ಯೂಸಿಕ್ ಇರುತ್ತದೆ.
– ಪ್ರತಿ ರಾತ್ರಿ ಬೇರೆ ಬೇರೆ ಡ್ರೀಮ್ಸ್ಕೇಪ್ ಆಫರ್ ನೀಡುತ್ತದೆ.
– ಸ್ಲೀಪ್ ಮೊಡ್ಯೂಲ್, ಫೋಕಸ್ ಮೊಡ್ಯೂಲ್, ನ್ಯಾಪ್ ಮೊಡ್ಯೂಲ್ ಎಂದು ನಮ್ಮ ಅಗತ್ಯಕ್ಕೆ ತಕ್ಕಂತೆ ಬದಲಿಸಿಕೊಳ್ಳಬಹುದು.

3. ಹೆಡ್ಸ್ಪೇಸ್
ಇದೊಂದು ಜನಪ್ರಿಯ ಮೆಡಿಟೇಶನ್ ಆ್ಯಪ್ ಆಗಿದ್ದು, ಬಹಳಷ್ಟು ಜನರು ಇದರ ಉಪಯೋಗ ಪಡೆದುಕೊಳ್ಳುತ್ತಿದ್ದಾರೆ.
– ಇದರಲ್ಲಿ ಧ್ಯಾನ ಮಾಡಲು ಸೂಕ್ತ ಗೈಡ್ಲೈನ್ಸ್ಗಳಿದ್ದು, ಇವುಗಳನ್ನು ಮನಸ್ಸನ್ನು ರಿಲ್ಯಾಕ್ಸ್ ಮಾಡಿ ನಿದ್ದೆ ಶಾಂತವಾಗಿ ನಿದ್ರಿಸಲು ಸಹಾಯ ಮಾಡುತ್ತವೆ.
– ದಿನವಿಡೀ ಮೈಂಡ್ಫುಲ್ ಆಗಿರಲು ಈ ಆ್ಯಪ್ ರಿಮೈಂಡರ್ಗಳನ್ನು ಕಳುಹಿಸುತ್ತಲೇ ಇರುತ್ತಾದ್ದರಿಂದ, ಮೈ ಮರೆತಾಗ ಎಚ್ಚರಗೊಳ್ಳಬಹುದು.
– ಒತ್ತಡ, ಆತಂಕ, ಸುಸ್ತು ಇತರೆ ಸಮಸ್ಯೆಗಳನ್ನು ಎದುರಿಸಲು ಬೇರೆ ಬೇರೆ ರೀತಿಯ ಕೋರ್ಸ್ಗಳನ್ನು ನೀಡುತ್ತದೆ.
– ಸ್ಕ್ರೀನ್ ಡಿಮ್ ಆಗಿದ್ದು, ಬಟನ್ಗಳು ಬಳಸಲು ಸುಲಭವಾಗಿವೆ.

4. ಸ್ಲೀಪ್ ಸೈಕಲ್
ಈ ಆ್ಯಪ್ ನಿಮ್ಮ ನಿದ್ರಾ ವಿನ್ಯಾಸವನ್ನು ರೆಕಾರ್ಡ್ ಮಾಡಲು ಸಹಾಯ ಮಾಡುತ್ತದೆ. ಜೊತೆಗೆ ಡೀಪ್ ಸ್ಲೀಪ್ನಿಂದ ಹೊರ ಬಂದಾಗ ಅಲಾರ್ಮ್ ಬಾರಿಸಿ ಎಚ್ಚರಿಸುತ್ತದೆ.
– ಲೈಟರ್ ಸ್ಲೀಪ್ ಸ್ಟೇಜ್ನಲ್ಲಿರುವಾಗ ಅಲಾರಾಂ ಬಾರಿಸಿ ಎಬ್ಬಿಸುತ್ತದೆ.
– ನಿಮ್ಮ ಫೋನನ್ನು ಹತ್ತಿರದಲ್ಲಿಟ್ಟುಕೊಂಡರೆ ಸಾಕು, ನಿಮ್ಮ ನಿದ್ರಾವಿನ್ಯಾಸವನ್ನು ಟ್ರ್ಯಾಕ್ ಮಾಡುತ್ತದೆ.

5. ಕಾಮ್
ಮಲಗುವಾಗ ಕತೆ ಕೇಳಿದರೆ ನಿದ್ದೆ ಬರುತ್ತದೆ ಎನ್ನುವವರು ನೀವಾದರೆ, ಈ ಆ್ಯಪ್ ನಿಮಗೆ ಹೆಚ್ಚು ಸೂಕ್ತ.
– ಮಕ್ಕಳಿಗೆ ಹಾಗೂ ದೊಡ್ಡವರಿಗೆ ಮಲಗುವ ಸಮಯದಲ್ಲಿ ಕತೆ ಹೇಳುತ್ತದೆ.
– ಬಹಳ ಶಾಂತ, ಸಮಾಧಾನಕರ ದನಿಯಲ್ಲಿ ಕತೆ ಹೇಳಲಾಗುತ್ತದೆ.
– ಧ್ಯಾನ, ರಿಲ್ಯಾಕ್ಸಿಂಗ್ ಮ್ಯೂಸಿಕ್, ಉಸಿರಾಟದ ಪಾಠಗಳು ಸೇರಿ ಹಲವು ಇತರೆ ಲಾಭಗಳನ್ನೂ ಇದೇ ಆ್ಯಪ್ನಿಂದ ಪಡೆಯಬಹುದು.

6. ರುಂಟಾಸ್ಟಿಕ್ ಸ್ಲೀಪ್ ಬೆಟರ್
ನಿಮ್ಮ ನಿದ್ದೆಯ ಬಗೆಗೆ ನಿಮಗೆ ಸ್ಪಷ್ಟತೆ ಕೊಡುವ ಆ್ಯಪ್ ಇದು.
– ಫೋನನ್ನು ಫ್ಲೈಟ್ ಮೋಡ್ನಲ್ಲಿಟ್ಟಾಗಲೂ ನಿಮ್ಮ ನಿದ್ರಾ ವಿನ್ಯಾಸವನ್ನು ದಾಖಲಿಸಬಲ್ಲದು.
– ನಿಮ್ಮ ಪ್ರತಿದಿನದ ಹವ್ಯಾಸಗಳನ್ನು ಇದರಲ್ಲಿ ದಾಖಲಿಸಬಹುದು. ಇದು ನಿಮ್ಮ ನಿದ್ದೆಗೆ ಯಾವುದು ಅಡಚಣೆ ತರುತ್ತಿದೆ ಎಂದು ತಿಳಿಸುತ್ತದೆ.
– ಡ್ರೀಮ್ ಜರ್ನಲ್ ನಿರ್ವಹಿಸಲು ಸಹಾಯ ಮಾಡುತ್ತದೆ. ಇದರಿಂದಾಗಿ ನಿಮ್ಮ ಕನಸುಗಳ ಬಗ್ಗೆ ಅರ್ಥ ಮಾಡಿಕೊಂಡು ಅವು ನಿದ್ರೆಗೆ ಅಡ್ಡಿ ಉಂಟು ಮಾಡುತ್ತಿವೆಯೇ ಎಂದು ತಿಳಿಯಬಹುದು.

Share post:

Subscribe

spot_imgspot_img

Popular

More like this
Related

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ!

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ! ಬೆಂಗಳೂರು:...

ಪ್ರತಿದಿನ ಮೌತ್‌ವಾಶ್ ಬಳಸುವುದು ಒಳ್ಳೆಯದೋ ಕೆಟ್ಟದ್ದೋ? ಇಲ್ಲಿದೆ ಮಾಹಿತಿ

ಪ್ರತಿದಿನ ಮೌತ್‌ವಾಶ್ ಬಳಸುವುದು ಒಳ್ಳೆಯದೋ ಕೆಟ್ಟದ್ದೋ? ಇಲ್ಲಿದೆ ಮಾಹಿತಿ ಇತ್ತೀಚಿನ ದಿನಗಳಲ್ಲಿ ಮೌತ್‌ವಾಶ್...

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು: ಡಿ.ಕೆ. ಶಿವಕುಮಾರ್

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು:...

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ?

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ? ಜನಪ್ರಿಯ ಜೋಡಿ ರಶ್ಮಿಕಾ ಮಂದಣ್ಣ ಹಾಗೂ...