ಜಗತ್ತಿನ ಪ್ರಭಾವಿ ಉದ್ಯಮಿಗಳಲ್ಲಿ ಇನ್ಫೋಸಿಸ್ ಸಂಸ್ಥಾಪಕ ನಾರಾಯಣಮೂರ್ತಿ ಅವರು ಕೂಡ ಒಬ್ಬರು ಇಂತಹ ಇನ್ಫೊಸಿಸ್ ನಾರಾಯಣ ಮೂರ್ತಿಯವರಿಗೆ ಅಂದಿನ ಕಾಲದಲ್ಲಿ ಬಹುದೊಡ್ಡ ಸಂಸ್ಥೆ ವಿಪ್ರೋ ಕಂಪನಿಯ ಸಂಸ್ಥಾಪಕ ಪ್ರೇಮ್ ಜೀ ಅವರು ರಿಜೆಕ್ಟ್ ಮಾಡಿದ್ದರಂತೆ. ವಿಪ್ರೋ ಕಂಪನಿಯಿಂದ ರಿಜೆಕ್ಟ್ ಆದ್ಮೇಲೆ ನನಗೆ ಇನ್ಫೋಸಿಸ್ ಮಾಡಬೇಕು ಎಂಬ ಅಲೋಚನೆ ಬಂತು ಎಂದು ನಾರಾಯಣ ಮೂರ್ತಿ ಹೇಳಿಕೊಂಡಿದ್ದಾರೆ.
ಜೀವನದಲ್ಲಿ ಏನಾದರೂ ಮಾಡಬೇಕು ಎಂಬ ಆಲೋಚನೆಯಲ್ಲಿದ್ದ ನಾರಾಯಣ ಮೂರ್ತಿ ಅವರಿಗೆ ಪ್ರಸನ್ನ ಎನ್ನುವ ಅವರ ಸ್ನೇಹಿತ ಒಂದು ಸಲಹೆ ಕೊಟ್ಟಿದ್ದರಂತೆ. ವಿಪ್ರೋ ಕಂಪನಿಯಲ್ಲಿ ಎಚ್.ಆರ್ ಮ್ಯಾನೇಜರ್ ಆಗಿದ್ದ ಅವರು ‘ಪ್ರೇಮ್ ಜೀ ಅವರನ್ನ ನೀನು ಭೇಟಿ ಮಾಡಬಹುದು ಯಾಕೆಂದರೆ ಸಾಫ್ಟವೇರ್ ರಫ್ತು ಮಾಡುವ ಯೋಜನೆಗೆ ವಿಪ್ರೋ ಕಂಪನಿ ಚಿಂತನೆ ನಡೆಸುತ್ತಿದೆ ಎಂದು ಹೇಳಿದ್ದರಂತೆ ಹಾಗಾಗಿ ನಾರಾಯಣ ಮೂರ್ತಿ ಅವರು ಕೂಡ ಪ್ರೇಮ್ ಜೀ ಅವರನ್ನ ಭೇಟಿ ಮಾಡಲು ನಿರ್ಧರಿಸಿದರಂತೆ.
ಸ್ನೇಹಿತ ನೀಡಿದ ಸಲಹೆಯಿಂದ, ಪ್ರೇಮ್ ಜೀ ಅವರನ್ನ ಭೇಟಿ ಮಾಡಲು ನಿರ್ಧರಿಸಿ ಕ್ಲಬ್ ವೊಂದರಲ್ಲಿ ಅವರನ್ನು ನಾರಾಯಣಮೂರ್ತಿ ಭೇಟಿಯಾದರು ಬಳಿಕ ಅಂದು ಪ್ರೇಮ್ ಜೀ ಅವರು ಮಾತುಕಥೆಯ ಬಳಿಕ ನಾರಾಯಣ ಮೂರ್ತಿ ಅವರನ್ನ ತಿರಸ್ಕರಿಸಿ ಹೊರಟು ಹೋಗಿದ್ದರಂತೆ ಆದರೆ ಅದು ಯಾಕೆ ಎನ್ನುವ ಕಾರಣವನ್ನು ನಾರಾಯಣ ಮೂರ್ತಿ ಹೇಳಿಲ್ಲ.
ಆದರೆ ಅಂದು ವಿಪ್ರೋ ಕಂಪನಿಯ ಸಂಸ್ಥಾಪಕ ಪ್ರೇಮ್ ಜೀ ಅವರು ತಿರಸ್ಕಾರ ಮಾಡಿದ್ದು ಒಳ್ಳೆದಾಯಿತು. ಇಲ್ಲವಾಗಿದ್ದರೆ ಇನ್ಫೋಸಿಸ್ ಅಂತಹ ದೊಡ್ಡ ಕಂಪನಿ ಹುಟ್ಟುತ್ತಿರಲಿಲ್ಲ ಎಂದು ಹೇಳಿದ್ದಾರೆ.