ಇತ್ತೀಚಿಗೆ ಹೆಚ್ಚು ಟ್ರೋಲ್ ಆಗಿದ್ದ ನಟಿ ಅಂದ್ರೆ ಅದು ಪ್ರಿಯಾಂಕಾ ಚೋಪ್ರಾ. ಆಕೆ ತೊಡುವ ಒಂದೊಂದು ಡ್ರೆಸ್ಗೂ ಇತ್ತಿಚೀಗೆ ಟ್ರೋಲಿಕರು ತರಹೇವಾರಿ ಕಮೆಂಟ್ಗಳ ಸುರಿಮಳೆಗೈದ್ರು. ಅದೇನೋ ಟ್ರೋಲಿಗರಿಗೂ ಪ್ರಿಯಾಂಕಾಗೂ ಅವಿನಾಭಾವ ಸಂಬಂಧ. ಇತ್ತೀಚೆಗೆ ಪತಿ ನಿಕ್ ಜಾನ್ರೊಟ್ಟಿಗೆ ಇರುವ ಫೋಟೋಗಳು, ಪರಸ್ಪರ ಅಪ್ಪುಗೆ, ಮುತ್ತು ಕೊಡುವ ಫೋಟೋಗಳೆಲ್ಲವನ್ನೂ ಪ್ರಿಯಾಂಕ ಸೋಷಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುತ್ತಿದ್ದರು. ಇವೆಲ್ಲವೂ ಟ್ರೋಲ್ ಆಗಿ ನೆಟ್ಟಿಗರು ಸಿಕ್ಕಾಪಟ್ಟೆ ಬ್ಯಾಡ್ ಕಮೆಂಟ್ಸ್ ಮಾಡ್ತಿದ್ರು. ಈ ಅದೆಲ್ಲಾದಕ್ಕೂ ಪಿಗ್ಗಿ ಸರಿಯಾಗಿಯೇ ಉತ್ತರ ಕೊಟ್ಟಿದ್ದಾರೆ.
‘ನಾನೊಬ್ಬಳು ಸೆಲೆಬ್ರಿಟಿ ಅನ್ನೋ ಒಂದೇ ಕಾರಣಕ್ಕೆ ಹೀಗೆಲ್ಲಾ ಆಗುತ್ತಿದೆ. ನಾನು ನಿಕ್ ಜಾನ್ ಜೊತೆಗೆ ಇರುವ ಫೋಟೋಗಳನ್ನು ಶೇರ್ ಮಾಡಿ ಫೇಮಸ್ ಆಗಬೇಕಾಗಿರೋ ಅವಶ್ಯಕತೆ ನನಗಿಲ್ಲ. ನಾನು ಸಾರ್ವಜನಿಕ ವ್ಯಕ್ತಿಯಾಗಿ ಏನೇನು ಶೇರ್ ಮಾಡಿಕೊಳ್ಳಬೇಕು ಎಂಬುದು ನನಗೆ ಗೊತ್ತಿದೆ. ನನ್ನ ವೈಯಕ್ತಿಕ ಜೀವನದ ಸಾಕಷ್ಟು ಸಿಕ್ರೇಟ್ಗಳನ್ನು ನಾನು ನನ್ನೊಳಗೇ ಇಟ್ಟುಕೊಂಡಿದ್ದೇನೆ. ಯಾವುದನ್ನು ಹಂಚಿಕೊಳ್ಳಬೇಕೋ ಅದನ್ನು ಮಾತ್ರವೇ ಹಂಚಿಕೊಂಡಿದ್ದೇನೆ’ ಎಂದು ಹೇಳುವ ಮೂಲಕ ತನ್ನ ಬಗ್ಗೆ ಬರುತ್ತಿದ್ದ ನೆಗೆಟಿವ್ ಕಾಮೆಂಟ್ಗಳಿಗೆ ಉತ್ತರ ಕೊಟ್ಟಿದ್ದಾರೆ ಪಿಗ್ಗಿ.
ನೆಟ್ಟಿಗರಿಗೆ ಸರಿಯಾಗಿಯೇ ಉತ್ತರ ಕೊಟ್ಟ ಪಿಗ್ಗಿ..!
Date:






