ನಾಯಿ, ಬೆಕ್ಕುಗಳು ಮತ್ತು ಇಸ್ಲಾಂ ರಾಷ್ಟ್ರ..!?

Date:

ಕೇವಲ ಒಂದು ವರ್ಷದ ಹಿಂದೆ ಟರ್ಕಿಯಲ್ಲಿ ಅಯ್ಲನ್ ಕುರ್ದಿ ಹೆಸರಿನ ಮಗುವಿನ ಶವ ಸಮುದ್ರದ ತೀರದಲ್ಲಿ ಮಾತ್ರ ಬಿದ್ದಿರಲಿಲ್ಲ. ಜಗತ್ತಿನ ಮಾನವೀಯತೆಯ ಎದೆಯ ಮೇಲೆ ಬೆನ್ನು ಹಾಕಿ ಮಲಗಿತ್ತು. ನಿಜ, ರಕ್ತಬೀಜಾಸುರರ ಅಸಂಗತ ಉದ್ದೇಶಗಳಿಗೆ ಮುಸ್ಲಿಂ ರಾಷ್ಟ್ರಗಳು ಅಕ್ಷರಶಃ ನರಕವನ್ನೇ ಅನುಭವಿಸುತ್ತಿದೆ. ಆಂತರಿಕ ಸಂಘರ್ಷದಿಂದ ನರಳುತ್ತಿರುವ ಸಿರಿಯಾದಲ್ಲಿ ನಡೆದ ಮಾರಣಹೋಮಕ್ಕೆ ಬಲಿಯಾಗಿದ್ದು ಮೂರು ಲಕ್ಷದ ಎಂಬತ್ತೊಂಬತ್ತು ಸಾವಿರ ಜನರು ಎಂಬ ರಿಪೋರ್ಟ್ ಬಂದಿದೆ. ಸಿರಿಯಾ ನಗರ ನಾಶವಾದ ನಂತರ ಅಲ್ಲೀಗ ಬಡತನ ತಾಂಡವವಾಡುತ್ತಿದೆ. ತಿನ್ನಲು ಆಹಾರವಿಲ್ಲದೇ ಬೆಕ್ಕು ನಾಯಿಗಳನ್ನೇ ಕೊಂದು ತಿನ್ನುತ್ತಿದ್ದಾರೆ. ಜಗತ್ತಿನ ಜವಬ್ಧಾರಿ ಹೊತ್ತುಕೊಂಡಿರುವ ವಿಶ್ವಸಂಸ್ಥೆಗೆ ಇವ್ಯಾವುದೂ ಕಾಣಿಸುತ್ತಿಲ್ಲ ಎನ್ನುವುದೇ ದುರಂತ.

ನ್ಯಾಟೋ, ಇಸ್ರೇಲಿ ಇನ್ನಿತರೆ ಪಡೆಗಳು ಸಿರಿಯಾ ಬಂಡುಕೋರರ ಮೇಲೆ ಯುದ್ದಕ್ಕೆ ನಿಂತಾಗ, ಸಿರಿಯಾದ ಆಂತರಿಕ ಭಿನ್ನಮತ ಅಂತ್ಯವಾಗುತ್ತೆ ಅಂತ ಭಾವಿಸಲಾಗಿತ್ತು. ಅಲ್ಲಿನ ಜನರಿಗೆ ಯುದ್ಧದ ಭೀತಿ ಇತ್ತಾದರೂ, ಬಂಡುಕೋರರಿಂದ ಮುಕ್ತಿ ಸಿಗಬಹುದೆಂಬ ನಿರೀಕ್ಷೆಗಳಿದ್ದವು. ಆದರೆ ಬಾಂಬುಗಳು ನೇರವಾಗಿ ತಮ್ಮ ಮೇಲೆ ಬೀಳುತ್ತದೆ ಎಂದು ಅವರು ಕನಸಿನಲ್ಲೂ ಊಹಿಸಿರಲಿಲ್ಲ. ಸಧ್ಯಕ್ಕೆ ಕಾಲ ಮಿಂಚಿದೆ. ಸಿರಯಾ ನಗರವೇ ನಾಮವಶೇಷವಾಗಿದೆ. ಈಗ ಅಲ್ಲಿ ಉಳಿದುಕೊಂಡಿರುವುದು ಮೂರು ಲಕ್ಷದ ಎಂಬತ್ತೊಂಬತ್ತು ಸಾವಿರ ಜನರ ಸಾವಿನ ಲೆಕ್ಕಗಳು ಮಾತ್ರ.

ಉಗ್ರರು, ನ್ಯಾಟೋ ಪಡೆಗಳು ಇದ್ದ ನೆಲೆ, ದಿಕ್ಕುಗಳನ್ನೆಲ್ಲ ಪುಡಿಗುಟ್ಟಿಸಿದ್ದಾರೆ. ಅಳಿದುಳಿದವರು ಅಕ್ಕಪಕ್ಕ ವಲಸೆ ಹೋಗಿದ್ದಾರೆ. ಅವರಿಗೆ ಹೇಗಾದ್ರೂ ಬದುಕಲೇಬೇಕು. ಪುಟ್ಟ ಮಕ್ಕಳು, ನಂಬಿ ಬಂದಿರುವ ಅರ್ಧಾಂಗಿ, ವಯಸ್ಸಾದ ತಂದೆ ತಾಯಿ. ಉಗ್ರರ ಬಾಂಬಿಗೆ ಬಲಿಯಾಗಿ ಅಲ್ಲಲ್ಲಿ ಉಳಿದುಕೊಂಡ ಕುಟುಂಬ. ಎಲ್ಲರನ್ನು ಉಳಿಸಿ ತಾವು ಬದುಕಬೇಕೆಂಬ ಆಸೆ. ಅದಕ್ಕಾಗಿ ಯಾರಾದರೂ ಅನ್ನ ಜಾಗ ಕೊಡುತ್ತಾರಂದ್ರೆ ಗುಳೆ ಹೊರಟು ಬಿಡುತ್ತಾರೆ. ಆಶ್ರಯ, ಆಹಾರ ಸಿಗದವರು ಕುಟುಕು ಜೀವ ಉಳಿಸಿಕೊಳ್ಳಲು ಬೆಕ್ಕು, ನಾಯಿಗಳನ್ನೇ ಭಕ್ಷಿಸುತ್ತಿದ್ದಾರೆ. ಹಸಿರೆಲೆ ಸೊಪ್ಪುಗಳನ್ನು ತಿನ್ನುತ್ತಿದ್ದಾರೆ. ಆಂತರಿಕ ಸಂಘರ್ಷದಿಂದ ಬಳಲಿ ಬೆಂಡಾಗಿರೋ, ಅಳಿದುಳಿದ ಜೀವವನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿರುವ ಅವರು ಸಿರಿಯಾ ಪ್ರಜೆಗಳು.

2011ರಲ್ಲಿ ಶುರುವಾದ ಸಿರಿಯಾ ಆಂತರಿಕ ಸಂಘರ್ಷಕ್ಕೆ ಈಗ ಐದು ವರ್ಷವಾಗಿದೆ. ಲಕ್ಷಾಂತರ ಜನರು ಜೀವವನ್ನುಳಿಸಿಕೊಳ್ಳಲು ಹರಸಾಹಸಪಟ್ಟಿದ್ದಾರೆ. ನಿರಾಶ್ರಿತರ ಶಿಬಿರವನ್ನು ತಲುಪಿದರೂ ಅಲ್ಲಿ ಸಾಂಕ್ರಾಮಿಕ ರೋಗ. ಉಗ್ರರ ಗುಂಡಿಗೆ ಎದೆ ಕೊಡುವ ಬದಲು ರೋಗ ಬಂದು ಸತ್ತರೂ ಪರ್ವಾಗಿಲ್ಲ. ಅಲ್ಲಿಯೂ ವೈದ್ಯಕೀಯ ಸೌಲಭ್ಯಗಳು ಸಿಗಬಹುದು. ಕೂಲಿ ನಾಲಿ ಮಾಡಿಕೊಂಡು ಬದುಕೋಣ ಎಂದು ನಿರಾಶ್ರಿತರ ಶಿಬಿರಗಳಲ್ಲಿ ಬದುಕನ್ನು ಕಟ್ಟಿಕೊಳ್ಳುವ ಅಸಂಖ್ಯಾ ಜನರನ್ನು ಕಾಣಬಹುದು. ಅವರೆಲ್ಲರ ಪರಿಸ್ಥಿತಿ ಸಾಕ್ಷಾತ್ ದೇವರಿಗೆ ಪ್ರಿಯ.

ಜಗತ್ತಿಗೆ ಯಾವತ್ತಿಗೂ ಅಮೆರಿಕಾ, ಇಸ್ರೇಲಿಗಳ ಹಕೀಕತ್ತು ಅರ್ಥವಾಗಲೇ ಇಲ್ಲ. ನೆಮ್ಮದಿಯಿಂದಿದ್ದ ದೇಶಕ್ಕೆ ಬೆಂಕಿಯಿಟ್ಟಿದ್ದು ಅಸಲಿಗೆ ಅವರೇ. ಲಿಬಿಯಾ, ಈಜಿಪ್ಟ್, ಇರಾಕ್, ಸಿರಿಯಾ – ಇವು ತಕ್ಕಮಟ್ಟಿಗೆ ಶ್ರೀಮಂತವಾಗಿದ್ದವು. ಜಗತ್ತಿನ ನಾನಾ ದೇಶಗಳಿಂದ ಅಲ್ಲಿ ಉದ್ಯೋಗಕ್ಕೆ ಬರುತ್ತಿದ್ದರು. ಆದರೆ ಈ ದೇಶಗಳು ಯಹೂದಿಗಳನ್ನು ಸಹಿಸುತ್ತಿರಲಿಲ್ಲ. ಇಸ್ರೇಲಿಯನ್ನರ ಜೊತೆ ಅದ್ಭುತ ಸಂಬಂಧ ಹೊಂದಿದ್ದ ಅಮೆರಿಕಾವನ್ನು ಹತ್ತಿರಕ್ಕೂ ಬಿಟ್ಟುಕೊಳ್ಳಲಿಲ್ಲ. ಇದು ಎಷ್ಟೋ ಶತಮಾನಗಳಿಂದ ನಡೆದುಕೊಂಡುಬಂದಿತ್ತು. ಒಂದು ಹಂತದಲ್ಲಿ ಈ ಎಲ್ಲಾ ದೇಶಗಳು ಒಗ್ಗಟ್ಟಾಗಿ ಇಸ್ರೇಲ್ ಮೇಲೆ ಯುದ್ಧ ಮಾಡುತ್ತಿದ್ದವು. ಇಸ್ರೇಲ್ ಭೂಪಟದಿಂದ ಅಳಿಸಿಹೋಗುವ ಸುಳಿವು ಸಿಕ್ಕಿದಾಗ ತಯಾರಾಗಿದ್ದೇ ಮಾಸ್ಟರ್ ಪ್ಲಾನ್.

ಆಯಾ ಮುಸ್ಲಿಂ ರಾಷ್ಟ್ರಗಳ ಒಳಗೊಳಗೆ ಸಮರ ತಂದಿಟ್ಟು ಜನಾಂಗೀಯ ಘರ್ಷಣೆಗೆ ನಾಂದಿ ಹಾಡಿದರು. ಗಧಾಫಿಯನ್ನು ಹಿಡಿದು ಜನರ ಕೈಯ್ಯಲ್ಲೇ ಕೊಲ್ಲಿಸಿದರು. ಸದ್ದಾಂ ಹುಸೇನ್ನನ್ನು ಅವನ ದೇಶದಲ್ಲೇ ಎತ್ತಿಕಟ್ಟಿ ಆಮೇಲೆ ನೇಣಿಗೇರಿಸಲಾಯ್ತು. ಪ್ರಮುಖ ಮುಸ್ಲಿಂ ನಾಯಕರನ್ನು ಹತ್ಯೆ ಮಾಡಲಾಯಿತು. ಬಾಕಿಯಿರುವ ಇರಾನ್, ಅರಬ್ ರಾಷ್ಟ್ರಗಳ ಮೇಲೂ ಯಹೂದಿ ಜಗತ್ತು ಕಣ್ಣಿಟ್ಟಿರೋದು ಸುಳ್ಳಲ್ಲ. ಇವೆಲ್ಲವನ್ನೂ ನೋಡಿ ಸ್ಪಷ್ಟವಾಗಿ ಒಂದು ಮಾತನ್ನು ಹೇಳಬಹುದು. ಜಗತ್ತಿನಲ್ಲಿ ಕಡಿಮೆ ಸಂಖ್ಯೆಯಲ್ಲಿರುವ ಯಹೂದಿಗಳಷ್ಟು ಬುದ್ಧಿವಂತರು ಯಾರೂ ಇಲ್ಲ, ಹಾಗೆಯೇ ಮುಸ್ಲೀಮರಷ್ಟು ದಡ್ಡರು ಮತ್ತೊಬ್ಬರಿರಲು ಸಾಧ್ಯವಿಲ್ಲ.

ಸಿರಿಯಾದಲ್ಲಿ ನಾಗರಿಕ ದಂಗೆ ಆರಂಭವಾದ ಮೇಲೆ ಅಲ್ಲಿನ ಚಿತ್ರಣಗಳು ನಿಧಾನವಾಗಿ ಬದಲಾಗುತ್ತಾ ಬಂತು. ಅಧ್ಯಕ್ಷ ಬಷರ್ ಅಲ್ ಅಸ್ಸಾದ್ ಸರ್ಕಾರ ವಿರುದ್ಧ ಆರಂಭಗೊಂಡ ಪ್ರತಿಭಟನೆಯಲ್ಲಿ 2011ರ ಬಳಿಕ ಮೂಲಭೂತವಾಗಿ ಇಸ್ಲಾಮಿಕ್ ಗುಂಪುಗಳು ಭಾಗವಹಿಸಿದ್ದವು. ಅದರಲ್ಲಿ ಪ್ರಬಲವಾದ ಸಂಘಟನೆ “ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಆ್ಯಂಡ್ ದಿ ಲೆವೆಂಟ್’ ಭಾಗವಹಿಸಿತ್ತು. ಮೊದಲು ಶಾಂತಿಯುತವಾಗಿದ್ದ ಪ್ರತಿಭಟನೆಗಳು ಜಿಹಾದಿ ಗುಂಪುಗಳು ಸೇರುವುದರೊಂದಿಗೆ ಹಿಂಸಾತ್ಮಕವಾಗಿತ್ತು. ಇವರ ವಿರುದ್ಧ ಸಿರಿಯಾ ಸರ್ಕಾರ ಮಿಲಿಟರಿ ಶಕ್ತಿ ಪ್ರಯೋಗ ಮಾಡಿದ್ದು, ಯುದ್ಧ ಸದೃಶ ವಾತಾವರಣ ನಿರ್ಮಾಣವಾಯಿತು. ಸಿರಿಯಾದ ಬಹುಭಾಗಗಳು ಹೊತ್ತಿ ಉರಿಯುತ್ತಿದ್ದರೆ, ಸಿರಿಯಾ ಸರ್ಕಾರಿ ಪಡೆಗಳ ವಿರುದ್ಧ “ಇಸ್ಲಾಮಿಕ್ ಸ್ಟೇಟ್ ಆಫ್ ಸಿರಿಯಾ ಆ್ಯಂಡ್ ಇರಾಕ್’ ಎಂದು ನಾಮಾಂಕಿತಗೊಂಡ ಜಿಹಾದಿ ಪಡೆ ವ್ಯಾಪಕ ದಾಳಿ ಸಂಘಟಿಸಿ ಹಲವು ಭೂಭಾಗವನ್ನು ವಶಪಡಿಸಿಕೊಂಡಿತ್ತು. ಉದ್ಯಮ, ಬ್ಯಾಂಕ್ ಲೂಟಿಯೊಂದಿಗೆ ತನ್ನ ಕಾರ್ಯಾಚರಣೆಯನ್ನು ಅದು ಪ್ರಬಲಗೊಳಿಸಿದ್ದು ನಿತ್ಯ ಗುಂಡಿನ ಮೊರೆತ ಕೇಳಿಬಂತು. ಸಾಮಾನ್ಯ ನಾಗರಿಕರು ತಲೆ ಎತ್ತಿದರೆ ಗುಂಡು ಬೀಳುವ ಪರಿಸ್ಥಿತಿ ನಿರ್ಮಾಣವಾಯಿತು. 2012ರ ಬಳಿಕ ಸಿರಿಯಾ ಅಕ್ಷರಶಃ ಸಾವಿನ ಕೂಪವಾಯಿತು.

ಸತ್ತವರಲ್ಲಿ ಮುಕ್ಕಾಲು ಜನರು ಸಾಮಾನ್ಯ ನಾಗರಿಕರು. ವಿಶ್ವಸಂಸ್ಥೆಯ ಅಂದಾಜಿನಂತೆ ಸುಮಾರು 76 ಲಕ್ಷಕ್ಕೂ ಹೆಚ್ಚು ನಾಗರಿಕರು ಸಂತ್ರಸ್ತರಾಗಿದ್ದಾರೆ. ಈ ಕ್ಷಣ ಇದ್ದವರು ಮತ್ತೆ ಇರುತ್ತಾರೆ ಎಂಬ ದೈರ್ಯವೇ ಅಲ್ಲಿನವರಲ್ಲಿ ಇಲ್ಲ. 2011ರಲ್ಲಿ ಸಿರಿಯಾ ಬಿಟ್ಟವರ ಸಂಖ್ಯೆ 50 ಸಾವಿರ ಇದ್ದರೆ, 2015ರ ವೇಳೆಗೆ ಈ ಪ್ರಮಾಣ 38 ಲಕ್ಷಕ್ಕೇರಿದೆ! 2014ರಲ್ಲಿ ಈ ಪ್ರಮಾಣ 25 ಲಕ್ಷದಷ್ಟಿತ್ತು. ಸಿರಿಯಾದಿಂದ ವಲಸೆ ಹೋದವರು ಪ್ರಮುಖವಾಗಿ ನೆರೆಯ ದೇಶಗಳಾದ ಟರ್ಕಿ, ಜೋರ್ಡಾನ್, ಲೆಬನಾನ್, ಈಜಿಪ್ಟ್ ಗೆ ತೆರಳುತ್ತಿದ್ದಾರೆ. ಇನ್ನು ಕೆಲವರು ಯುರೋಪ್ ದೇಶಗಳು, ಇರಾಕ್ ಮತ್ತು ದಕ್ಷಿಣ ಅಮೆರಿಕಕ್ಕೆ ವಲಸೆ ಹೋಗಿದ್ದಾರೆ. ಆದರೆ ಅಕ್ರಮ ವಲಸೆ ವಿರುದ್ಧ ಯುರೋಪಿಯನ್ ಒಕ್ಕೂಟ ಕಠಿಣ ನೀತಿಗಳನ್ನು ಹೊಂದಿವೆ. ಆಫ್ರಿಕನ್ ದೇಶದಿಂದ ಮತ್ತು ಯುದ್ಧ ಸಂತ್ರಸ್ತ ದೇಶಗಳಾದ ಸಿರಿಯಾ, ಇರಾಕ್ನಿಂದ ಸಂತ್ರಸ್ತ ವಲಸೆಗಾರರು ಬರದಂತೆ ತಡೆಯಲು ಇವುಗಳು ಸಮುದ್ರ ತೀರಗಳಲ್ಲಿ ಯುರೋಪಿಯನ್ ಒಕ್ಕೂಟದ ತಟ ರಕ್ಷಣಾ ಪಡೆಗಳಿಂದ ನಿರಂತರ ಗಸ್ತು ಇದೆ. ಇವರನ್ನು ಒತ್ತಾಯ ಪೂರ್ವಕವಾಗಿ ಹಿಡಿದಿಡುವ, ತಡೆವ ಕೆಲಸವನ್ನು ವಿವಿಧ ದೇಶಗಳು ಮಾಡುತ್ತಲೇ ಇವೆ. ಆದರೆ ಅವರಿಗೆ ನೆರವು ಕಲ್ಪಿಸಬೇಕು ಎಂಬ ಕೂಗು ಮಾನವ ಹಕ್ಕು ಸಂಘಟನೆಗಳದ್ದಾಗಿದೆ.

ಯುರೋಪ್ ದೇಶಗಳಿಗೆ ಸಿರಿಯಾ ಸಂತ್ರಸ್ತರು ಓಡಿ ಹೋದಷ್ಟು ಗಲ್ಫ್ ದೇಶಗಳಿಗೆ ಹೋಗಿಲ್ಲ. ಸಿರಿಯಾದ ಕೆಲವರ ಬಳಿ ಯುರೋಪ್ ದೇಶಗಳ ವೀಸಾ ಇದ್ದು ಪರಾರಿಯಾಗಿದ್ದಾರೆ. ಉಳಿದವರು, ಟರ್ಕಿ, ಈಜಿಪ್ಟ್ ಮುಖಾಂತರ ಹೋಗಿ ಆ ದೇಶಗಳ ಗಡಿಯಲ್ಲಿ ಜಮಾವಣೆಯಾಗಿದ್ದಾರೆ. ಆದರೆ ಗಲ್ಫ್ ದೇಶಗಳಿಗೆ ತೆರಳಿದವರ ಪ್ರಮಾಣ ಕಡಿಮೆ. ಸುತ್ತಿ ಬಳಸಿ ಹೋಗಬೇಕಾಗಿರುವುದು ಮತ್ತು ಅಲ್ಲಿ ವೀಸಾ ಇಲ್ಲದವರನ್ನು ನೇರ ಜೈಲಿಗೇ ದಬ್ಬುವ ಅಥವಾ ಕಥೆ ಮುಗಿಸಿಬಿಡುವ ಸಾಧ್ಯತೆ ಸಂತ್ರಸ್ತರನ್ನು ಭೀತರನ್ನಾಗಿಸಿದೆ. ಸಿರಿಯನ್ನರಿಗೆ ಹಿಂದಿನಿಂದಲೂ ಗಲ್ಫ್ ದೇಶಗಳು ಮಣೆ ಹಾಕಿದ್ದಿಲ್ಲ. ಸಿರಿಯಾ ಪರ ಗಲ್ಫ್ ದೇಶಗಳ ಒಲುಮೆ ಅಷ್ಟಕ್ಕಷ್ಟೇ ಎಂಬಂತಿದೆ. ಇತ್ತೀಚೆಗೆ ಅರಬ್ ಸೇನೆ ಸಿರಿಯನ್ನರ ರಕ್ಷಣೆಗೆ ಹೊರಟು ನಿಂತ ಮಾಹಿತಿ ಬಂದಿತ್ತು. ಅಲ್ಲೀಗ ಉಳಿದಿರೋದು ಅವಶೇಷಗಳು ಮಾತ್ರ. ಅದನ್ನು ಹೆಕ್ಕುವ ಕೆಲಸ ಮಾಡಬೇಕಷ್ಟೆ..!

ಸಿರಿಯಾದಲ್ಲಿ ಬಶಾರ್ ಅಲ್ ಅಸದ್ರ ದಬ್ಬಾಳಿಕೆಯ ವಿರುದ್ಧ ನಡೆಸಲಾಗಿದ್ದ ಹೋರಾಟದ ಆರಂಭದ ಎರಡು ವರ್ಷ ಕಳೆಯುವಷ್ಟರಲ್ಲಿ 90 ಸಾವಿರ ಮಂದಿ ಬಲಿಯಾದರೆ, ಸುಮಾರು 60 ಸಾವಿರ ಮಂದಿ ನಾಪತ್ತೆಯಾಗಿದ್ದರು. ಒಂದು ಲಕ್ಷದ ನಲವತ್ತು ಸಾವಿರ ಜನರು ಜೈಲು ಸೇರಿದ್ದರು. ಆರು ಲಕ್ಷ ಜನರು ನಿರಾಶ್ರಿತ ಶಿಬಿರದಲ್ಲಿ ಕಾಲ ಕಳೆಯುತ್ತಿದ್ದಾರೆ. ಅರಬ್ ಕ್ರಾಂತಿಯಿಂದ ಪ್ರೇರಿತರಾದ ಸಿರಿಯನ್ ಜನತೆಯು ಸರ್ವಾಧಿಕಾರಿ ಆಡಳಿತ ನಡೆಸುತ್ತಿರುವ ಅಸದ್ ವಿರುದ್ಧ ಬೀದಿಗಿಳಿದಿತ್ತು. ಪ್ರಜಾಪ್ರಭುತ್ವದ ಆಸೆಯಲ್ಲಿದ್ದ ಸಿರಿಯನ್ ಜನತೆಯು ಸರಕಾರದಿಂದ ಭಾರೀ ದೌರ್ಜನ್ಯವನ್ನು ಎದುರಿಸಬೇಕಾಯಿತು. ಆದರೆ ಇದ್ಯಾವುದೂ ಸಿರಿಯನ್ ಜನತೆಯ ಹೋರಾಟದ ಕೆಚ್ಚಿಗೆ ಬಾಧಕವಾಗಿಲ್ಲ. ಟರ್ಕಿಯೊಂದಿಗೆ ಸಂಬಂಧ ಕೆಡಿಸಿಕೊಂಡಿದ್ದು, ನೆರೆಯ ರಾಷ್ಟ್ರಗಳ ಜೊತೆ ರಾಜತಾಂತ್ರಿಕ ಸಂಬಂಧವನ್ನು ಹಾಳು ಮಾಡಿಕೊಂಡಿದ್ದು ಸಿರಿಯಾಕ್ಕೆ ಬಹುದೊಡ್ಡ ಹಿನ್ನಡೆಯಾಗಿತ್ತು. ಕೃಷಿ ಪ್ರಧಾನವಾದ ಸಿರಿಯಾದ ಆರ್ಥಿಕತೆಗೂ ಇದು ಕೊಡಲಿ ಏಟು ಹಾಕಿತ್ತು. ಒಟ್ಟಿನಲ್ಲಿ ಸಿರಿಯಾ ನರಳುತ್ತಿದೆ. ಎಷ್ಟರಮಟ್ಟಿಗೆ ಎಂದರೇ ಹಸಿವನ್ನು ತಾಳದೇ ನಾಯಿ, ಬೆಕ್ಕನ್ನು ತಿನ್ನುವಷ್ಟರ ಮಟ್ಟಿಗೆ ನರಳುತ್ತಿದೆ. ಮನುಷ್ಯತ್ವವನ್ನು ಬಡಿದೆಬ್ಬಿಸುವಂತಹ ದೃಶ್ಯಾವಳಿಗಳು ಅಲ್ಲಿ ಸಾಮಾನ್ಯವಾಗಿವೆ.

ಇದರ ಜೊತೆಗೆ ನಿರಾಶ್ರಿತರ ಶಿಬಿರ ಸೇರುತ್ತಿರುವವರ ಪರಿಸ್ಥಿತಿಯೂ ಶೋಚನೀಯವಾಗಿದೆ. ಟರ್ಕಿ, ಜೋರ್ಡಾನ್, ಲೆಬನಾನ್, ಇರಾಕ್, ಈಜಿಪ್ಟ್ ಮುಂತಾದ ರಾಷ್ಟ್ರಗಳ ನಿರಾಶ್ರಿತ ಶಿಬಿರಗಳಲ್ಲಿ ಸುಮಾರು 6 ಲಕ್ಷ ಜನರು ಮೂಲಭೂತ ಸೌಕರ್ಯಗಳು ಕೂಡ ಇಲ್ಲದೆ ಝೀರೋ ಡಿಗ್ರಿ ಹವಾಮಾನದಲ್ಲಿ ಹಲವು ತಿಂಗಳುಗಳಿಂದ ಕಾಲ ಕಳೆಯುತ್ತಿದ್ದಾರೆ. ಅವರಿಗೆ ಆಶ್ರಯ ನೀಡಿದ ರಾಷ್ಟ್ರಗಳು ಸಜ್ಜುಗೊಳಿಸಿದ ಸೌಕರ್ಯಗಳಿಗೂ ಮೀರಿದ ಸಂಖ್ಯೆಯಲ್ಲಿ ಜನರು ಜೀವಭಯದಿಂದ ಪಲಾಯನ ಮಾಡಿ ಅಲ್ಲಿ ಆಶ್ರಯ ಪಡೆದಿದ್ದಾರೆ. ಅಂದರೆ 8 ಸಾವಿರ ಜನರಿಗೆ ಮಾತ್ರ ವ್ಯವಸ್ಥೆಯಿರುವ ಜೋರ್ಡಾನ್ನ ನಿರಾಶ್ರಿತ ಶಿಬಿರಗಳಲ್ಲಿ ಒಂದೂವರೆ ಲಕ್ಷದಷ್ಟು ನಿರಾಶ್ರಿತರು ಮೂಲಭೂತ ಸೌಕರ್ಯಗಳಿಲ್ಲದೆ ದುರಂತಮಯ ಜೀವನ ನಡೆಸುತ್ತಿದ್ದಾರೆ. ಬಡ ರಾಷ್ಟ್ರವಾದ ಜೋರ್ಡಾನ್ ಕೂಡಾ ಇವರ ಆರೈಕೆಗೆ ಹರಸಾಹಸ ಪಡುತ್ತಿದೆ. ನಮ್ಮಿಂದ ಈ ಸಮಸ್ಯೆಯನ್ನು ಪರಿಹರಿಸಲಾಗುತ್ತಿಲ್ಲ ಎಂದು ಅಲ್ಲಿನ ಸ್ವಯಂಸೇವಕರು ಅರಬ್ ಚಾನೆಲ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಸೌದಿ, ಕತಾರ್ ಮುಂತಾದ ರಾಷ್ಟ್ರಗಳಿಂದ ನೆರವು ಲಭಿಸುತ್ತಿದ್ದರೂ ಔಷಧಿ, ಆಹಾರಗಳ ಕೊರತೆಯಿಂದಾಗಿ ಕಣ್ಣೆದುರೇ ತಾಯಂದಿರೂ ಹಸುಳೆಯರೂ ಪ್ರಾಣ ಬಿಡುತ್ತಿರುವುದು ಸಾಮಾನ್ಯ ದೃಶ್ಯವಾಗಿದೆ.

ಕಳೆದ ಕೆಲ ವರ್ಷಗಳಿಂದ ಆಂತರಿಕ ಸಂಘರ್ಷದಿಂದ, ಯುದ್ಧದ ಪರಿಣಾಮದಿಂದ ನರಳುತ್ತಿರುವ ಸಿರಿಯಾದ ಪರಿಸ್ಥಿತಿ ಶೋಚನೀಯವಾಗಿದ್ದರೂ ವಿಶ್ವಸಂಸ್ಥೆ ಅಲ್ಲಿನ ಜನರಿಗೆ ಪರಿಣಾಮಕಾರಿಯಾಗಿ ನೆರವಾಗದೇ ಇರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಇಲ್ಲೆಲ್ಲಾ ಅಮೇರಿಕಾದ ಹರಕತ್ತುಗಳು ಅಡಗಿರುವುದರಿಂದ, ವಿಶ್ವಸಂಸ್ಥೆಯಲ್ಲೂ ಅಮೆರಿಕಾದ ಬೇಳೆ ಬೇಯುವುದರಿಂದ ಎಲ್ಲವೂ ಉದ್ದೇಶಪೂರ್ವಕ ಎನ್ನಲಾಗುತ್ತಿದೆ. ಮನುಕುಲ ಸರ್ವನಾಶದ ಸೂಚನೆಯಂತೆ ಭಾಸವಾಗುತ್ತಿರುವ ಇಂತಹ ಸಂಕಟದ ದಿನಗಳಿಂದ ಸಿರಿಯಾ ಹೊರಬರಲು ಜಗತ್ತು ನೆರವಾಗಬೇಕು. ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಂಡ ಪ್ರತಿಯೊಬ್ಬರು ಪ್ರಾರ್ಥಿಸಬೇಕು. ಆದರೆ ಇವೆಲ್ಲಕ್ಕಿಂತ ಮೊದಲು ಸಿರಿಯಾ ಕಟ್ಟುವ ಕೆಲಸವಾಗಬೇಕು.

  • ರಾ.ಚಿಂತನ್

POPULAR  STORIES :

ಕ್ಯಾನ್ಸರ್ ಕಾಲನ್ನ ನುಂಗಿತ್ತು..!! ಮುಂದೇನಾಯ್ತು..?

ಅವರಿಬ್ಬರ ಸಾವಿನ ಅಂತರ ಒಂದು ಗಂಟೆ ಮಾತ್ರ..!

ಈ ಬದುಕನ್ನು ಅತಿಭಾವುಕರಾಗಿ ಪ್ರೀತಿಸೋಣ, ಬೇಕಿದ್ದರೆ ಆ ಪ್ರೀತಿಗೆ ಆತ್ಮ ಹಿರಿಹಿರಿ ಹಿಗ್ಗಿ ಹೃದಯವೇ ಒಡೆದುಹೋಗಲಿ.!

ಭಿಕ್ಷೆ ಹಾಕದ ಆ ಹುಡುಗ ಅದೆಂಥಾ ಕಷ್ಟದಲ್ಲಿದ್ದ ಗೊತ್ತಾ..?! ಪ್ರತ್ಯಕ್ಷವಾಗಿ ಕಂಡರೂ ಪ್ರಮಾಣಿಸಿ ನೋಡ್ಬೇಕು..!

ನಮ್ಮನೆ ಒಂದು ದೇಶ, ಎದುರುಮನೆ ಮತ್ತೊಂದು ದೇಶ..! ಬೆರಗುಗೊಳಿಸುವ ಅಂತರರಾಷ್ಟ್ರೀಯ ಗಡಿಗಳು..

ಇಂಥಾ ಆನೆಯನ್ನೆಲ್ಲಾದರೂ ನೋಡಿದ್ದೀರಾ..? ಚಿಕ್ಕ ವೀಡೀಯೋ ದೊಡ್ಡ ಮೆಸೇಜ್..!

Share post:

Subscribe

spot_imgspot_img

Popular

More like this
Related

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ?

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ? ಮನೆಗಳಲ್ಲಿ ಸ್ಟೀಲ್ ಪಾತ್ರೆಗಳ ಜೊತೆಗೆ...

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...