ಕ್ಯಾನ್ಸರ್ ಕಾಲನ್ನ ನುಂಗಿತ್ತು..!! ಮುಂದೇನಾಯ್ತು..?

0
64

ನನ್ನ ಬಾಲ್ಯ ನಿಮ್ಮೆಲ್ಲರ ಹಾಗೆ ಹಾಯಾಗಿತ್ತು.. ನಾನು ತುಂಬಾ ಆಕ್ಟಿವ್ ಅಂತಾ ನನ್ನ ತುಂಟಾಟ, ಓಡಾಟವನ್ನ ಬಲ್ಲವರು ಹೇಳ್ತಿದ್ರು.. ಅದು ನಿಜ ಕೂಡ.. ಯಾಕಂದ್ರೆ ನಾನು ಜಿಂಕೆಯ ಹಾಗೆ ಅಲ್ಲಿಂದಿಲ್ಲಿಗೆ ಇಲ್ಲಿಂದಲ್ಲಿಗೆ ಓಡಾಡಿಕೊಂಡು ಇದ್ದವಳು.. ಅಂದಹಾಗೆ ನನಗೆ ರನ್ನಿಂಗ್ ಹಾಗೆ ಬಾಸ್ಕೆಟ್ ಬಾಲ್ ಅಂದ್ರೆ ಪಂಚಪ್ರಾಣ.. ಜೊತೆಗೆ ನಾನು ಸ್ಕೂಲ್ ಲೇವಲ್ ನಲ್ಲೆ ಹಲವಾರು ಸ್ಪೋರ್ಟ್ಸ್ ಗಳಲ್ಲಿ ಭಾಗವಹಿಸಿದ್ದೆ.. ನನ್ನ ಕಾಲುಗಳ ಆಟಕ್ಕೊ ಅಥವಾ ಅವುಗಳ ಆಟಕ್ಕೋ ನಾನು ಮನಸೋತಿದ್ದೆ ಅನ್ನಿಸುತ್ತೆ.. ಈ ನನ್ನ ಕಾಲುಗಳು ನನ್ನ ಕೆರಿಯರ್ ಗೆ ಹೊಸದೊಂದು ಆಯಾಮವನ್ನ ತಂದುಕೊಡುವ ನಿರೀಕ್ಷೆಯಿತ್ತು.. ಯಾಕಂದ್ರೆ ನನಗೆ ಮ್ಯಾರಥಾನ್ ಹಾಗೆ ರನ್ನಿಂಗ್ ನಲ್ಲಿ ಸಾಧನೆ ಮಾಡೋ ಹಂಬಲ ದಿನೇ ದಿನೆ ಹೆಚ್ಚಾಗ್ತಿತ್ತು… ಆದ್ರೆ, ಎಲ್ಲದಕ್ಕೂ ಆರಂಭ-ಅಂತ್ಯ ಇರ್ಬೇಕು ಅಲ್ವಾ..? ಅದು ನನ್ನ ಜೀವನದಲ್ಲೂ ಸ್ವಲ್ಪ ವೇಗವಾಗ ಬಂತು ಆದ್ರೆ ಅದು ಆರಂಭ ಅಲ್ಲ ಅಂತ್ಯ… ಆ ಟೈಮ್ ಬರೋ ಅಷ್ಟರಲ್ಲಿ ನಾನು ಎಸ್.ಎಸ್.ಎಲ್.ಸಿ ಎಕ್ಸಾಂ ಮುಗಿಸಿದ್ದೆ.. ಮುಂದಿನ ನನ್ನ ಹಾದಿ ಬಗ್ಗೆ ಮತ್ತಷ್ಟು ಕನಸುಗಳನ್ನ ಹೆಕ್ಕಿ-ಹೆಕ್ಕಿ ಸೇರಿಸಿಕೊಳ್ತಾಯಿದ್ದೆ. ಅದೊಂದು ದಿನ ನನಗೆ ಗೊತ್ತಿಲ್ಲದ ಹಾಗೆ ನನ್ನ ಕಾಲುಗಳಲ್ಲಿ ಯಮಯಾತನೆ ಶುರುವಾಗಿತ್ತು.. ಅಬ್ಬಾ..! ಎಂಥಹ ನೋವು ಅಂತ್ತೀರಾ..? ಕಾಲುಗಳ ಮೇಲೆ ಬಂಡೆ ಬಿದ್ದಹಾಗೆ.. ಎಲ್ಲೋ ನಾನೆ ಆಡೋವಾಗ ಪೆಟ್ಟು ಮಾಡಿಕೊಂಡಿರಬೇಕು ಅಂತಾ ಅಂದುಕೊಂಡೆ.. ಆದ್ರೆ ಡಾಕ್ಟರ್ ಹೇಳಿದ್ದೆ ಬೇರೆ.. ಏನ್ ಮಾಡೋದು `ಎಕ್ಸ್ ಪೆಕ್ಟಟ್ ದಿ ಅನ್ಎಕ್ಸ್ ಪೆಕ್ಟೆಡ್’ ಅಂತಾರಲ್ಲ ಹಾಗೆ ನನ್ನ ಜೀವನದಲ್ಲೂ ಆಗಿ ಹೋಯ್ತು.. ಕನಸುಗಳ ರಾಣಿಯಾಗಿ ಕನಸುಗಳನ್ನೆ ಗೆದ್ದು ನನಸಿನ ಶಿಖರ ಕಟ್ಟಬೇಕು ಅಂತಾ ಹೊರಟವಳಿಗೆ ಎದುರಾಗಿದ್ದು ಕ್ಯಾನ್ಸರ್ ಅನ್ನೋ ಮಹಾ ಮಾರಿ.. ಯಸ್ ನನಗೆ ಬೋನ್ ಮ್ಯಾರೋ ಕ್ಯಾನ್ಸರ್ ಆವರಸಿಬಿಟ್ಟಿತ್ತು.. ಅಂದು ನನ್ನ ತಲೆಯಲ್ಲಿ ಹತ್ತುಹಲವು ಪ್ರಶ್ನೆಗಳು ಕಾಡೋಕೆ ಶುರು ಮಾಡಿದ್ವು.. ಅದರಲ್ಲಿ ಒಂದು ಕೇವಲ 15 ವರ್ಷದ ಆರೋಗ್ಯವಂತಳಾದ ನನ್ನ ಮೇಲೆ ಈ ಕ್ಯಾನ್ಸರ್ ನ ಕಣ್ಣು ಬಿದ್ದಿರೋದು ಭಯಂಕರ ಸಿಟ್ಟನ್ನ ಮೂಡಿಸಿತ್ತು.. ಏನ್ ಮಾಡೋದು ಪಾಲಿಗೆ ಬಂದ ಮೇಲೆ ಅನುಭವಸಿಬೇಕಲ್ಲ.. ಹೀಗಾಗೆ ಆಗ ನಾನು ಮೂರು ಬಾರಿ ಸರ್ಜರಿಗೆ ಒಳಗಾಗಬೇಕಾಯಿತು.. ನನ್ನ ಬಲಗಾಲಿನ ಮೂಳೆಗಳಿದ್ದ ಜಾಗವನ್ನ ಸರ್ಜಿಕಲ್ ಪೈಪ್ ಗಳು, ರಾಡ್ ಗಳು ಆವರಸಿಕೊಂಡ್ವು.. ನೋಡು ನೋಡ್ತಾ ಇದ್ದಹಾಗೆ ನನ್ನ ಜೀವನ ನಾನೇ ಊಹಿಸಲು ಆಗದಷ್ಟು ಬದಲಾಗಿಬಿಡ್ತು… ಆದ್ರೆ ಇದನ್ನ ನಾನು ಮರೆಯಬೇಕಿತ್ತು.. ನಾನು ಮಾಡದ ತಪ್ಪಿಗೆ ಮರುಗೋ ಅವಶ್ಯಕತೆ ನನಗಿಲ್ಲ ಅನ್ನಿಸಿತ್ತು.. ಆಗ ಮರೆಯೋಕೆ ಶುರು ಮಾಡಿದೆ… ಮರೆತೆ ಬಿಟ್ಟೆ… ನನಗೆ ಬಲಗಾಲು ಇಲ್ಲ ಅನ್ನೋದನ್ನೇ ಮರತೇಬಿಟ್ಟೆ… ನೋವಾಯ್ತು, ಅಳು ಕೂಡ ಬಂತು, ಇಷ್ಟಪಟ್ಟ ಜೀವನಕ್ಕಿಂತ ಕಷ್ಟವಾದ ನೋವಿನ ಒಡನಾಟ ಮತ್ತೊಂದು ಜೀವನದ ಪಾಠವನ್ನ ಕಲಿಸೋಕೆ ಶುರು ಮಾಡಿತ್ತು.. ನೋ ಇನ್ನೂ ಹೀಗೆ ಕೂರೋಕೆ ಸಾಧ್ಯವಿಲ್ಲ ಅಂತಾ ನನ್ನ ಕಾಲಿನ ಮೇಲಲ್ಲ, ನನ್ನ ನಂಬಿಕೆಯ ಮೇಲೆ ಎದ್ದು ನಿಂತೆ… ನನಗೆ ಗೊತ್ತಿರೋ ಪೇಂಟಿಂಗ್ ನ ನನ್ನ ಮುಂದಿನ ವೃತಿಯಾಗಿ ಆರಿಸಿಕೊಂಡೆ.. ಬಣ್ಣಗಳ ಗೆರೆಗಳ ಜೊತೆಗೆ ನನ್ನ ಬದುಕಿನ ಬಣ್ಣವನ್ನ ಬದಲಿಸೋಕೆ ಶುರು ಮಾಡ್ದೆ… ಗೆಲುವು ಯಾರಪ್ಪನ ಮನೆ ಆಸ್ತಿಯಲ್ಲ.. ಕ್ಯಾನ್ಸರ್ ನನ್ನ ಒಂದು ಕಾಲನ್ನ ಪಡೆದಿರಬಹುದು.. ನನ್ನೊಳಗಿರೋ ನನ್ನ ಛಲವನ್ನ ಅಲ್ಲ ಅನ್ನೋದನ್ನ ಅರ್ಥ ಮಾಡಿಕೊಂಡೆ.. ನಂಭಿಕೆ-ಛಲ ಜೊತೆಗಿದ್ರೆ ಕ್ಯಾನ್ಸರನ್ನೆ ಕೊಂದು ಮೇಲೆ ಬರಬಹುದು ಅಂತಾ ಹಠ ತೊಟ್ಟೆ… ನನ್ನಿಂದ ಕ್ಯಾನ್ಸರ್ ಕಾಲನ ಪಡೆದುಕೊಂಡ್ರೆ, ನಾನು ಕ್ಯಾನ್ಸರ್ ನ ನಂತರ ಜೀವನದ ನಿಜವಾದ ಆನ್ಸರ್ ನ ಪಡೆದುಕೊಂಡೆ.. ಮತ್ತದೆ ಹಾಸ್ಯಕ್ಕೆ ನಗೋಕೆ ಸಾಧ್ಯವಿಲ್ಲ ಅನ್ನೋದಾದ್ರೆ, ನೋವಿಗಾಗಿ ಯಾಕೆ ಮರುಗಬೇಕು..? ಕೊನೆಯಾದಾಗಿ ಒಂದು ಮಾತು.. ನಮ್ಮ ಜೀವನಕ್ಕೆ ನಾವೇ ಇಂಜಿನಿಯರ್.. ಕಟ್ಟೋಕೆ ಅಡಿಪಾಯ ಹಾಕ್ಬೇಕಾದವ್ರು ನಾವೆ.. ಕೆಡವೋಕೆ ಬಿಡದಂತೆ ಗೋಡೆ ಕಟ್ಟಿಕೊಳ್ಳಬೇಕಾದವ್ರು ನಾವೆ..

  • ಅಶೋಕ್ ಕುಮಾರ್

POPULAR  STORIES :

ಮೂರನೇ ಕ್ಲಾಸ್ ಹುಡುಗಿ ಗ್ರಂಥಪಾಲಕಿ..! ಕೊಳಗೇರಿ ಮಕ್ಕಳಿಗೆ ಗ್ರಂಥಾಲಯ ತೆರೆದ ಜಾಣೆ..!

ಅವರಿಬ್ಬರ ಸಾವಿನ ಅಂತರ ಒಂದು ಗಂಟೆ ಮಾತ್ರ..!

ಈ ಬದುಕನ್ನು ಅತಿಭಾವುಕರಾಗಿ ಪ್ರೀತಿಸೋಣ, ಬೇಕಿದ್ದರೆ ಆ ಪ್ರೀತಿಗೆ ಆತ್ಮ ಹಿರಿಹಿರಿ ಹಿಗ್ಗಿ ಹೃದಯವೇ ಒಡೆದುಹೋಗಲಿ.!

ಭಿಕ್ಷೆ ಹಾಕದ ಆ ಹುಡುಗ ಅದೆಂಥಾ ಕಷ್ಟದಲ್ಲಿದ್ದ ಗೊತ್ತಾ..?! ಪ್ರತ್ಯಕ್ಷವಾಗಿ ಕಂಡರೂ ಪ್ರಮಾಣಿಸಿ ನೋಡ್ಬೇಕು..!

ನಮ್ಮನೆ ಒಂದು ದೇಶ, ಎದುರುಮನೆ ಮತ್ತೊಂದು ದೇಶ..! ಬೆರಗುಗೊಳಿಸುವ ಅಂತರರಾಷ್ಟ್ರೀಯ ಗಡಿಗಳು..

ಇಂಥಾ ಆನೆಯನ್ನೆಲ್ಲಾದರೂ ನೋಡಿದ್ದೀರಾ..? ಚಿಕ್ಕ ವೀಡೀಯೋ ದೊಡ್ಡ ಮೆಸೇಜ್..!

LEAVE A REPLY

Please enter your comment!
Please enter your name here