ಇವತ್ತು ಮಾರ್ಚ್ ೧೭. ಕನ್ನಡದ ಇಬ್ಬರು ಸೂಪರ್ ಸ್ಟಾರ್ ಗಳ ಹುಟ್ಟು ಹಬ್ಬ ಇವತ್ತು. ಒಬ್ಬರು ಕನ್ನಡ ಕಂಡ ಅಪ್ರತಿಮ ಕಲಾವಿದ, ಬರೀ ಹಾವಭಾವಗಳಿಂದಲೇ ತಾನೊಬ್ಬ ಮಹಾನ್ ನಟ ಎಂಬುದನ್ನು ನಿರೂಪಿಸಿದ ನವರಸನಾಯಕ ಜಗ್ಗೇಶ್ ಶಿವಲಿಂಗಪ್ಪ.. ಮತ್ತೊಬ್ಬರು ಅಣ್ಣಾವ್ರ ಕುಟುಂಬದ ಕುಡಿ, ಕ್ಲಾಸ್ ಮಾಸ್ ಎರಡಕ್ಕೂ ಸೈ ಅನಿಸಿಕೊಂಡಿರೋ ಪವರ್ ಸ್ಟಾರ್ ಪುನೀತ್ ರಾಜಕುಮಾರ್.
ಜಗ್ಗೇಶ್ ಅನ್ನೋ ಹೆಸರು ಕೇಳಿದ ಕೂಡಲೇ ಅವರ ಅದೆಷ್ಟೋ ಸಿನಿಮಾಗಳು ಅವರ ಎಕ್ಸ್ ಪ್ರೆಶನ್ ಜೊತೆ ಕಣ್ಣೆದುರು ಬಂದುಬಿಡುತ್ತೆ. ನವರಸನಾಯಕ ಅನ್ನೋ ಬಿರುದು ಅವರಿಗೆ ಶೇಕಡಾ ನೂರಕ್ಕೆ ನೂರರಷ್ಟು ಒಪ್ಪುತ್ತೆ. ಅವರೇ ಒಂಥರಾ ಬೇರೆ, ಅವರ ಸ್ಟೈಲೇ ಒಂಥರಾ ಬೇರೆ..! ಅವರ ಸಿನಿಮಾಗಳು ಅಂದ್ರೆ ಅಲ್ಲಿ ಮನರಂಜನೆ ಕಟ್ಟಿಟ್ಟ ಬುತ್ತಿ. ಕೊಟ್ಟ ಕಾಸಿಗಂತೂ ಮೋಸ ಆಗದ ಹಾಗೆ ಸಕತ್ ನಗಿಸೋಕೆ ಸಿಕ್ಕಾಪಟ್ಟೆ ಪ್ರಯತ್ನ ಮಾಡಿರ್ತಾರೆ ಜಗ್ಗೇಶ್. ಅದರಲ್ಲೂ ನಿರ್ಮಾಪಕರ ನಟ ಅಂತಲೇ ಕರೆಸಿಕೊಳ್ಳೋ ಜಗ್ಗೇಶ್ ಅವರು ಗ್ಯಾರಂಟಿ ರಿಟರ್ನ್ ಹೀರೋ ಅಂತಲೇ ಖ್ಯಾತಿ. ವಿಲನ್ ಆಗಿ, ಪೋಷಕ ನಟನಾಗಿ ಕಾಣಿಸಿಕೊಳ್ತಿದ್ದ ಜಗ್ಗೇಶ್ ಅವರು ಕಾಲಕ್ರಮೇಣ ಅವರ ಅದ್ಭುತ ಟ್ಯಾಲೆಂಟ್ ನಿಂದಾಗಿ ಹೀರೋ ಆದ್ರು, ದೊಡ್ಡ ಸ್ಟಾರ್ ಆದ್ರು. ಜಗ್ಗೇಶ್ ಸಿನಿಮಾ ಅಂದ್ರೆ ಜನ ಥಿಯೇಟರ್ ಗೆ ನೂಕುನುಗ್ಗಲಿನಲ್ಲಿ ಹೋಗೋ ಹಾಗೆ ಮಾಡಿದ್ರು. ಮನರಂಜನೆಯ ರಸದೌತಣವನ್ನೇ ನೀಡಿದ್ರು…ಇವತ್ತಿಗೂ ಜಗ್ಗೇಶ್ ಸಿನಿಮಾ ಅಂದ್ರೆ ಅದರಲ್ಲಿ ಏನೋ ಇದ್ದೇ ಇರುತ್ತೆ ಅನ್ನೋದು ಕನ್ನಡ ಪ್ರೇಕ್ಷಕನಿಗೆ ಗ್ಯಾರಂಟಿ.
ಪವರ್ ಸ್ಟಾರ್ ಬಗ್ಗೆ ಅಂತೂ ಹೇಳೋದೇಬೇಕಾಗಿಲ್ಲ. ಅವರೊಂಥರಾ ಪವರ್. ಅವರು ಸ್ಕ್ರೀನ್ ಮೇಲೆ ಬಂದ್ರೆ ನಿಜವಾದ ಪವರ್ ಬಂದಹಾಗೆ. ಅವರ ಲುಕ್, ಫೈಟು, ಡ್ಯಾನ್ಸಿಗೆ ಅಭಿಮಾನಿಗಳು ಫುಲ್ ಖುಷ್. ಅವರ ಸಿನಿಮಾಗಳಂತೂ ಜನರಿಗೆ ಬೇಸರ ತರಿಸಿದ ಉದಾಹರಣೇನೇ ಇಲ್ಲ. ಅಪ್ಪು ಹೀರೋ ಅಂದ್ರೆ ಅದು ಅದ್ಭುತ ಅಂತಾನೆ ಅರ್ಥ. ಅದು ಆ ಕಾಲದ ಬೆಟ್ಟದ ಹೂವಿನಿಂದ ಹಿಡಿದು ಇವತ್ತಿನ ಚಕ್ರವ್ಯೂಹ ತನಕ ಹಾಗೇನೇ. ಪುನೀತ್ ವಿಶೇಷ ಏನಪ್ಪ ಅಂದ್ರೆ, ಆ ಕಡೆ ಕ್ಲಾಸ್ ಆದ್ರೂ ಸರಿ, ಈ ಕಡೇ ಮಾಸ್ ಆದ್ರೂ ಸರಿ, ನುಂಗಿ ನೀರು ಕುಡಿದುಬಿಡ್ತಾರೆ. ಕ್ಯಾಮೆರಾ ಎದುರಿಗಿದೆ ಅನ್ನೋದೇ ಮರೆತೇ ಹೋಗಿದೆ ಅನ್ನೋ ಹಾಗೆ ಲೀಲಾಜಾಲವಾಗಿ ಪರ್ಫಾರ್ಮ್ ಮಾಡ್ತಿರ್ತಾರೆ. ಅವರ ಮಿಲನ ಸಿನಿಮಾ ನೋಡದೇ ಇರೋ ಕನ್ನಡಿಗನೇ ಇಲ್ಲ ಅನ್ನೋ ಮಾತೂ ಇದೆ. ಇನ್ನೇನು ರಿಲೀಸಿಗೆ ರೆಡಿ ಇರೋ ಚಕ್ರವ್ಯೂಹ ಇರೋಬರೋ ರೆಕಾರ್ಡೆಲ್ಲಾ ಬ್ರೇಕ್ ಮಾಡುತ್ತೆ ಅಂತ ಗಾಂಧಿನಗರ ಮಾತಾಡಿಕೊಳ್ತಿದೆ.
ಒಟ್ಟಾರೆ ಈ ಇಬ್ಬರೂ ಸೂಪರ್ ಸ್ಟಾರ್ ಗಳೂ ಒಂದೇ ದಿನ ಹುಟ್ಟುಹಬ್ಬ ಆಚರಿಸಿಕೊಳ್ತಿದ್ದಾರೆ. ಇವರಿಬ್ಬರೂ ಕನ್ನಡ ಸಿನಿಮಾದಾಸ್ತಿ ಇದ್ದಂತೆ.. ಇವರಿಬ್ಬರಿಗೂ ಇನ್ನಷ್ಟು ಯಶಸ್ಸು ಸಿಗಲಿ, ಜೀವನಪೂರ್ತಿ ಸುಖಶಾಂತಿ ನೆಮ್ಮದಿ ಇರಲಿ ಅಂತ ಕನ್ನಡಿಗ ಅಭಿಮಾನಿಗಳ ಪರವಾಗಿ ಹಾರೈಸೋಣ..ಹುಟ್ಟುಹಬ್ಬದ ಶುಭಾಶಯಗಳು..
POPULAR STORIES :
ಕ್ಯಾನ್ಸರ್ ಕಾಲನ್ನ ನುಂಗಿತ್ತು..!! ಮುಂದೇನಾಯ್ತು..?
ಅವರಿಬ್ಬರ ಸಾವಿನ ಅಂತರ ಒಂದು ಗಂಟೆ ಮಾತ್ರ..!
ಈ ಬದುಕನ್ನು ಅತಿಭಾವುಕರಾಗಿ ಪ್ರೀತಿಸೋಣ, ಬೇಕಿದ್ದರೆ ಆ ಪ್ರೀತಿಗೆ ಆತ್ಮ ಹಿರಿಹಿರಿ ಹಿಗ್ಗಿ ಹೃದಯವೇ ಒಡೆದುಹೋಗಲಿ.!
ಭಿಕ್ಷೆ ಹಾಕದ ಆ ಹುಡುಗ ಅದೆಂಥಾ ಕಷ್ಟದಲ್ಲಿದ್ದ ಗೊತ್ತಾ..?! ಪ್ರತ್ಯಕ್ಷವಾಗಿ ಕಂಡರೂ ಪ್ರಮಾಣಿಸಿ ನೋಡ್ಬೇಕು..!
ನಮ್ಮನೆ ಒಂದು ದೇಶ, ಎದುರುಮನೆ ಮತ್ತೊಂದು ದೇಶ..! ಬೆರಗುಗೊಳಿಸುವ ಅಂತರರಾಷ್ಟ್ರೀಯ ಗಡಿಗಳು..
ಇಂಥಾ ಆನೆಯನ್ನೆಲ್ಲಾದರೂ ನೋಡಿದ್ದೀರಾ..? ಚಿಕ್ಕ ವೀಡೀಯೋ ದೊಡ್ಡ ಮೆಸೇಜ್..!