ಬಹುಭಾಷ ನಟಿಮಣಿಯಾಗಿ ಸಿನಿ ರಸಿಕರ ಮನ ಗೆದ್ದ ಚೆಲುವೆ ಅಂದ್ರೆ ಪ್ರಿಯಾಮಣಿ. ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಸೇರಿದಂತೆ ದಕ್ಷಿಣ ಭಾರತದ ಅಷ್ಟು ಭಾಷೆಯ ಚಿತ್ರರಂಗದಲ್ಲೂ ನಟಿಯಾಗಿ ತಮ್ಮದೇ ಛಾಪು ಮೂಡಿಸಿರುವ ಅವರು, ಕನ್ನಡದಲ್ಲೇಗ ವಿಭಿನ್ನ ಪಾತ್ರಗಳ ಮೂಲಕವೇ ತೆರೆಮೇಲೆ ರಂಜಿಸಿ ಎಲ್ಲಾರ ಗಮನ ಸೆಳೆಯುತ್ತಿದ್ದಾರೆ. ಇದೀಗ ಪ್ರಿಯಾಮಣಿಗೆ 56ನೇ ಹುಟ್ಟುಹಬ್ಬಗೊತ್ತಾ. ಎಸ್.. ಯುವ ಪ್ರತಿಭೆ ರಾಜೇಶ್ ಆನಂದಲೀಲಾ ನಿರ್ದೇಶನದ ‘56’ಸಿನಿಮಾದ ಮೋಷನ್ ಟೀಸರ್ ನಾಯಕಿ ಪ್ರಿಯಾಮಣಿ ಅವರ ಹುಟ್ಟುಹಬ್ಬದಂದೇ ಬಿಡುಗಡೆಯಾಗಿದೆ. ಇದೊಂದು ಸೈನ್ಸ್ ಫಿಕ್ಸೆನ್. ಪ್ರಿಯಾಮಣಿ ಪಾಲಿಗೂ ಇದೊಂದು ಸ್ಪೆಷಲ್ ಸಿನಿಮಾವಾಗಲಿದೆ. ಸಿನಿ ಜರ್ನಿಗೂ ಚಿತ್ರದ ಟೈಟಲ್ಗೂ ಸಾಮ್ಯತೆ ಇದೆ. ಅದೇನಪ್ಪಾ ಅಂದ್ರೆ 56 ಎನ್ನುವುದು ಚಿತ್ರದ ಬರೀ ಚಿತ್ರದ ಟೈಟಲ್ ಮಾತ್ರವಲ್ಲ, ಭಹುಭಾಷಾ ನಟಿಮಣಿಯಾಗಿ ಪ್ರಿಯಾಮಣಿ ನಟಿಸಿದ 56ನೇ ಸಿನಿಮಾವೂ ಹೌದು.
ಸೈನ್ಸ್ ಫಿಕ್ಸನ್ ಜತೆಗೆ ಮರ್ಡರ್ ಮಿಸ್ಟ್ರಿಯ ಕಥಾ ಹಂದರದ ಈ ಚಿತ್ರದಲ್ಲಿ ಸಿಬಿಐ ಅಧಿಕಾರಿಯಾಗಿ ಪ್ರಿಯಾಮಣಿ ಕಾಣಿಸಿಕೊಂಡಿದ್ದಾರೆ. ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿರುವ ಪ್ರಿಯಾಮಣಿ ಅಭಿಮಾನಿಗಳಿಗೆ ಇದೊಂದು ಒಳ್ಳೆಯ ಮನರಂಜನೆ ಸಿನಿಮಾ ಆಗೋದಂತೂ ಗ್ಯಾರೆಂಟಿ.
ಪ್ರಿಯಾಮಣಿಗೆ 56 ವರ್ಷ ಆಯ್ತಾ..?
Date: