ಸ್ಯಾಂಡಲ್ ವುಡ್ ನಲ್ಲಿ ಹೊಸಬರು ಹೆಚ್ಚು ಹೆಚ್ಚಾಗಿ ಬರ್ತಾ ಇದ್ದಾರೆ. ದಿನದಿಂದ ದಿನಕ್ಕೆ ಹೊಸ ಕಲಾವಿದರ ಪ್ರವೇಶ ಕನ್ನಡ ಚಿತ್ರರಂಗದಲ್ಲಾಗುತ್ತಿದೆ.
ಈಗ ಈ ಸಾಲಿಗೆ ಮಂಗಳೂರು ಬೆಡಗಿಯೊಬ್ಬರು ಬರ್ತಾ ಇದ್ದಾರೆ.
ಮಂಗಳೂರು ಮೂಲದ ಯಶಸ್ವಿನಿ ಶೆಟ್ಟಿ ಸ್ಯಾಂಡಲ್ ವುಡ್ ಗೆ ಗ್ರ್ಯಾಂಡ್ ಎಂಟ್ರಿ ಕೊಡ್ತಾ ಇದ್ದಾರೆ.
ಛೋಟಾ ಬಾಂಬೆ ಎನ್ನುವ ಸಿನಿಮಾ ಮೂಲಕ ಯಶಸ್ವಿನಿ ಸ್ಯಾಂಡಲ್ ವುಡ್ ಜರ್ನಿ ಶುರು ಮಾಡ್ತಾ ಇದ್ದಾರೆ. ಈ ಸಿನಿಮಾದಲ್ಲಿ ಯಶಸ್ವಿನಿ ಪತ್ರಕರ್ತೆಯಾಗಿ ಕಾಣಿಸಿಕೊಳ್ಳಲಿದ್ದಾರೆ.
ವಿಶೇಷವೆಂದರೆ ಯಶಸ್ವಿನಿ ರಿಯಲ್ ಲೈಫ್ ನಲ್ಲಿಯೂ ಪತ್ರಿಕೋದ್ಯಮ ವಿದ್ಯಾರ್ಥಿನಿ..!
ಚಂದದ ಚೆಲುವೆ ಯಶಸ್ವಿನಿ ಪತ್ರಿಕೋದ್ಯಮದ ಜೊತೆಗೆ ಮಾಡೆಲಿಂಗ್ ಕ್ಷೇತ್ರದಲ್ಲೂ ಬ್ಯುಸಿ ಇದ್ದಾರೆ. ಜಾಹಿರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಬೆಳ್ಳಿತೆರೆಗೆ ಹೊಸ ಎಂಟ್ರಿ ಆದರೂ ಯಶಸ್ವಿನಿ ಕಿರುತೆರೆ ಮೂಲಕ ಮನೆಮಾತಾಗಿದ್ದಾರೆ.
ಟಾಪರ್ ಅತ್ತೆ ಪಾಪರ್ ಅಳಿಯ ,ಮಮತೆಯ ಕರೆಯೋಲೆ, ನನ್ ಹೆಂಡ್ತಿ ಎಂಬಿಬಿಎಸ್, ಧಾರವಾಹಿಗಳಲ್ಲಿ ಯಶಸ್ವಿನಿ ಅವರು ನಟಿಸಿದ್ದಾರೆ. ಅಷ್ಟೇ ಅಲ್ಲದೆ ಅನೇಕ ಕಿರುಚಿತ್ರಗಳಲ್ಲಿಯೂ ನಟಿಸಿದ್ದಾರೆ. ಇದೀಗ ಸ್ಯಾಂಡಲ್ ವುಡ್ ಗೆ ಬರ್ತಾ ಇದ್ದಾರೆ. ಮಂಗಳೂರ ಸುಂದರಿ ಯಶಸ್ವಿನಿಗೆ ಶುಭವಾಗಲಿ.