ಬಾಲಿವುಡ್ ನಟಿ ವಿದ್ಯಾ ಬಾಲನ್ ಸದ್ಯ ಸಿನಿಮಾದಿಂದ ದೂರವಿದ್ದಾರೆ. ಕುಟುಂಬ ಹಾಗೂ ಸ್ನೇಹಿತರ ಜೊತೆ ವಿದ್ಯಾ ಅಮೂಲ್ಯ ಸಮಯ ಕಳೆಯುತ್ತಿದ್ದಾರೆ. ಬಾಲಿಯಲ್ಲಿ ವಿದ್ಯಾ ಸ್ನೇಹಿತರ ಜೊತೆ ರಜೆ ಮಜಾ ಮಾಡ್ತಿದ್ದು, ಅದ್ರ ಫೋಟೋಗಳನ್ನು ವಿದ್ಯಾ ಹಂಚಿಕೊಂಡಿದ್ದಾರೆ.
ವಿದ್ಯಾ ಬಾಲನ್ ಹಂಚಿಕೊಂಡ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಕಡಲ ಕಿನಾರೆಯಲ್ಲಿ ಎಂಜಾಯ್ ಮಾಡ್ತಿರುವ ವಿದ್ಯಾ ಫೋಟೋ ಜೊತೆ ಈ ಹ್ಯಾಶ್ ಟ್ಯಾಗ್ ಹಾಕಿದ್ದಾರೆ. ಬಾಲಿವುಡ್ ನ ಅನೇಕ ಕಲಾವಿದರು ವಿದ್ಯಾ ಫೋಟೋಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಸೋನಾಕ್ಷಿ ಸಿನ್ಹಾ, ನನ್ನನ್ನು ಏಕೆ ಕರೆದುಕೊಂಡು ಹೋಗಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ.