ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಕನ್ನಡ ಚಿತ್ರರಂಗ ಮಾತ್ರವಲ್ಲದೆ ಹಿಂದಿ, ತೆಲುಗು ಸಿನಿರಂಗದಲ್ಲೂ ಛಾಪು ಮೂಡಿಸಿರುವ ನಟ. ಸಿನಿಮಾ, ಕಿರುತೆರ, ಜೊತೆಗೆ ಸೆಲೆಬ್ರಿಟಿ ಕ್ರಿಕೆಟ್ ಮೂಲಕ ಕ್ರಿಕೆಟ್ನಲ್ಲೂ ಬ್ಯುಸಿ ಇರುವ ವ್ಯಕ್ತಿ. ಸದಾ ಒಂದಿಲ್ಲೊಂದು ಕೆಲಸದಲ್ಲಿ ಬ್ಯುಸಿ ಇರುವ ಸುದೀಪ್ ಕನ್ನಡ ಚಿತ್ರರಂಗಕ್ಕೆ ಬಹು ದೊಡ್ಡ ಆಸ್ತಿ ಎಂದರೆ ತಪ್ಪಾಗಲಾರದು. ಈಗ ಸುದೀಪ್ ಅವರ ನೆಂಟ ಆರ್ಯ ಸ್ಯಾಂಡಲ್ವುಡ್ನಲ್ಲಿ ಗಟ್ಟಿಯಾಗಿ ನೆಲೆ ನಿಲ್ಲುವ ಭರವಸೆ ಮೂಡಿಸಿದ್ದಾರೆ.
ಸುದೀಪ್ ಅವರ ಸಂಬಂಧಿ ಆರ್ಯ ಈ ಹಿಂದೆ ಸುದೀಪ್ ನಟನೆಯ ಮುಸ್ಸಂಜೆ ಮಾತು ಸಿನಿಮಾದಲ್ಲಿ ನಟಿಸಿದ್ದರು. ಈ ಸಂಜೆ ಸಿನಿಮಾದಲ್ಲಿ ಹೀರೋ ಆಗಿ ಅಭಿನಯಿಸಿದ್ದರು. ಈಗ ಒಂಟಿ ಸಿನಿಮಾದ ನಾಯಕನಾಗಿ ನಿಮ್ಮ ಮುಂದೆ ಬರುತ್ತಿದ್ದಾರೆ. ಒಂಟಿ ಒರಟ ಐ ಲವ್ ಯು ಡೈರೆಕ್ಟರ್ ಶ್ರೀ ನಿರ್ದೇಶನದ ಸಿನಿಮಾ. ಈ ಸಿನಿಮಾಕ್ಕೆ ಆರ್ಯ ನಾಯಕ ನಟ ಮಾತ್ರವಲ್ಲ. ಪ್ರೊಡ್ಯೂಸರ್ ಕೂಡ ಹೌದು..! ಈ ಸಿನಿಮಾಕ್ಕೆ ಮೇಘನಾ ರಾಜ್ ನಾಯಕಿ.
ಮದುವೆ ಆದಮೇಲೆ ಮೇಘನಾ ಅವರ ಒಂದೇ ಒಂದು ಸಿನಿಮಾ ರಿಲೀಸ್ ಆಗಿರಲಿಲ್ಲ. ಒಂಟಿ ಮದ್ವೆ ನಂತರ ಬರುತ್ತಿರುವ ಮೇಘನಾ ಅವರ ಮೊದಲ ಸಿನಿಮಾ.
ಒಂಟಿಯ ಟ್ರೇಲರ್ ರಿಲೀಸ್ ಆಗಿದ್ದು ಆರ್ಯ ನಟನೆ ಗಮನ ಸೆಳೆದಿದೆ. ಆರ್ಯ ಮತ್ತೊಬ್ಬ ಆರಡಿ ಕಟೌಟ್ ಆಗಿ ಸಿನಿ ಜರ್ನಿಯಲ್ಲಿ ಬಹು ದೊಡ್ಡ ಸಕ್ಸಸ್ ಕಾಣುವ ನಿರೀಕ್ಷೆ ಮೂಡಿಸಿದ್ದಾರೆ.
ಆರ್ಯ ನಟನೆಯ ಮೂಲಕ ಗಮನ ಸೆಳೆದಿದ್ದಾರೆ.
ಕನ್ನಡ ಚಿತ್ರರಂಗಕ್ಕೆ ಹೊಸಬರ ಆಗಮನ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಬಂದವರು ಗಟ್ಟಿಯಾಗಿ ನೆಲೆ ನಿಲ್ಲುತ್ತಿದ್ದಾರೆ ಕೂಡ. ಅವರ ಸಾಲಿನಲ್ಲಿ ಈಗ ಸುದೀಪ್ ಅವರ ಸಂಬಂಧಿ ಆರ್ಯ ಇದ್ದಾರೆ. ದರ್ಶನ್ ಅಳಿಯ ಕೂಡ ಸಿನಿರಂಗ ಪ್ರವೇಶಿಸಿದ್ದಾರೆ. ಈಗ ಕಿಚ್ಚನ ಸಂಬಂಧಿ ಕೂಡ ಎಂಟ್ರಿ ಆಗುತ್ತಿದ್ದಾರೆ.