ಆಕೆ ಕನ್ನಡ ಚಿತ್ರರಂಗದ ಸ್ಟಾರ್ ನಟಿ..! ಒಂದೇ ಒಂದು ಸಿನಿಮಾದಿಂದ ಸ್ಟಾರ್ ಪಟ್ಟಕ್ಕೇರಿ ಅದನ್ನು ಹಾಗೇ ಮೈಂಟೇನ್ ಮಾಡಿಕೊಂಡು ಬರುತ್ತಿರುವ ಚೆಲುವೆ. ಹೆಸರು ರಶ್ಮಿಕಾ ಮಂದಣ್ಣ.
ರಶ್ಮಿಕಾ ಮಂದಣ್ಣ ಅವರ ಹೆಸರು ಯಾರಿಗೆ ತಾನೆ ಗೊತ್ತಿಲ್ಲ. 2016ರಲ್ಲಿ ತೆರೆಕಂಡ ಕಿರಿಕ್ ಪಾರ್ಟಿ ಸಿನಿಮಾ ಮೂಲಕ ಸ್ಯಾಂಡಲ್ವುಡ್ ಗೆ ಎಂಟ್ರಿ ಕೊಟ್ಟವರು. ಅದಾದ ಮೇಲೆ ಗೋಲ್ಡನ್ ಸ್ಟಾರ್ ಗಣೇಶ್ ಅವರಿಗೆ ನಾಯಕಿಯಾಗಿ ಚಮಕ್ ಚಿತ್ರದಲ್ಲಿ, ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರಿಗೆ ಜೋಡಿಯಾಗಿ ಅಂಜನೀಪುತ್ರದಲ್ಲಿ ನಟಿಸಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಜೊತೆ ಯಜಮಾನ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಧ್ರವ ಸರ್ಜಾ ಅವರ ಜೊತೆ ಪೊಗರು ಸಿನಿಮಾದಲ್ಲಿ ನಟಿಸಿದ್ದು, ಅದಿನ್ನೂ ರಿಲೀಸ್ ಆಗಬೇಕಿದೆ.
ಕನ್ನಡದಿಂದ ಟಾಲಿವುಡ್ನಲ್ಲೂ ಅವಕಾಶ ಗಿಟ್ಟಿಸಿಕೊಂಡ ಕೊಡಗಿನ ಈ ಚೆಲುವೆ ಅಲ್ಲೂ ಗಟ್ಟಿಯಾಗಿ ನೆಲೆ ನಿಲ್ಲುತ್ತಿದ್ದಾರೆ. ಅವರು ತೆಲುಗಿನಲ್ಲಿ ನಟಿಸಿರುವ ಗೀತಾಗೋವಿಂದಂದ ಸೂಪರ್ ಹಿಟ್ ಆಗಿದೆ. ಡಿಯರ್ ಕಾರ್ಮೇಡ್ ರಿಲೀಸ್ ಗೆ ರೆಡಿಯಾಗಿದ್ದು, ನಿರೀಕ್ಷೆ ಹೆಚ್ಚಿಸಿದೆ. ಪ್ರಿನ್ಸ್ ಮಹೇಶ್ ಬಾಬುಗೆ ನಾಯಕಿಯಾಗಿ ಸರಿಲೇರು ನೀಕೆವರು ಚಿತ್ರಕ್ಕೆ ನಾಯಕಿಯಾಗಿ ಮೊನ್ನೆ ಮೊನ್ನೆಯಷ್ಟೇ ಆಯ್ಕೆಯಾಗಿದ್ದಾರೆ. ಇದರ ಬೆನ್ನಲ್ಲೇ ನಿತಿನ್ ರೆಡ್ಡಿ ಅವರ ಜೊತೆ ಭೀಷ್ಮ ಚಿತ್ರದಲ್ಲಿ ಸ್ಕ್ರೀನ್ ಶೇರ್ ಮಾಡಿಕೊಳ್ಳುತ್ತಿದ್ದಾರೆ. ಈ ಸಿನಿಮಾಕ್ಕೆ ಸೂರ್ಯದೇವರ ನಾಗವಂಶಿ ನಿರ್ಮಿಸುತ್ತಿದ್ದಾರೆ. ವೆಂಕಿ ಕುಡುಮುಲಾ ನಿರ್ದೇಶನ ಮಾಡುತ್ತಿದ್ದಾರೆ.
ಹೀಗೆ ಕನ್ನಡತಿ ರಶ್ಮಿಕಾ ತೆಲುಗಿನಲ್ಲಿ ಬ್ಯುಸಿ ಆಗುತ್ತಿದ್ದಾರೆ.
ಟಾಲಿವುಡ್ನಲ್ಲೀಗ ಕೊಡಗಿನ ಬೆಡಗಿ ರಶ್ಮಿಕಾ ಅವ್ರೇ ಟಾಪ್ ಹೀರೋಯಿನ್..!
Date: