ಕಣ್ಣೆದುರೇ ಭಾವಿ ಪತ್ನಿ ನೇಣು ಬಿಗಿದುಕೊಂಡಳು..? ಭಾವಿ ಪತಿಗೆ ಇದೆಂಥಾ ಶಾಕ್…!!

Date:

 

ಇನ್ನೆರಡು ತಿಂಗಳಷ್ಟೆ ಮದುವೆಗೆ ಬಾಕಿಯಿತ್ತು. ಅದ್ಯಾಕೋ ಆ ಯುವತಿಗೆ ಇಷ್ಟು ಬೇಗ ಮದುವೆ ಇಷ್ಟವಿರಲಿಲ್ಲ. ಹಾಗಂತ ಆ ಹುಡುಗ ಬೇಡ ಎಂದೆನಿಸಿರಲಿಲ್ಲ. ಮದ್ವೆಯನ್ನು ಸ್ವಲ್ಪ ಕಾಲ ಮುಂದೂಡಬೇಕಿತ್ತು ಅಷ್ಟೆ. ಈ ವಿಚಾರವಾಗಿ ಮೊನ್ನೆ ರಾತ್ರಿ ಭಾವಿ ದಂಪತಿಗಳು ಕಿತ್ತಾಡಿಕೊಂಡಿದ್ದಾರೆ. ವಿಡಿಯೋ ಕಾಲಿಂಗ್, ವಿಡಿಯೋ ಚಾಟಿಂಗ್ ಮೂಲಕವೇ ಮನಃಸ್ತಾಪ ತಾರಕ್ಕಕ್ಕೇರಿದೆ. ಸಿಟ್ಟಾದ ಯುವತಿ ಭಾವಿ ಪತಿ ನೋಡುತ್ತಿದ್ದಂತೆ ನೇಣು ಬಿಗಿದುಕೊಂಡಿದ್ದಾಳೆ. ವಿಡಿಯೋ ಚಾಟಿಂಗ್ನಲ್ಲಿ ಈ ಎಲ್ಲಾ ದೃಶ್ಯಾವಳಿಗಳನ್ನು ನೋಡುತ್ತಿದ್ದವನಿಗೆ ಹೆಂಡತಿಯಾಗುವವಳ ಜೀವವನ್ನು ಉಳಿಸಲಾಗಲಿಲ್ಲ. ಅಲ್ಲಿಗೂ ಸಂಬಂಧಿಕರಿಗೆ ಕಾಲ್ ಮಾಡಿ ವಿಚಾರ ತಿಳಿಸಿದ್ದ. ಅವರೊಂದಿಗೆ ಆಕೆ ವಾಸವಿದ್ದ ಪಿಜಿಗೆ ದೌಡಾಯಿಸಿದ್ದ. ಆದರೆ ಅಷ್ಟರಲ್ಲಿ ಅವಳ ಪ್ರಾಣಪಕ್ಷಿ ಹಾರಿಹೋಗಿತ್ತು. ಸಣ್ಣ ಜಗಳವನ್ನು ತಾಳದೇ ಅವಳು ಬದುಕನ್ನು ಮುಗಿಸಿಕೊಂಡಳು. ಅವಳ ಜೊತೆ ಜಗಳ ಕಾದ ಇವನಿಗೆ ಸಾಯುವವರೆಗೂ ಆ ಕ್ಷಣ ನೆನಪಾಗುತ್ತಲೇ ಇರುತ್ತದೆ. ಇಂತಹ ಪರಿಸ್ಥಿತಿ ಯಾರಿಗೂ ಬರಬಾರದು ಬಿಡಿ..!

ಅಂದಹಾಗೆ ಇದು ಮೊನ್ನೆ ಸಿಕಂದರಾಬಾದಿನ ಸಿಂಧಿ ಕಾಲೋನಿಯ ಪಿಜಿಯಲ್ಲಿ ನೇಣುಬಿಗಿದುಕೊಂಡು ತೀರಿಹೋದ ಜೆಮಿನಿ ವಾಹಿನಿಯ ಚಂದದ ನಿರೂಪಕಿ ನಿರೋಶಾಳ ಕಥೆ. ಅವಳ ಜೊತೆ ಅಂತಿಮ ಕ್ಷಣದವರೆಗೆ ಜೊತೆಗಿದ್ದ ಆ ಭಾವಿ ಪತಿಯ ಹೆಸರು ರಿತ್ವಿಕ್. ವಿಡಿಯೋ ಜಾಕಿಯಾಗುವುದಕ್ಕೂ ಮುನ್ನ ಪತ್ರಕರ್ತೆಯಾಗಿದ್ದ ನಿರೋಶಾ ಬುಧವಾರ ರಾತ್ರಿ ತೆಗೆದುಕೊಂಡಿದ್ದು ಸಣ್ಣ ನಿರ್ಧಾರವನ್ನಲ್ಲ. ರಿತ್ವಿಕ್ ಜೊತೆ ಶುರುವಾದ ಕಿರುಜಗಳಕ್ಕೆ ಅವನ ಕಣ್ಣೆದುರಿಗೆ ಜೀವ ಬಿಟ್ಟಿದ್ದಳು. ಇದಕ್ಕಿಂತ ದೊಡ್ಡ ಶಿಕ್ಷೆಯೇನಿದೆ ಹೇಳಿ..? ಆದರೆ ಮದ್ವೆ ಕಾರಣಕ್ಕೇ ನಿರೋಶಾ ಸಾವಿಗೀಡಾಗಿದ್ದಾಳೆ ಎನ್ನುವುದು ಇನ್ನೂ ಖಾತ್ರಿಯಾಗಿಲ್ಲ. ಪೊಲೀಸರ ತನಿಖೆ ಮುಗಿದ ಮೇಲೆ ಸತ್ಯ ತಿಳಿಯಬೇಕಿದೆ.

 

POPULAR  STORIES :

ಅಬ್ಬಾ ಜಸ್ಟ್ ಮಿಸ್..! ಈ ಮಹಿಳೆಯರ ಅದೃಷ್ಟ ನೆಟ್ಟಗಿತ್ತು..! ಇಲ್ದೇ ಹೋಗಿದ್ರೆ?

ಬೆತ್ತಲಾದ ಓವೈಸಿ.. ಬಟ್ಟೆ ಮುಚ್ಚಿಕೊಂಡ ಅಫ್ರಿದಿ..!!

ಪೆಟ್ರೋಲ್ ರೇಟು.. ಮೋದಿ ಏಟು..!? ಒಂದು ಲೀಟರ್ ಪೆಟ್ರೋಲ್ಗೆ ಹನ್ನೆರಡು ರೂಪಾಯಿ..?!!

ಭೂಮಿಗೆ ಜ್ವರ ಬಂದಿದೆ..!?

ನಾಯಿ, ಬೆಕ್ಕುಗಳು ಮತ್ತು ಇಸ್ಲಾಂ ರಾಷ್ಟ್ರ..!?

ಭಿಕ್ಷೆ ಹಾಕದ ಆ ಹುಡುಗ ಅದೆಂಥಾ ಕಷ್ಟದಲ್ಲಿದ್ದ ಗೊತ್ತಾ..?! ಪ್ರತ್ಯಕ್ಷವಾಗಿ ಕಂಡರೂ ಪ್ರಮಾಣಿಸಿ ನೋಡ್ಬೇಕು..!

ನಮ್ಮನೆ ಒಂದು ದೇಶ, ಎದುರುಮನೆ ಮತ್ತೊಂದು ದೇಶ..! ಬೆರಗುಗೊಳಿಸುವ ಅಂತರರಾಷ್ಟ್ರೀಯ ಗಡಿಗಳು..

ಇಂಥಾ ಆನೆಯನ್ನೆಲ್ಲಾದರೂ ನೋಡಿದ್ದೀರಾ..? ಚಿಕ್ಕ ವೀಡೀಯೋ ದೊಡ್ಡ ಮೆಸೇಜ್..!

Share post:

Subscribe

spot_imgspot_img

Popular

More like this
Related

ಬಿಹಾರ ಸಿಎಂ ಸ್ಥಾನಕ್ಕೆ ನಿತೀಶ್ ಕುಮಾರ್ ರಾಜೀನಾಮೆ

ಬಿಹಾರ ಸಿಎಂ ಸ್ಥಾನಕ್ಕೆ ನಿತೀಶ್ ಕುಮಾರ್ ರಾಜೀನಾಮೆ ನವದೆಹಲಿ: ಇಂದು ಮುಖ್ಯಮಂತ್ರಿ ಸ್ಥಾನಕ್ಕೆ...

ಬಾಂಗ್ಲಾ ಹಿಂಸಾಚಾರದ ಪ್ರಕರಣ: ಮಾಜಿ ಪ್ರಧಾನಿ ಶೇಕ್ ಹಸೀನಾಗೆ ಗಲ್ಲು ಶಿಕ್ಷೆ ವಿಧಿಸಿದ ‘ICT’

ಬಾಂಗ್ಲಾ ಹಿಂಸಾಚಾರದ ಪ್ರಕರಣ: ಮಾಜಿ ಪ್ರಧಾನಿ ಶೇಕ್ ಹಸೀನಾಗೆ ಗಲ್ಲು ಶಿಕ್ಷೆ...

ಮಹೇಶ್ ಶೆಟ್ಟಿ ತಿಮರೋಡಿಗೆ ಹೈಕೋರ್ಟ್ ರಿಲೀಫ್; ಗಡಿಪಾರು ಆದೇಶ ರದ್ದು

ಮಹೇಶ್ ಶೆಟ್ಟಿ ತಿಮರೋಡಿಗೆ ಹೈಕೋರ್ಟ್ ರಿಲೀಫ್; ಗಡಿಪಾರು ಆದೇಶ ರದ್ದು ಬೆಂಗಳೂರು: ಮಹೇಶ್...

ಮೆಕ್ಕಾ ಯಾತ್ರಿಕರ ಕರೆದೊಯ್ಯುತ್ತಿದ್ದ ಬಸ್ ಡೀಸೆಲ್ ಟ್ಯಾಂಕರ್‌ ಗೆ ಡಿಕ್ಕಿ: 42 ಭಾರತೀಯರು ಸಾವು

ಮೆಕ್ಕಾ ಯಾತ್ರಿಕರ ಕರೆದೊಯ್ಯುತ್ತಿದ್ದ ಬಸ್ ಡೀಸೆಲ್ ಟ್ಯಾಂಕರ್‌ ಗೆ ಡಿಕ್ಕಿ: 42...