ಕಡಲ್ಕೊರೆತದಿಂದ ತತ್ತರಿಸಿರುವ ಉಳ್ಳಾಲಕ್ಕೆ ಅಧಿಕಾರಿಗಳೊಂದಿಗೆ ಇಂದು ಸಚಿವ ಯು ಟಿ ಖಾದರ್ ಭೇಟಿ ನೀಡಿದ್ದರು.
ತಮ್ಮ ಕ್ಷೇತ್ರದ ವ್ಯಾಪ್ತಿಗೆ ಬರುವ ಉಳ್ಳಾಲ, ಸೋಮೇಶ್ವರ ಪ್ರದೇಶಗಳಿಗೆ ಭೇಟಿ ನೀಡಿವ ಮೂಲಕ ಪರಿಸ್ಥಿತಿಯನ್ನು ಪರಿಶೀಲಿಸಿ ಸಂತ್ರಸ್ತರಿಗೆ ಸಾಂತ್ವನ ಹೇಳಿ ಸರ್ಕಾರದಿಂದ ನೆರವಾಗುವ ಧೈರ್ಯವನ್ನು ಸಂತ್ರಸ್ಥರಿಗೆ ತುಂಬಿದರು.
ಹೀಗೆ ಹಾನಿಗೀಡಾದ ಪ್ರದೇಶಗಳನ್ನು ವೀಕ್ಷಣೆ ಮಾಡುತ್ತಿದ್ದ ಸಂದರ್ಭದಲ್ಲಿ ವಿಶೇಷ ಕ್ಷಣವೊಂದಕ್ಕೆ ಖಾದರ್ ಸಾಕ್ಷಿಯಾಗಿದ್ದಾರೆ, ಹಾನಿಗೀಡಾದ ಪ್ರದೇಶಗಳನ್ನು ವೀಕ್ಷಣೆ ಮಾಡುವಾಗ ಖಾದರ್ ಅವರಿಗೆ ಬಾಯಾರಿಕೆ ಆಗಿದೆ ತಕ್ಷಣ ತಮ್ಮ ಜೊತೆಗಿದ್ದ ಅಧಿಕಾರಿಗಳು ಮತ್ತು ಪಕ್ಷದ ಕಾರ್ಯಕರ್ತರ ಮುಂದೆಯೇ ಪಕ್ಕದಲ್ಲೇ ಇದ್ದ ಸಣ್ಣ ಪಟ್ಟಿಗೆ ಅಂಗಡಿಗೆ ತೆರಳಿ ಅಂಗಡಿಯವರಿಂದ ಕತ್ತಿಯನ್ನು ತೆಗೆದುಕೊಂಡು ಸ್ವತಃ ತಾವೇ ಎಳನೀರು ಕೆತ್ತಿ ಕುಡಿಯುವ ಮೂಲಕ ಎಲ್ಲರಲ್ಲೂ ಅಚ್ಚರಿಯನ್ನು ಮೂಡಿಸಿದ್ದಾರೆ.