ವಿಕಟ ಕವಿ ಯೋಗರಾಜ್ ಭಟ್ ನಿರ್ದೇಶದಲ್ಲಿ ಮೂಡಿಬಂದ ಪಂಚತಂತ್ರ ಪ್ರೇಕ್ಷಕರ ಮನ ಗೆದ್ದಿದೆ. ಅದ್ರಲ್ಲೂ ಯೋಗರಾಜ್ ಭಟ್ ಬರೆದಿರುವ ಹಾಡುಗಳಂತೂ ಸ್ಯಾಂಡಲ್ವುಡ್ ಅಂಗಳದಲ್ಲಿ ಸಖತ್ ಸೌಂಡ್ ಮಾಡಿದೆ.
ಇನ್ನು ಪಂಚತಂತ್ರ ಚಿತ್ರರಂಗದಲ್ಲಿ ಕಾಣಿಸಿಕೊಂಡ ನಟ ನಟಿ ಇಬ್ಬರು ಭರವಸೆಯ ನಟರಾಗಿದ್ದಾರೆ. ಹೌದು ನಿರ್ದೇಶಕ ಯೋಗರಾಜ್ ಸಿನಿಮಾದಲ್ಲಿ ಬಣ್ಣ ಹಚ್ಚಿದ ಅನೇಕ ಕಲಾವಿದರು ಇಂದು ದೊಡ್ಡ ಮಟ್ಟಕ್ಕೆ ಬೆಳೆದು ನಿಂತಿದ್ದಾರೆ. ಈಗ ಈ ಸಾಲಿಗೆ ಮತ್ತೊಬ್ಬ ನಟಿ ಸೋನಲ್ ಮೊಂತೆರೊ ಸೇರ್ಪಡೆಯಾಗಿದ್ದಾರೆ. ಯೋಗರಾಜ್ ಭಟ್ಟರ್ ಸಿನಿಮಾದಲ್ಲಿ ನಟಿಸುವ ಮೂಲಕ ಸಾಲು ಸಾಲು ಆಫರ್ಗಳನ್ನು ಗಿಟ್ಟಿಸಿಕೊಳ್ಳುತ್ತಿದ್ದಾರೆ. ತುಳು ಚಿತ್ರರಂಗದ ಮೂಲಕ ಬಣ್ಣದ ಬದುಕು ಆರಂಭಿಸಿದ ಸೋನಲ್ ನಂತರ ಸ್ಯಾಂಡಲ್ವುಡ್ನಲ್ಲಿ ಒಂದೆರಡು ಚಿತ್ರಗಳಲ್ಲಿ ಸೋನಲ್ ನಟಿಸಿದ್ರೂ ಜನರು ಕೈ ಹಿಡಿದಿದ್ದು ಪಂಚತಂತ್ರದ ಚಿತ್ರದ ಮೂಲಕ. ಈ ಚಿತ್ರದ ನಂತರ ಸೋನಲ್ ಈಗ ಸಾಲು ಸಾಲು ಚಿತ್ರಗಳ ಆಫರ್ ಬರುತ್ತಿದೆಯಂತೆ. ಯೋಗರಾಜ್ ಭಟ್ ನಿರ್ದೇಶನದ ಗಾಳಿಪಟ 2, ಮೌರ್ಯ ನಿರ್ದೇಶನದ ಬುದ್ಧಿವಂತ 2 ಚಿತ್ರ ತಂಡದಲ್ಲೂ ಸೋನಲ್ ಸ್ಥಾನ ಪಡೆದುಕೊಂಡಿದ್ದಾರೆ. ತಲ್ವಾರ್ಪೇಟೆ ಚಿತ್ರದಲ್ಲೂ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ ಈ ನಟಿಮಣಿ.
ಕನ್ನಡದಲ್ಲಿ ನಟಿಸಿದ ನಟಿಮಣಿಗೆ ಆಫರ್ ಗಳ ಸುರಿಮಳೆ!
Date: