ದೆಹಲಿಯಲ್ಲಿ ಮಾತನಾಡಿದ ಅವರು , ನಾನು ಒಂದು ಸಂದರ್ಶನದಲ್ಲಿ ಮಾತನಾಡಿದ ಮಾತನ್ನು ಟ್ವಿಸ್ಟ್ ಮಾಡಿ ಬದಲಾಯಿಸಿ ಅದಕ್ಕೆ ಬೇರೆ ಬಣ್ಣ ಕೊಟ್ಟು ವೈರಲ್ ಮಾಡಿದ ವಿಷಯ ಕೇಳಿ ಬೇಜಾರಾಗುತ್ತಿದೆ. ಏಕೆ ಅಂತಹ ಹೇಳಿಕೆ ನೀಡುವ ಸ್ವಭಾವ ನನಗೆ ಇಲ್ಲ ಎಂದರು.
ನಾನು ಯಾವತ್ತೂ ಕೂಡ ಒಬ್ಬರ ಬಗ್ಗೆ ಟೀಕೆ ಮಾಡುವುದಾಗಿ, ಒಬ್ಬರ ಬಗ್ಗೆ ಕೆಳಮಟ್ಟದಾಗಿ ಮಾತನಾಡಿದ್ದಾಗಲಿ ನಾನು ಯಾವತ್ತೂ ನಡೆದುಕೊಂಡಿಲ್ಲ. ಹೀಗೆ ಮುಂದೆ ಕೂಡ ನನ್ನ ಸ್ವಭಾವ ಇರುತ್ತದೆ ಎಂದರು.ಬೇರೆ ರಾಜಕಾರಣಿಗಳ ಹಾಗೆ ನಾನಲ್ಲ, ನನ್ನನ್ನು ಆ ಲಿಸ್ಟ್ ನಲ್ಲಿ ಇಡಬೇಡಿ : ನನ್ನ ಉದ್ದೇಶ ಏನು ಎಂಬುದು ನನಗೆ ಚೆನ್ನಾಗಿ ಗೊತ್ತಿದೆ. ಅಂಬರೀಶ್ ಏನು ಅಂತ ಎಲ್ಲರಿಗೂ ಗೊತ್ತು. ಕಾವೇರಿ ವಿಷಯಕ್ಕಾಗಿ ಅವರು ಯೂನಿಯನ್ ಮಿನಿಸ್ಟರ್ ಪದವಿಗೆ ರಾಜೀನಾಮೆ ಹೇಳಿದ್ದರು. ನಾನು ಅಂಬರೀಷ್ ಮಾರ್ಗದರ್ಶನದಲ್ಲಿ ನಡೆಯುತ್ತಿದ್ದೇನೆ ಎಂದರು.