2019ರ ಲೋಕಸಭಾ ಚುನಾವಣೆಗೆ ಮುನ್ನ ಬಿಜೆಪಿ ಮತ್ತು ಕೇಂದ್ರ ಸರಕಾರ ಟೀಕಿಸಿ, ಚುನಾವಣೆ ಸಮಯದಲ್ಲಿ ಬಿಜೆಪಿ ಜತೆಗಿನ ಮಿತೃತ್ವವನ್ನು ಮತ್ತೆ ಆರಂಭಿಸಿದ್ದ ಶಿವಸೇನೆ ಇದೀಗ, ಶಿವಸೇನೆಯ ಓರ್ವ ಸದಸ್ಯ ಮಹಾರಾಷ್ಟ್ರದ ಮುಂದಿನ ಮುಖ್ಯಮಂತ್ರಿಯಾಗುತ್ತಾರೆ ಎಂದು ಬಹಿರಂಗವಾಗಿ ಹೇಳಿರುವುದು ಚರ್ಚೆಗೆ ಕಾರಣವಾಗಿದೆ.
‘ಶಿವಸೇನೆಯು ತನ್ನ ಪಣದೊಂದಿಗೆ ಮುಂದಡಿ ಇಟ್ಟಿದೆ. ರಾಜ್ಯ ವಿಧಾನಸಭೆಯನ್ನು ಸಂಪೂರ್ಣವಾಗಿ ಕೇಸರಿಮಯ ಗೊಳಿಸುವ ಪಣವನ್ನು ನಾವು ತೊಟ್ಟಿದ್ದೇವೆ. ಅಂತೆಯೇ ಪಕ್ಷದ 54ನೇ ಸಂಸ್ಥಾಪನಾ ದಿನದಂದು, ಮಹಾರಾಷ್ಟ್ರದ ಮುಂದಿನ ಮುಖ್ಯಮಂತ್ರಿ ಶಿವಸೇನೆಯ ಓರ್ವ ವ್ಯಕ್ತಿ ಆಗುತ್ತಾರೆ’ ಎಂದು ಸಾಮ್ನಾ ಸಂಪಾದಕೀಯದಲ್ಲಿ ಶಿವಸೇನೆ ಘೋಷಿಸಿದೆ.