ಸ್ಯಾಂಡಲ್ವುಡ್ನ ಬಹು ಬೇಡಿಕೆಯ ನಟರಲ್ಲಿ ನೀನಾಸಂ ಸತೀಶ್ ಕೂಡ ಒಬ್ಬರು. ಸತೀಶ್ ತಮಗೆ ಒಲಿದು ಬಂದಿರುವ ಬಿರುದು ಅಭಿನಯ ಚತುರ ಎನ್ನುವುದಕ್ಕೆ ತಕ್ಕಂತೆ ನಿಜವಾಗಿಯೂ ಅಭಿನಯ ಚತುರರೇ. ನೀನಾಸಂ ಸತೀಶ್ ಸಿನಿಮಾಗಳಲ್ಲಿ ಮೆಸೇಜ್ ಗಳ ಜೊತೆ ಜೊತೆಗೆ ನಗೆ ಬುಗ್ಗೆ 100ಪರ್ಸೆಂಟ್ ಇದ್ದೇ ಇರುತ್ತದೆ. ನೀನಾಸಂ ಸತೀಶ್ ಮನರಂಜನೆ ನೀಡುವುದರಲ್ಲಿ ನಂಬರ್ 1. ಅವರ ಸಿನಿಮಾಗಳಲ್ಲಿ ನಗುವಿಗೆ ಕೊರತೆ ಇಲ್ಲ.
ಈ ನಮ್ಮ ನೀನಾಸಂ ಅವರಿಗಿಂದು ಹುಟ್ಟುಹಬ್ಬದ ಸಂಭ್ರಮ. ಹುಟ್ಟುಹಬ್ಬದ ಪ್ರಯುಕ್ತ ಅಭಿಮಾನಿಗಳಿಗೆ ಸತೀಶ್ ಕಡೆಯಿಂದ ಒಂದು ಗಿಫ್ಟ್ ಸಿಕ್ಕಿದೆ. ಅದುವೇ ‘ಬ್ರಹ್ಮಾಚಾರಿ’ ಟೀಸರ್.
ಉದಯ್ ಕೆ ಮೆಹ್ತಾ ನಿರ್ಮಾಣದ , ಚಂದ್ರು ಮೋಹನ್ ನಿರ್ದೇಶನದ ಬ್ರಹ್ಮಚಾರಿಯ ಟೀಸರ್ ಬಿಡುಗಡೆಯಾಗಿದ್ದು, ಚಿತ್ರದ ಮೇಲಿನ ನಿರೀಕ್ಷೆ ಗರಿಗೆದರುವಂತಿದೆ. ಲೈಂಗಿಕ ದೌರ್ಬಲ್ಯದ ಬಗ್ಗೆ ಹೆಣೆಯಲಾದ ದೃಶ್ಯ ಟೀಸರ್ ನಲ್ಲಿದೆ. ಸತೀಶ್ ಪ್ರಸ್ಥದ ದಿನ ರನ್ ಔಟ್ ಆದ ಸನ್ನಿವೇಶವನ್ನು ಕಾಮಿಡಿ ಕಿಲಾಡಿ ಶಿವರಾಜ್ ಕೆ.ಆರ್ ಪೇಟೆ ದತ್ತಣ್ಣಗೆ ವಿವರಿಸುವ ಸೀನ್ ಇದೆ..!
ಹಂಡ್ರೆಡ್ ಪರ್ಸೆಂಟ್ ಬ್ರಹ್ಮಚಾರಿ ಸುನಿತಾಳನ್ನು ಮದ್ವೆ ಆಗೋದು. ಪ್ರಸ್ಥವೂ ಅರೆಂಜ್ ಆಗುವುದು. ಪ್ರಸ್ಥದ ಸಮಯದಲ್ಲಿ ಬ್ರಹ್ಮಚಾರಿ ರನ್ ಔಟ್ ಆಗುವುದಂತೆ,.. ಟೀಸರೇ ಇಷ್ಟೊಂದು ನಗಿಸುತ್ತೆ ಎಂದರೆ ಇನ್ನು ಚಿತ್ರ ಯಾವ ಮಟ್ಟಿಗೆ ನಗಿಸಹುದು?
‘ಬ್ರಹ್ಮಚಾರಿ’ ಸತೀಶ್ ಪ್ರಸ್ಥದ ದಿನ ರನ್ ಔಟ್ ಆಗಿದ್ದು ಕೇಳಿದ್ರೆ ಬಿದ್ದು ಬಿದ್ದು ನಗ್ತೀರಿ..!
Date:






