No menu items!
10.2 C
Munich
Tuesday, April 21, 2026

ರಾಂಚಿಯಲ್ಲಿ 30,000 ಜನರೊಂದಿಗೆ ಯೋಗಾಭ್ಯಾಸ ಮಾಡಿದ ಮೋದಿ .

Must read

ಯೋಗವನ್ನು ಗ್ರಾಮೀಣ ಪ್ರದೇಶಕ್ಕೆ ಪರಿಚಯಿಸಬೇಕಾದ ಸಮಯವಿದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಇಂದು 5ನೇ ಅಂತಾರಾಷ್ಟ್ರೀಯ ಯೋಗ ದಿನ. ಈ ಹಿನ್ನಲೆಯಲ್ಲಿ ಜಾರ್ಖಂಡ್ ರಾಜಧಾನಿ ರಾಂಚಿಯ ಪ್ರಭಾತ್ ತಾರಾ ಮೈದಾನದಲ್ಲಿ ಬೃಹತ್ ಯೋಗಪಟುಗಳೊಂದಿಗೆ ಯೋಗಾಭ್ಯಾಸ ಮಾಡಿ ಅರ್ಥಪೂರ್ಣವಾಗಿ ಆಚರಿಸಿದ ಬಳಿಕ ಅವರು ಮಾತನಾಡಿದರು.

ನಾವು ಆಧುನಿಕ ಯೋಗದ ಪ್ರಯಾಣವನ್ನು ನಗರ ಪ್ರದೇಶಗಳಿಂದ ಹಳ್ಳಿಗಳಿಗೆ ಬಡ ಮತ್ತು ಬುಡಕಟ್ಟು ಜನಾಂಗದವರ ಮನೆಗಳಿಗೆ ಕೊಂಡೊಯ್ಯಬೇಕಾಗಿದೆ. ಯೋಗ ಕೇವಲ ನಗರ ಪ್ರದೇಶಗಳ ಶ್ರೀಮಂತರ ದಿನಚರಿಯಾಗಿರದೆ ಹಳ್ಳಿಗಳ ಬಡ ಜನರ ಜೀವನದ ಭಾಗವು ಕೂಡ ಆಗಬೇಕಿದೆ.

ಅನಾರೋಗ್ಯದಿಂದ ಹೆಚ್ಚು ನೋವು ಅನುಭವಿಸುವವರು, ಕಷ್ಟಪಡುವವರು ಬಡಜನರು, ಅಂತವರು ಯೋಗಾಭ್ಯಾಸದಲ್ಲಿ ನಿರತರಾಗಬೇಕು ಎಂದು ಹೇಳಿದರು. ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಸಂದರ್ಭದಲ್ಲಿ ಭಾರತ ಸೇರಿದಂತೆ ವಿಶ್ವದ ಜನರಿಗೆ ಶುಭಾಶಯ ಕೋರಿದ ಪ್ರಧಾನಿ, ಇಂದು ವಿಶ್ವದ ಅನೇಕ ಭಾಗಗಳಲ್ಲಿ ಜನರು ಯೋಗ ಮಾಡುತ್ತಿದ್ದಾರೆ.

ಯೋಗವನ್ನು ಪ್ರಚಾರ ಮಾಡುವಲ್ಲಿ ಮಾಧ್ಯಮಗಳು ಪ್ರಮುಖ ಪಾತ್ರ ವಹಿಸಿವೆ ಎಂದು ಶ್ಲಾಘಿಸಿದರು. ಇಂದು ಬದಲಾದ ಕಾಲಘಟ್ಟದಲ್ಲಿ ನಮ್ಮ ಆರೋಗ್ಯದ ಕಡೆಗೆ ಗಮನಹರಿಸಬೇಕಾದ ಅಗತ್ಯವಿದೆ. ಯೋಗದಿಂದ ಸದೃಢ ಮಾನಸಿಕ ಮತ್ತು ದೈಹಿಕ ಆರೋಗ್ಯ ಹೊಂದಲು ಸಾಧ್ಯ ಎಂದರು.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article