ಪ್ರತಿಯೊಬ್ಬರಿಗೂ ಗರ್ಲ್ ಫ್ರೆಂಡ್ ಆಗಲೀ ಅಥವಾ ಬಾಯ್ಫ್ರೆಂಡ್ನ ಆಗಲೀ ಮೊದಲ ಬಾ ರಿ ಮೀಟ್ ಆಗುವಾಗ ಆಗುವ ತುಮುಲ ಅಂತಿದ್ದಲ್ಲಾ.. ಉಡುಗೆ, ತೊಡುಗೆ, ಮಾತಾಡುವ ಕ್ರಮ, ನೋಟ ಇತ್ಯಾದಿಗಳನ್ನೇ ಗಮನಿಸಿ ಅವನ/ಳ ಸ್ವಭಾವ ಹೇಗಿರಬಹುದು, ಯಾವ ಧರ್ಮ, ಜಾತಿಗೆ ಸೇರಿದವನಿರಬಹುದು, ಮಿಡ್ಲ್ ಕ್ಲಾಸಾ, ಬಡವರ ಇತ್ಯಾದಿಗಳನ್ನು ಅಳೆದುಬಿಡುತ್ತೇವೆ. ಹೌದು..ಮೊದಲ ಭೇಟಿಯಲ್ಲೇ ಎದುರಿಗಿರುವ ವ್ಯಕ್ತಿಯನ್ನು ಇಂಪ್ರೆಸ್ ಮಾಡೋದು ಹೇಗೆ ಅನ್ನೋದು ದೊಡ್ಡ ಮ್ಯಾನೇಜ್ಮೆಂಟ್ ಸಬ್ಜೆಕ್ಟ್.
ಮೊದಲ ಭೇಟಿಯಲ್ಲಿ ಎದುರಿಗಿರುವ ವ್ಯಕ್ತಿಗೆ ನಮ್ಮ ಶಕ್ತಿಯ ಬಗ್ಗೆ ತಿಳಿಯಬೇಕೇ ಹೊರತು ವೀಕ್ನೆಸ್ ಅಲ್ಲ. ಮೊದಲು ದೇಹವನ್ನು ಸ್ಟ್ರೈಟ್ ಮಾಡಿಕೊಂಡು ರಸಗುಲ್ಲದಂತಿರೋ ಗಲ್ಲ ತಗ್ಗಿಸಿ, ಆತ್ಮವಿಶ್ವಾಸದ ಕಿರುನಗೆ ತುಟಿಗಳಲ್ಲಿ ತುಂಬಿರಬೇಕು. ದೃಷ್ಟಿ ತಪ್ಪಿಸದೇ ಮಾತನಾಡಿದರೆ ನಿಮ್ಮ ಮೇಲೆ ನಿಮಗೆ ಹಿಡಿತ ಸಿಗುತ್ತೆ.
ಮಹತ್ವದ ವಿಚಾರಗಳಲ್ಲಿ ನಿಮ್ಮ ಮಾತಿನ ಬಗ್ಗೆ ಸಣ್ಣ ನೆಗೆಟಿವ್ ಇಮೇಜ್ ಸೃಷ್ಟಿಯಾಗಿದೆ ಅಂತಿಟ್ಟುಕೊಳ್ಳಿ. ಇದರಿಂದಾಗಿ ಅಂದುಕೊಂಡ ಹಾಗೆ ಆತ್ಮವಿಶ್ವಾಸದಿಂದ ಮಾತನಾಡಲಾಗುತ್ತಿಲ್ಲ. ಅಂಥ ಸಂದರ್ಭದಲ್ಲಿ ಚೀಟಿ, ಪೆನ್ನು ತೆಗೆದುಕೊಳ್ಳಿ. ಮುಂದಕ್ಕೆ ಬಾಗಿ ಈ ವಿಷಯಕ್ಕೆ ಸಂಬಂಧಿಸಿದಂತೆ ಏನೋ ಲೆಕ್ಕಾಚಾರ ಮಾಡುವಂತೆ ನೋಟ್ ಮಾಡಿ. ಮತ್ತೆ ಅವರತ್ತ ಬಾಗಿ ನಿಮ್ಮ ಸ್ಪಷ್ಟ ಅಭಿಪ್ರಾಯ ಹೇಳಿ. ನೀವು ಬಾಗಿದರೆ ಅವರೂ ಬಾಗಲೇಬೇಕಾಗುತ್ತದೆ. ನಿಮ್ಮ ಮಾತು ಕೇಳಲೇಬೇಕಾಗುತ್ತದೆ.
ನಮ್ಮ ಪರಿಚಯ ಹೇಳಿಕೊಂಡು ಶೇಕ್ ಹ್ಯಾಂಡ್ಗೆ ಕೈ ಚಾಚುವುದು ನಿಮ್ಮೆಡೆಗೆ ಆ ವ್ಯಕ್ತಿ ಪಾಸಿಟಿವ್ ಆ್ಯಟಿಟ್ಯೂಡ್ ಬೆಳೆಸಿಕೊಳ್ಳಲು ಸಹಕಾರಿಯಾಗಿರುತ್ತೆ. ಬಿಗಿಯಾದ ಶೇಕ್ಹ್ಯಾಂಡ್ ಉತ್ತಮ. ಶೇಕ್ಹ್ಯಾಂಡ್ಗೆ ಕೈಯನ್ನು ಅಗಲಕ್ಕೆ ವಿಸ್ತರಿಸಿದಷ್ಟು ಅದು ನಿಮ್ಮ ಶಕ್ತಿಯನ್ನು, ಔದಾರ್ಯವನ್ನೂ ತೋರಿಸುತ್ತದೆ
ಮೊದಲ ಭೇಟಿ ಅಂದುಕೊಂಡತೆ ಆಗಲಿಲ್ಲ ಅಂದ್ರೆ ನಿರಾಸೆ ಮಾಡಿಕೊಳ್ಳುವ ಅವಶ್ಯಕತೆ ಇರುವುದಿಲ್ಲ. ಮುಂದಿನ ಭೇಟಿಯಯಲ್ಲಿ ಏನಾದ್ರೂ ಸರ್ಪ್ರೈಸ್ ಇರಲಿ.