ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಶರವಣ ಮನ್ಸೂರ್ ಖಾನ್ ಯಾರೆಂಬುದೇ ಗೊತ್ತಿಲ್ಲ. ಐಎಂಎ ಜ್ಯುವೆಲ್ಲರ್ಸ್ ಮಾತ್ರ ನನಗೆ ಗೊತ್ತು. ಕಳೆದ ಎರಡು ವರ್ಷಗಳಿಂದ ಈ ಅಂಗಡಿಯಲ್ಲಿ ವೇಸ್ಟೇಜ್, ಮೇಕಿಂಗ್ ಚಾರ್ಜ್ ಇಲ್ಲದೆ, ಕೇವಲ ಚಿನ್ನದ ಬೆಲೆಗೆ ಆಭರಣಗಳನ್ನು ಮಾರಾಟ ಮಾಡುತ್ತಿದ್ದಾರೆ ಎಂದು ನಮ್ಮ ಅಸೋಸಿಯೇಷನ್ ಸದಸ್ಯರು ತಿಳಿಸಿದ್ದರು
ಮೇಕಿಂಗ್ ಚಾರ್ಜ್ ಇಲ್ಲದೆ, ಕೇವಲ ಚಿನ್ನದ ಬೆಲೆಗೆ ಆಭರಣಗಳನ್ನು ಮಾರಾಟ ಮಾಡುತ್ತಿರುವುದಕ್ಕೆ ಸಂಬಂಧಪಟ್ಟಂತೆ ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ. ಅವರ ವೈಯಕ್ತಿಕ ಅಂಗಡಿಯಲ್ಲಿ ಅವರವರ ಬೆಲೆಗೆ ಮಾರುತ್ತಾರೆ. ಕ್ವಾಲಿಟಿಯಲ್ಲಿ ಮೋಸವಾದರೆ, ಗ್ರಾಹಕರಿಗೆ ತೊಂದರೆ ಆದರೆ ಮಾತ್ರ ನಾವು ದೂರು ನೀಡಲು ಸಾಧ್ಯ ಎಂದು ಮನವರಿಕೆ ಮಾಡಿದ್ದೆ ಎಂದು ತಿಳಿಸಿದರು.