ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು , ಅಂದು ಜೈಲರ್ಗಳು ಊಟದ ವ್ಯವಸ್ಥೆಯಲ್ಲಿ ಮಾಡಿದ ದುರುಪಯೋಗದ ಕುರಿತು ನಾನು ಹೋರಾಟ ಮಾಡಿದ್ದೆ ಎಂದರು. ಜೈಲಿನಲ್ಲಿ ಹೋರಾಟದ ಸಂದರ್ಭದಲ್ಲಿ ಒಂದು ಕ್ಷಣ ನಾನು ಬಾಗಿಲು ಲಾಕ್ ಮಾಡಿಕೊಳ್ಳದೇ ಇದ್ದರೆ ಜೈಲಿನಿಂದ ನಾನು ಹೊರ ಬರ್ತಿರಲಿಲ್ಲ ಎಂದು ಬಿ.ಎಸ್ ಯಡಿಯೂರಪ್ಪ ಹೇಳಿದರು.
ನಾನು ಮೊದಲು ಸಾಗರದ ಜೈಲಿನಲ್ಲಿ ಇದ್ದೆ ನಂತರ ಬಳ್ಳಾರಿ ಜೈಲಿಗೆ ಹಾಕಿದರು. ಜೈಲಿನಲ್ಲಿ ಹೋರಾಟದ ಸಂದರ್ಭದಲ್ಲಿ ಒಂದು ಕ್ಷಣ ನಾನು ಬಾಗಿಲು ಲಾಕ್ ಮಾಡಿಕೊಳ್ಳದೇ ಇದ್ದರೆ ಜೈಲಿನಿಂದ ನಾನು ಹೊರ ಬರ್ತಿರಲಿಲ್ಲ, ಜೀವಂತವಾಗಿ ಉಳಿತಿರಲಿಲ್ಲ ಎಂದು ಅವರು ಜೈಲಿನಲ್ಲಿದ್ದ ಅನುಭವವನ್ನು ಹಂಚಿಕೊಂಡಿದ್ದಾರೆ.