ರಾಕಿಂಗ್ ಸ್ಟಾರ್ ಯಶ್ ಮತ್ತು ಸ್ಯಾಂಡಲ್ವುಡ್ ಸಿಂಡ್ರೆಲಾ ರಾಧಿಕಾ ಪಂಡಿತ್ ಕನ್ನಡ ಚಿತ್ರರಂಗದ ಸೂಪರ್ ತಾರಾ ಜೋಡಿ. ಯಶ್ ಮತ್ತು ರಾಧಿಕಾ ಒಂದೇ ಧಾರವಾಹಿ ಮೂಲಕ ಕಿರುತೆರೆ ಪ್ರವೇಶ ಮಾಡಿದವರು. ಮೊಗ್ಗಿನ ಮನಸ್ಸು ಸಿನಿಮಾ ಮೂಲಕ ಇಬ್ಬರು ಒಟ್ಟಿಗೇ ಸ್ಯಾಂಡಲ್ವುಡ್ ಗೆ ಎಂಟ್ರಿಕೊಟ್ಟರು. ಆ ಸಿನಿಮಾ ಮಾತ್ರವಲ್ಲದೆ ಡ್ರಾಮಾ, ರಾಮಾಚಾರಿ, ಸಂತು ಸ್ಟ್ರೈಟ್ ಫಾರ್ವರ್ಡ್ ಸಿನಿಮಾಗಳಲ್ಲಿ ಇಬ್ಬರು ಸ್ಕ್ರೀನ್ ಶೇರ್ ಮಾಡಿಕೊಂಡರು.
ಇಬ್ಬರ ನಡುವೆ ಪ್ರೀತಿ ಹುಟ್ಟಿತು. ಎರಡೂ ಕುಟುಂಬವನ್ನು ಒಪ್ಪಿಸಿ ಮದುವೆಯಾಗಿದ್ದಾರೆ. ಇದೀಗ ಐರಾ ಎನ್ನುವ ಪುಟ್ಟ ಮಗು ಕೂಡ ಇವರ ಬಾಳಿಗೆ ಪ್ರವೇಶಿಸಿ, ಬದುಕನ್ನು ಮತ್ತಷ್ಟು ಚಂದಗಾಣಿಸಿದೆ. ಇತ್ತೀಚೆಗಷ್ಟೇ ಆ ಮಗುವಿನ ನಾಮಕರಣ ಆಗಿತ್ತು. ಐರಾಳ ನಾಮಕರಣದ ಬೆನ್ನಲ್ಲೇ ಯಶ್ ಮತ್ತೊಂದು ಸ್ವೀಟ್ ನ್ಯೂಸ್ ಕೊಟ್ಟಿದ್ದಾರೆ.
ಯಶ್ ತಂದೆಯಾಗುವ ಸೂಚನೆಯನ್ನು ನೀಡಿದ್ದಾರೆ. ಟ್ವೀಟರ್ ನಲ್ಲಿ ಐರಾಳ ವಿಡಿಯೋವನ್ನು ಹರಿಬಿಟ್ಟು, ಅದರಲ್ಲಿ ಐರಾ ಹೇಳುವ ರೀತಿಯಲ್ಲಿ ಒಂದಿಷ್ಟು ಟೆಕ್ಸ್ಟ್ ಗಳಿವೆ. ಅಪ್ಪ-ಅಮ್ಮ ಎರಡನೇ ಮಗುವಿನ ತಂದೆ-ತಾಯಿ ಆಗುತ್ತಿದ್ದಾರೆ. ನಾನು ಆಟಿಕೆಗಳನ್ನು ಇಟ್ಕೊಂಡು ಕಾಯುತ್ತಿದ್ದೇನೆ ಎಂದು ಮುದ್ದು ಮಗು ಐರಾ ಹೇಳುವ ರೀತಿಯಲ್ಲಿ ಆ ವಿಡಿಯೋದಲ್ಲಿ ಟೆಕ್ಸ್ಟ್ಗಗಳನ್ನು ಜೋಡಿಸಿದ್ದಾರೆ.
ಯಶ್ ಆ ವಿಡಿಯೋ ಜೊತೆಗೆ ವೈಜಿಎಫ್ ಚಾಪ್ಟರ್ -2 ಎಂದು ತಾವು ಎರಡನೇ ಮಗುವಿನ ತಂದೆ ಆಗುವ ಸೂಚನೆಯನ್ನು ಟ್ವೀಟ್ ಮೂಲಕ ತಿಳಿಸಿದ್ದಾರೆ. ಐರಾ ನಾಮಕರಣದ ಸಿಹಿಯ ಸುದ್ದಿಯ ಜೊತೆಗೇ ಮತ್ತೊಂದು ಸ್ವೀಟ್ ನ್ಯೂಸ್ ಅನ್ನು ಯಶ್ ಹಂಚಿಕೊಂಡಿದ್ದಾರೆ.
ಐರಾ ನಾಮಕರಣದ ಬೆನ್ನಲ್ಲೇ ಯಶ್ರಿಂದ ಮತ್ತೊಂದು ಸ್ವೀಟ್ ನ್ಯೂಸ್..!
Date: