ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಐಟಿ ದಾಳಿ ಪ್ರಕರಣದಲ್ಲಿ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ನಲ್ಲಿ ಹಿನ್ನಡೆಯಾಗಿದೆ.
ದೆಹಲಿ ಹಾಗೂ ಬೆಂಗಳೂರಿನ ಮನೆ ಮೇಲೆ ನಡೆಸಿರುವ ಐಟಿ ದಾಳಿಯಿಂದ ತನ್ನ ಹೆಸರನ್ನು ಕೈಬಿಡಬೇಕು ಎಂದು ಡಿಕೆಶಿ ಕೇಳಿಕೊಂಡಿದ್ದರು. ಆದರೆ ಕೋರ್ಟ್ ಅವರ ಅರ್ಜಿಯನ್ನು ವಜಾಗೊಳಿಸಿರುವ ಕಾರಣದಿಂದಾಗಿ ವಿಚಾರಣೆ ಎದುರಿಸಬೇಕಾಗಿದೆ.
2017ರ ಆಗಸ್ಟ್ ನಲ್ಲಿ ಐಟಿ ಅಧಿಕಾರಿಗಳು ಡಿಕೆಶಿ ಅವರು ದೆಹಲಿ ಹಾಗೂ ಬೆಂಗಳೂರು ನಿವಾಸಗಳ ಮೇಲೆ ದಾಳಿ ಮಾಡಿದ್ದರು. ಡಿಕೆಶಿ ತೆರಿಗೆ ವಂಚನೆ ಮಾಡಿರುವುದಾಗಿ ದೂರು ದಾಖಲಾಗಿತ್ತು.ಡಿಕೆಶಿ ಅರ್ಜಿಯನ್ನು ವಜಾಗೊಳಿಸಿದ ವಿಶೇಷ ಕೋರ್ಟ್ ನ ನ್ಯಾಯಾಧೀಶ ರಾಮಚಂದ್ರ ಹುದ್ದರ್ ಅವರು ವಿಚಾರಣೆಯನ್ನು ಕೋರ್ಟ್ ನಲ್ಲೇ ಎದುರಿಸುವಂತೆ ಸೂಚಿಸಿದರು