No menu items!
9.3 C
Munich
Sunday, May 3, 2026

ಈ ಸರ್ಕಾರ ಯಾವ್ದೋ ಹಾಸನ, ಮಂಡ್ಯಕ್ಕೆ ಮಾತ್ರ ಸರ್ಕಾರವಲ್ಲ, ನಿಮ್ಮ ರಾಯಚೂರಿಗು ಹೌದು ! ಎಂದ್ರು ಸಿಎಂ ಹೆಚ್ ಡಿ ಕೆ ಯಾಕೆ ಗೊತ್ತಾ?!

Must read

ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಕರೆಗುಡ್ಡ ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿಯವರು, ರಾಯಚೂರು ಜಿಲ್ಲೆಯ 272 ಕೋಟಿ ರೂಪಾಯಿ ಸಾಲವನ್ನು ಮನ್ನಾ ಮಾಡಲಾಗಿದೆ. ಆಂಧ್ರದಲ್ಲಿ 5 ವರ್ಷವಾದರೂ ಸಾಲ ಮನ್ನಾವಾಗಿಲ್ಲ. ಆದ್ರೇ ನಮ್ಮ ಸರ್ಕಾರ ಬಂದ ಒಂದೇ ವರ್ಷದಲ್ಲಿ ಮನ್ನಾ ಮಾಡಲಾಗಿದೆ ಎಂದು ಹೇಳಿದರು.

ನೀರಾವರಿ ಯೋಜನೆಗಳನ್ನು ಪ್ರಾಮಾಣಿಕವಾಗಿ ಮಾಡುತ್ತೇವೆ.ರಾಯಚೂರು ಜಿಲ್ಲೆಯ ಸಮಗ್ರ ನೀರಾವರಿ ಯೋಜನೆಗೆ ಕ್ರಮ ಕೈಗೊಳ್ಳುತ್ತೇವೆ. ಉತ್ತರ ಕರ್ನಾಟಕದ ಕೆರೆ-ಕಟ್ಟೆಗಳನ್ನು ತುಂಬಿಸುತ್ತೇವೆ. ಜಿಲ್ಲೆಯ ರಸ್ತೆಯ ಅಭಿವೃದ್ಧಿದಾದಿ ರೂ.344 ಕೋಟಿ ಅನುದಾನ ಮೀಸಲಿಡಲಾಗಿದೆ ಎಂದು ತಿಳಿಸಿದರು.

ಇನ್ನೂ ಈ ನನ್ನ ಗ್ರಾಮ ವಾಸ್ತವ್ಯವನ್ನು ಬಿಜೆಪಿ ಟೀಕಿಸುತ್ತಿದೆ. ಆದರೇ ನಾನು ಅದಕ್ಕೆ ತಲೆಕೆಡಿಸಿಕೊಳ್ಳುವುದಿಲ್ಲ. ಈ ಸರ್ಕಾರ ಯಾವ್ದೋ ಹಾಸನ, ಮಂಡ್ಯಕ್ಕೆ ಮಾತ್ರ ಸರ್ಕಾರವಲ್ಲ. ನಿಮ್ಮ ರಾಯಚೂರು ಸರ್ಕಾರವೂ ಹೌದು ಎಂದು ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿಯವರು ಸ್ಪಷ್ಟಪಡಿಸಿದರು.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article