ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ ಅವರು, ಸಿಎಂ ಮೊದಲು ಬರಗಾಲ ಸಮಸ್ಯೆಯತ್ತ ಗಮನಹರಿಸಲಿ, ನಂತರ ಗ್ರಾಮವಾಸ್ತವ್ಯ ಮಾಡಲಿ, ಸಿಎಂ ಚುನಾಯಿತ ಶಾಸಕರನ್ನು ಗೂಂಡಾ ಎಂದು ಕರೆಯುತ್ತಾರೆ. ಕುಮಾರಸ್ವಾಮಿ ಅವರ ಈ ವರ್ತನೆಯನ್ನು ನಾನು ಖಂಡಿಸುತ್ತೇನೆ. ಸಿಎಂ ಹಗುರವಾಗಿ ಮಾತನಾಡಿ ಗೊಂದಲ ಸೃಷ್ಟಿಸುತ್ತಾರೆ. ಸಿಎಂ ಆಗಿ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕಾದುದು ಅವರ ಕರ್ತವ್ಯ ಎಂದು ವಾಗ್ದಾಳಿ ನಡೆಸಿದ್ದಾರೆ.
ಇನ್ನು ನಮಗೆ ಗ್ರಾಮವಾಸ್ತವ್ಯ ತಡೆಯುವ ಅಗತ್ಯವೇ ಇಲ್ಲ.ಅದು ಮುಖ್ಯಮಂತ್ರಿಗಳಿಗೆ ಬಿಟ್ಟ ವಿಚಾರ. ರಾಜ್ಯದಲ್ಲಿ ಬರಗಾಲ ಇದೆ. ಮೊದಲು ಅದರ ಬಗ್ಗೆ ಗಮನ ಹರಿಸಿ ಎಂದು ಸಲಹೆ ಕೊಟ್ಟಿದ್ದೆವು ಎಂದರು.