ಬಿಗ್​ಬಾಸ್​ ಚಂದನ್​ ಶೆಟ್ಟಿ ಶೋಕಿಲಾಲಾ ಆಗ್ಬುಟ್ರು..!

Date:

ಕನ್ನಡದ ಸ್ಟಾರ್ ರ್ಯಾಪರ್ ಚಂದನ್ ಶೆಟ್ಟಿ… ಇವ್ರ ಬಗ್ಗೆ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ? ಬಿಗ್ ಬಾಸ್ ಖ್ಯಾತಿ ಕೂಡ ಇವರ ಬೆನ್ನಿಗಿದೆ. ಈ ಶೆಟ್ರು ಈಗ ಶೋಕಿಲಾಲಾ ಆಗ್ಬುಟ್ಟವ್ರೆ..!
ಚಂದನ್ ಶೆಟ್ಟಿ ಎನ್ನುವ ಹೆಸ್ರು ಕೇಳಿದ್ರೆ ಥಟ್ ಅಂತ ನೆನಪಾಗುವುದು ಮೂರೇ ಮೂರು ಪೆಗ್ಗಿಗೆ ಸಾಂಗ್. ಇದೇ ಹಾಡು ಚಂದನ್ ಶೆಟ್ಟಿ ಅವರಿಗೆ ಸ್ಟಾರ್ ಪಟ್ಟ ತಂದುಕೊಟ್ಟಿದ್ದು. ಡ್ಯಾನ್ಸ್ ಪಬ್​ಗಲ್ಲಿ ಇಂಟರ್ ನ್ಯಾಷನಲ್ ಲೆವೆಲ್​ ನಲ್ಲಿ ಇದೇ ಕನ್ನಡದ ಸಾಂಗ್ ಸೌಂಡು ಮಾಡ್ತಿರುವುದು. ಚಂದು ಅವರ ಇದೇ ಹಾಡು ಪಡ್ಡೆ ಹುಡುಗರನ್ನು ಹುಚ್ಚೆದ್ದು ಕುಣಿಸಿದ್ದು. ಕನ್ನಡದಲ್ಲೂ ಇಂಥಾ ರ್ಯಾಪ್ ಮೂಲಕ ಸೌಂಡು ಮಾಡ್ಬಹುದು ಅಂತ ಹೇಳಿಕೊಟ್ಟವರು. ಇದೇ ಚಂದನ್ ಶೆಟ್ಟಿ ಇದೀಗ ಶೋಕಿಲಾಲಾ ಆಗಿದ್ದಾರೆ.
ಹೌದು ಚಂದನ್ ಶೆಟ್ಟಿಯ ಹೊಸ ಹಾಡು ಬರ್ತಿದೆ. ಅದುವೇ ಶೋಕಿಲಾಲಾ. ಬಿಗ್ ಬಾಸ್ ನಿಂದ ಬಂದ ಮೇಲೆ ಫೈರ್ ಮೂಲಕ ಸದ್ದು ಮಾಡಿದ್ದರು. ಈಗ ಶೋಕಿಲಾಲಾ ಮೂಲಕ ಸೌಂಡು ಮಾಡಲಿದ್ದಾರೆ. ಇದೊಂದು ಮ್ಯೂಸಿಕ್ ಆಲ್ಬಂ ನಲ್ಲಿ ಮೆಲೋಡಿ ಇದೆ, ಹಿಪ್ ಹಾಪ್ ಇದೆ. ಬ್ಯೂಟಿಫುಲ್ ಟೋನ್ ಕೂಡ ಇದೆಯಂತೆ.
ಹಾಡಿನ ಚಿತ್ರೀಕರಣ ಮುಗಿದಿದ್ದು, ಪೋಸ್ಟ್ ಪ್ರೊಡಕ್ಷನ್ ವರ್ಕ್ ನಡೆಯುತ್ತಿದೆ. ಶೀಘ್ರದಲ್ಲೇ ರಿಲೀಸ್ ಆಗುತ್ತಿದೆ. ಟಿಪಿಕಲ್ ಮಿಡ್ಲ್ ಕ್ಲಾಸ್ ಹುಡುಗನ ಜೀವನ, ಆ ಜೀವನದಲ್ಲಿ ಶೋಕಿ ಅನ್ನೋದು ಎಷ್ಟು ಮುಖ್ಯ? ಹುಡುಗನೊಬ್ಬ ಬದುಕಿನ ಜಂಜಾಟಕ್ಕೆ ಸಿಲುಕಿ ಪಡುವ ಪಾಡೇ ಈ ಶೋಕಿಲಾಲ ಸಾಂಗ್ ಎಂದು ಹೇಳಲಾಗುತ್ತಿದೆ, ಅಭಿಮಾನಿಗಳು ಕಾತುರದಿಂದ ಕಾಯ್ತಿದ್ದಾರೆ.

View this post on Instagram

SHOKILALA coming sooooon .. #chandanshetty ❤️

A post shared by Chandan Shetty (@chandanshettyofficial) on

Share post:

Subscribe

spot_imgspot_img

Popular

More like this
Related

ಭೂಮಿ ಗಡಿ ಹಾಕುವುದಿಲ್ಲ, ಮನುಷ್ಯನೇ ಗಡಿ ಹಾಕುತ್ತಾನೆ: ಬಾನು ಮುಷ್ತಾಕ್

ಭೂಮಿ ಗಡಿ ಹಾಕುವುದಿಲ್ಲ, ಮನುಷ್ಯನೇ ಗಡಿ ಹಾಕುತ್ತಾನೆ: ಬಾನು ಮುಷ್ತಾಕ್ ಮೈಸೂರು: ಭೂಮಿ...

ಮೈಸೂರು ದಸರಾ ಮಹತೋತ್ಸವ’ ಉದ್ಘಾಟಿಸಿದ ಸಾಹಿತಿ ಬಾನು ಮುಷ್ತಾಕ್

ಮೈಸೂರು ದಸರಾ ಮಹತೋತ್ಸವ’ ಉದ್ಘಾಟಿಸಿದ ಸಾಹಿತಿ ಬಾನು ಮುಷ್ತಾಕ್ ಮೈಸೂರು: ನಾಡದೇವತೆ ಚಾಮುಂಡೇಶ್ವರಿ...

ಶೈಲಪುತ್ರಿಯ ಆರಾಧನೆ ಹೇಗೆ ಗೊತ್ತಾ ?

ಶೈಲಪುತ್ರಿ ಪೂಜಾ ವಿಧಾನ ಹೇಗೆ ಗೊತ್ತಾ ? ನವರಾತ್ರಿ ಬಂದೆ ಬಿಡ್ತು, ಮೊದಲನೇ...

ಕೂಡಲಸಂಗಮ ಪಂಚಮಸಾಲಿ ಪೀಠಾಧ್ಯಕ್ಷ ಸ್ಥಾನದಿಂದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಉಚ್ಚಾಟನೆ

ಕೂಡಲಸಂಗಮ ಪಂಚಮಸಾಲಿ ಪೀಠಾಧ್ಯಕ್ಷ ಸ್ಥಾನದಿಂದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಉಚ್ಚಾಟನೆ ಬಾಗಲಕೋಟೆ: ಕೂಡಲಸಂಗಮ...