ಟಾಟಾ ಟಿಗೋರ್ ಇವಿ ಭಾರತದಲ್ಲಿ ಬಿಡುಗಡೆಯಾಗಿದೆ.ಇದು XM ಮತ್ತು XT ರೂಪಾಂತರದಲ್ಲಿ ಲಭ್ಯವಿದೆ.ಇದ್ರ ಬೆಲೆ 9.99 ಲಕ್ಷದಿಂದ 10.9 ಲಕ್ಷ ರೂಪಾಯಿಯಾಗಿದೆ.
ಟಿಗೋರ್ ಇವಿಯನ್ನು ಫ್ಲೀಟ್ ಆಪರೇಟರ್‌ಗಳಿಗೆ ಲಭ್ಯಗೊಳಿಸಲಾಗಿದೆ. ವಾಣಿಜ್ಯ ಬಳಕೆಗೆ ಮತ್ತು ಸಾರ್ವಜನಿಕ ಸಾರಿಗೆಯಾಗಿ ಬಳಸುವವರಿಗೆ ಮಾತ್ರ FAME ಸಬ್ಸಿಡಿ ಲಭ್ಯವಾಗಲಿದೆ. ಟೈಮ್ ಇವಿಗೆ ಫೇಮ್ ಇಂಡಿಯಾ ಸ್ಕೀಮ್ ಹಂತ II ರ ಅಡಿಯಲ್ಲಿ 1.62 ಲಕ್ಷ ಸರ್ಕಾರದ ಪ್ರೋತ್ಸಾಹ ಧನ ನೀಡಲಾಗಿದೆ.
ಟಾಟಾದ ಮೊದಲ ಆಲ್-ಎಲೆಕ್ಟ್ರಿಕಲ್ ವಾಹನ ಟಾಟಾ ಟಿಗೋರ್ ಇವಿ XM ಮತ್ತು XT ರೂಪಾಂತರದಲ್ಲಿ ಸಿಗಲಿದೆ.ಬಿಳಿ,ಬೆಳ್ಳಿ ಮತ್ತು ನೀಲಿ ಬಣ್ಣದಲ್ಲಿ ಕಾರು ಲಭ್ಯವಿದೆ.ಮೂಲಭೂತ ಸುರಕ್ಷತಾ ಸಾಧನಗಳಾಗಿ ಡ್ಯುಯಲ್ ಫ್ರಂಟ್ ಏರ್ ಬ್ಯಾಗ್,ಎಬಿಎಸ್,ರಿಯಲ್ ಪಾರ್ಕಿಂಗ್ ಸೆನ್ಸರ್,ಓವರ್ ಸ್ಪೀಡ್ ಅಲಾರಾಂ ಹಾಗೂ ಜುಲೈ 1ರಿಂದ ಜಾರಿಗೆ ಬರಲಿರುವ ಎಲ್ಲ ಸುರಕ್ಷತಾ ನಿಯಮಗಳನ್ನು ಅಳವಡಿಸಲಾಗಿದೆ.ಟೈಗರ್ ಇವಿ ಅನ್ನು 16.2 ಕಿ.ವ್ಯಾ ಬ್ಯಾಟರಿ ಪ್ಯಾಕ್‌ನೊಂದಿಗೆ ಪರಿಚಯಿಸಲಾಗಿದೆ.