ವೆಸ್ಟ್ ಇಂಡೀಸ್ ವಿರುದ್ಧ ಉತ್ತಮ ಪ್ರದರ್ಶನ ತೋರಿದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಗೆ ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗ್ತಿದೆ. ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಧೋನಿ ಆಟಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಈಗ ಕೋಚ್ ರವಿಶಾಸ್ತ್ರಿ, ಧೋನಿ ಆಟಕ್ಕೆ ಬೆನ್ನು ತಟ್ಟಿದ್ದಾರೆ.
ವೆಸ್ಟ್ ಇಂಡೀಸ್ ವಿರುದ್ಧ ಟೀಂ ಇಂಡಿಯಾ ಗೆಲುವು ಸಾಧಿಸಿದ 24 ಗಂಟೆ ನಂತ್ರ ರವಿಶಾಸ್ತ್ರಿ ಟ್ವೀಟರ್ ನಲ್ಲಿ ಫೋಟೋ ಒಂದನ್ನು ಟ್ವಿಟ್ ಮಾಡಿದ್ದಾರೆ. ರವಿಶಾಸ್ತ್ರಿ ಜೊತೆ ಕೊಹ್ಲಿ, ಧೋನಿ ನಿಂತಿರುವ ಫೋಟೋ ಇದಾಗಿದೆ. ಇಬ್ಬರು ವಿಭಿನ್ನ ವ್ಯಕ್ತಿಗಳು. ಚಾಂಪಿಯನ್, ಪ್ರತಿಭಾಶಾಲಿಗಳು ಎಂದು ಟ್ವಿಟ್ ಮಾಡಿದ್ದಾರೆ.
ಪಂದ್ಯ ಮುಗಿದ ನಂತ್ರ ಮಾತನಾಡಿದ್ದ ವಿರಾಟ್ ಕೊಹ್ಲಿ, ಧೋನಿ ಆಟವನ್ನು ಹೊಗಳಿದ್ದರು. ಅವ್ರು ತಂಡಕ್ಕೆ ಅವಶ್ಯಕವೆಂದಿದ್ದರು