ತುಮಕೂರು ಲೋಕಸಭೆ ಕ್ಷೇತ್ರದಲ್ಲಿ ಜೆಡಿಎಸ್ ವರಿಷ್ಠ ದೇವೇಗೌಡರ ಸೋಲಿಗೆ ಗಂಗೆಯ ಶಾಪವೇ ಕಾರಣ ಎಂದು ಬಿಜೆಪಿ ಸಂಸದ ಜಿ.ಎಸ್. ಬಸವರಾಜು ಹೇಳಿದ್ದಾರೆ.ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕು ಬಾಗೂರು ನವಿಲೆ ಸುರಂಗ ಮಾರ್ಗ ಸ್ಥಳಕ್ಕೆ ಭೇಟಿ ನೀಡಿದ್ದ ಅವರು, ತುಮಕೂರು ಭಾಗಕ್ಕೆ ನೀರು ಹರಿಸುವ ಕಾಲುವೆ ವೀಕ್ಷಿಸಿ ಮಾತನಾಡಿದರು.
ದೇವೇಗೌಡರ ಸೋಲಿಗೆ ನಾನಾಗಲಿ, ಜನರಾಗಲಿ ಕಾರಣರಲ್ಲ, ಗಂಗೆಯ ಶಾಪ ಕಾರಣ. ಪ್ರಜಾಪ್ರಭುತ್ವದಲ್ಲಿ ದ್ವೇಷದ ರಾಜಕಾರಣ ಮಾಡಿದವರು ಯಾರೂ ಉಳಿದಿಲ್ಲ. ಸಚಿವ ಹೆಚ್.ಡಿ. ರೇವಣ್ಣ ದುರಾಸೆಯ ಮನುಷ್ಯ. ಜಗತ್ತೇ ಹಾಳಾದರೂ ತಮ್ಮ ಕ್ಷೇತ್ರ ಚೆನ್ನಾಗಿರಬೇಕು ಎಂದುಕೊಂಡಿದ್ದಾರೆ ಎಂದು ದೂರಿದ್ದಾರೆ.
ಒಪ್ಪಂದದ ಪ್ರಕಾರ ತುಮಕೂರು ಜಿಲ್ಲೆಗೆ ಬರಬೇಕಾದ ನೀರನ್ನು ಹರಿಸಬೇಕು. ಆದರೆ ಕಳೆದ ವರ್ಷ ನಮಗೆ ಕಡಿಮೆ ನೀರು ನೀಡಲಾಗಿದೆ.ಇದಕ್ಕೆ ರೇವಣ್ಣನವರೇ ಕಾರಣ ಎಂದು ದೂರಿದ್ದಾರೆ.