ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ 10 ದಿನ ಅಮೆರಿಕಾಗೆ ಖಾಸಗಿ ಪ್ರವಾಸ ಕೈಗೊಂಡಿದ್ದಾರೆ. ಸಿಎಂ ವಿದೇಶ ಪ್ರವಾಸಕ್ಕೆ ಬಿಜೆಪಿ ನಾಯಕ ಕೆ.ಎಸ್. ಈಶ್ವರಪ್ಪ ವ್ಯಂಗ್ಯವಾಡಿದ್ದಾರೆ.ತಾಜ್ ವೆಸ್ಟೆಂಡ್ ಟು ಗ್ರಾಮ ವಾಸ್ತವ್ಯ ಎರಡು ದಿನ, ತಾಜ್ ವೆಸ್ಟೆಂಡ್ ಟು ಅಮೆರಿಕ 10 ದಿನ ಎಂದು ಸಿಎಂ ವಿದೇಶ ಪ್ರವಾಸಕ್ಕೆ ಟ್ವಿಟರ್ ನಲ್ಲಿ ಈಶ್ವರಪ್ಪ ಲೇವಡಿ ಮಾಡಿದ್ದಾರೆ.
ಯಾರಾದರೂ ಪ್ರಶ್ನಿಸಿದರೆ ನೀವೇನು ನನಗೆ ವೋಟ್ ಹಾಕಿದ್ರಾ ಎಂದು ಕೇಳುತ್ತೀರಿ. ಹೀಗೆ ಪ್ರಶ್ನಿಸುವ ನೀವು ಜೆಡಿಎಸ್ ಪಕ್ಷದ ಹೆಸರನ್ನು ಬದಲಿಸಿ. ಜಾತ್ಯತೀತ ಜನತಾದಳ ಬದಲು ಪ್ರಶ್ನಾತೀತ ಜನತಾದಳ ಎಂದು ಹೆಸರಿಡುವಂತೆ ಈಶ್ವರಪ್ಪ ಹೇಳಿದ್ದಾರೆ.