ನಿನ್ನೆ ಇಂಗ್ಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ ರೋಹಿತ್ ಶರ್ಮಾ ಭರ್ಜರಿ ಶತಕ ಸಿಡಿಸಿದ್ದಾರೆ. ಈ ಮೂಲಕ ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ 25 ಶತಕ ಪೂರೈಸಿ, ಎಬಿಡಿ ವಿಲಿಯರ್ಸ್, ಕ್ರಿಸ್ ಗೇಲ್ ಹಾಗೂ ಕುಮಾರ ಸಂಗಕ್ಕರ ದಾಖಲೆಯನ್ನು ಸರಿಗಟ್ಟಿದರು.
ತಮ್ಮ 212 ನೇ ಪಂದ್ಯದ 206 ನೇ ಇನ್ನಿಂಗ್ಸ್ ನಲ್ಲಿ ರೋಹಿತ್ ಶರ್ಮಾ 25 ಶತಕಗಳನ್ನು ಬಾರಿಸಿದ್ದಾರೆ. ಈ ಮೂಲಕ ಏಕದಿನದಲ್ಲಿ ಅತಿ ಹೆಚ್ಚು ಶತಕಗಳನ್ನು ಬಾರಿಸಿದ ಸಾಲಿನಲ್ಲಿ ಆರನೇ ಸ್ಥಾನಕ್ಕೆ ಜಿಗಿದಿದ್ದಾರೆ. ಭಾರತದ ಪರ ಸಚಿನ್ ತೆಂಡೂಲ್ಕರ್ (49) ಹಾಗೂ ವಿರಾಟ್ ಕೊಹ್ಲಿ (41) ಶತಕಗಳನ್ನು ಸಿಡಿಸಿದ್ದಾರೆ.ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್ (30), ಸನತ್ ಜಯಸೂರ್ಯ (28) ಹಾಗೂ ಹಾಶೀಮ್ ಆಮ್ಲಾ (27) ಶತಕಗಳನ್ನು ಗಳಿಸಿದ್ದಾರೆ.