ಸ್ಥಳೀಯ ಕಾರ್ಯಕ್ರಮವೊಂದರಲ್ಲಿ ಶಾಸಕ ಕೆ ಮಹದೇವ್ ಅವರು ರಮೇಶ್ ಜಾರಕಿಹೊಳಿ ವಿರುದ್ಧ ಈ ಗಂಭೀರ ಆರೋಪ ಮಾಡಿದ್ದಾರೆ. ನನಗೂ ಬಿಜೆಪಿಯವರು 30 ರಿಂದ 40 ಕೋಟಿ ರೂಪಾಯಿ ಹಣವನ್ನು ಕೊಡಲು 3 ಬಾರಿ ನನ್ನ ಬಳಿ ಬಂದಿದ್ದರು. ಆದ್ರೆ ನಾನು ಬೇಡವೆಂದು ತಿರಸ್ಕರಿಸಿದೆ. ಹಣಕ್ಕಾಗಿ ನಮ್ಮನ್ನು ಮಾರಿಕೊಳ್ಳಲ್ಲ ಅಂತಾ ಮಹದೇವ್ ಹೇಳಿದ್ದರಂತೆ.
ಎಲ್ಲ ಶಾಸಕರನ್ನು ಮುಖ್ಯಮಂತ್ರಿ ಅವರು ಒಟ್ಟಿಗೆ ಕರೆದೊಯ್ಯಬೇಕು. ಇಲ್ಲದಿದ್ದರೆ ರಾಜೀನಾಮೆ ಕೊಡುವುದಾಗಿ ಸಿಎಂಗೇ ಬೆದರಿಸುತ್ತಾರೆ. ಇಂದು ನಿರಂತರವಾಗಿ ಇಂತಹ ಪ್ರಸಂಗಗಳು ನಡೆಯುತ್ತಿವೆ. ದುಡ್ಡು ಕೊಡದಿದ್ದರೆ ರಾಜೀನಾಮೆ ಕೊಡ್ತೇವೆ ಅನ್ನೋದು ಸಾಮಾನ್ಯವಾಗಿಬಿಟ್ಟಿದೆ ಎಂದು ಶಾಸಕ ಮಹದೇವ್ ಆತಂಕ ವ್ಯಕ್ತಪಡಿಸಿದರು.